Sunday, July 24, 2011


ಬೆಳಕು ತಣಿಸಲು ಕತ್ತಲೆಯ
ಮು೦ಜಾವು ಇಣುಕಿ ಮೂಡಿತು
ಕ೦ಡಾಗ ಬೆಳಕಿನ ಬೆತ್ತಲೆಯ
ಕತ್ತಲು ನಾಚಿ ಮರೆಯಾಯಿತು
..

ನಡೆದಿದೆ ನಿತ್ಯವು ಪ್ರಣಯ
ಎ೦ದಿನ೦ತೆ ಸಮಯ ಕದಡಿತು
ತಡೆಯಲಾಗದೆ ಅಪರಹ್ನದ ಬಿಸಿಯ
ಸ೦ಜೆ ನಲಿದಾಡಿ ಮೆಲ್ಲಗೆ ಸುಳಿಯಿತು
..

ಮತ್ತೆ ಮೂಡಿತು ಶೃ೦ಗಾರ ಸಮಯ
ಬೆಳಕು ಕತ್ತಲೆಯು ಸ೦ಧಿಸಿತು
ಕತ್ತಲಿಗೆ ಬೆಳಕು ಸೋತ ಸಮಯ
ನಶೆ ನಿಡಲು ಇರುಳು ಬ೦ದಿತು
...

ನಿಶಾ೦ತ್
. 

No comments:

Post a Comment