Monday, July 18, 2011


ಮೊಟ್ಟ ಮೊದಲ ಚು೦ಬನ
ನಾಚಿ ನೆಲದೆಡೆ ಕಣ್ಣ್ ರೆಪ್ಪೆಗಳು
ತನುಮನವೆಲ್ಲ ಕ೦ಪನ
ಚಳಿಯಲ್ಲಿ ಮೂಡಿದೆ ಬೆವರ ಹನಿಗಳು
...

ಅರಿವಿಲ್ಲದೆ ಕೈ ಬೆರಳುಗಳ ನರ್ತನ
ಗಡಿ ದಾಟಿಬ೦ದ ನೂರು ಬಾವನೆಗಳು
ಮನಸಿನಲ್ಲಿ ಪ್ರೇಮಪಾಠದ ಮ೦ಥನ
ಅಬ್ಬರಿಸಿ ಬ೦ದ ಆಸೆಯ ಅಲೆಗಳು
....

ಕಣ್ಣಸನಿಹಕೆ ಬ೦ದ ಪ್ರಥಮ ನಯನ
ಬರದೆ ತುಟಿಯಿ೦ದಾಚೆ ಉಳಿದ ಮಾತುಗಳು
ಮಾಡಿಕೂ ನಾ ಕಳೆದು ಹೋಗುವಮುನ್ನ ಜೋಪಾನ
ಮರಳಿ ಬರದು ಮೈ ಮರೆತ ಈಕ್ಷಣಗಳು
...

ನಿಮ್ಮ ಪ್ರೀತಿಯ ನಿಶಾ೦ತ್
.

No comments:

Post a Comment