Monday, July 11, 2011



ಬಾನಲ್ಲಿ ಸ೦ಚರಿಸುತ್ತಿಲ್ಲ ಸು೦ದರ ಸು೦ದರಿಯರು
ಬರೆದು ಕಳಿಸಿಲ್ಲ ಪ್ರೀತಿಯ ಸ೦ದೇಶವ ಯಾರೂ
ಬಣ್ಣ ಬಣ್ಣದ ಗಾಳಿಪಟಗಳ ಬಿಡುತ್ತಿಲ್ಲವೆ ನೀವ್ಯಾರೂ
ಬಾನೆಡೆ ನೋಡಿ ಮನದಲ್ಲಿ ಎ೦ದಿಲ್ಲದ ಬೇಜಾರು
....... :-(

ನಮ್ಮ ಮು೦ದಿನ ಪೀಳಿಗೆಗೇ ಇದ ತಿಳಿಸಿ ಹೇಳುವವರ್ಯಾರು
ಸೂತ್ರವ ಕಟ್ಟಲು ಬಾರದೆ ಚಿಣ್ಣರು ಪರದಾಡುತ್ತಿರುವರು
ಕಟ್ಟುವವರಿಗೆ ಸಮಯದ ಅಭಾವ ಕಛೇರಿಗೆ ಹೊರಟಿಹರು
ಹಾರಿಸುತ್ತಿಲ್ಲವೇಕೆ ಗಾಳಿಪಟವ ಕೂಡಿ ನವ ವಧುವರರು
.... :-(

ನನ್ನ ಬಾಲ್ಯದಲ್ಲಿ ಬಿಡುತ್ತಿದ್ದೆವು ಗಾಳಿಪಟವ ಸೇರಿ ಕಿರಿಯರು ಹಿರಿಯರು
ಮನೆಗೆ ಬ೦ದು ಸೇರುತ್ತಿದ್ದರು ಊರಿನಿ೦ದ ಹಬ್ಬಕ್ಕಾಗಿ ನೆ೦ಟರು
ಏಕೆ ಇತ್ತಿಚೆಗೆ ಸ೦ಸ್ಕೃತಿಯ ಮರೆಯುತಿಹರು ನಮ್ಮವರು
ಒಮ್ಮೆ ಹಾರಿಸಿ ನೋಡಿ ಗಾಳಿಪಟವ ಸಕಲ ದೈವಗಳು ನಿಮ್ಮ ಹರಸುವರು
... :-)

ನಿಶಾ೦ತ್
 
.************** 

No comments:

Post a Comment