Tuesday, October 11, 2011

ನನ್ನೆದೆಯ ಮರಿಗುಬ್ಬಚ್ಚಿ
ಮಾಡಿರುವೆ ಜೀವಕ್ಕಿಂತ ಜೋಪಾನ
ಹಿತವಾಗಿ ನುಡಿದಿದೆ ಈ ಮನ
ನಿನಗಾಗಿಯೆ ನನ್ನ ಜನನ


ನಲ್ಲೆ ನನ್ನಗಲಿ ನಿನಾಗದಿರು
ಕಗ್ಗತಲಿನ ಸುಂದರ ಸ್ವಪ್ನ
ಮಧುರ ಮನಸ ಮಾಡದಿರು
ಎಂದು ಮೌನ ಸ್ಮಷಾನ


ಎಂದೆಂದಿಗೂ ನಿನ್ನದೆ
ಈ ತನುಮನ ಜೀವನ
ನನ್ನ ನಿ ಮರೆತರೆ ನಾನಾಗಿ
ಬಿಡುವೆ ಮಧಿರೆಯ ದಾಸ

ನಾ ಹೇಳುವುದಿಲ್ಲ ಎಂದೂ
ನಿ ಮಾಡಿದೆ ಎಂದು ಮೊಸ
ಕೊಡಿಟ್ಟಿರುವೆ ನಮಗಾಗಿ
ಸುಂದರ ಬದುಕಿನ ಕನಸ
ಹರಿಯದೆ ಹೊರ್‍ಟಿರುವೆಯಾ
ನಿ ಈ ಪ್ರೀತಿ ಪೂರಿತ ಮನಸ
ತೊರೆಯ ಬೇಡ ನನ್ನ ಬಾಲೆ
ಮರೆಯ ಬೇಡ ಪ್ರೀಯ ನಲ್ಲೆ


ನಿನಗೂ ತಿಳಿದಿದೆ ಬದುಕಲಾರೆ
ನಿನ್ನ ಬಿಟ್ಟು ಒಂದು ಕ್ಷಣ
ನಿನಗಾಗಿಯಲ್ಲವೆ ನೊಂದರು
ಮಿಡಿಯುತ್ತಿರುವುದು ಈ ಪ್ರಾಣ


ಇಂದೆಕೆ ಬಡಬಡಿಸಿ ಮಾತನಾಡುವ
ತುಟಿಗಳಲಿ ಎಂದಿಲ್ಲದ ಮೌನ
ನಾ ನಲ್ಲ ನಿನ್ನ ಮೌನವ
ತಿಳಿದುಕೊಳ್ಳುವಷ್ಟು ಜಾಣ

ಕೇಳೆ ನನ್ನುಸಿರ ಮಾತ
ಉಳಿಯಲಾರೆ ನಾನಾಗಿ ನಿನ್ನ ಸಂತ


ನಿಶಾಂತ್.ಏ
ನಮ್ಮಿಬ್ಬರ ನೋಟಗಳ ಮಿಲನ
ನನ್ನೆದೆಯಲಿ ನಿನ್ನ ಪ್ರೀತಿಗೆ ಜನನ
ನಿನ್ನೆದುರು ನಿಲ್ಲಲು ತುಟಿಗಳಲಿ ಕಂಪನ
ಕಾಣದೀದ್ದಾಗ ನಿನ್ನ ಮನದಲ್ಲಿ ನಿರವಮೌನ
ಕಾಣಲುಕಾದೆ ಕಣ್ಮುಚ್ಚದೆ ನಿನ್ನ ಕಣ್ಣರೆಪ್ಪೆಗಳಾಲಿಂಗನ
ಒಂದೆ ನೊಟಕ್ಕೆ ನನ್ನ ನಿ ಕೆರಳಿಸಿ ಮರೆಯಾದದ್ದು ಸರಿನಾ?


ನಿನ್ನ ಕಣ್ಣರೆಪ್ಪೆಗಳಲಿ ಕುಳಿತು ಕನಸಾಗಿ ಬರಲೆ
ನೀಳ ಮೂಗಿನಮೇಲೆ ಕೋಪವಾಗಿ ಮೊಡಲೆ
ಮುದ್ದುಕೆನ್ನೆಗೆ ಖುದ್ದು ಗುಳಿಯಾಗಿ ಬಿಡಲೆ
ಕೆಂಗುಲಾಬಿ ತುಟಿಗಳ ಸಿಹಿನಗೆಯಾಗಿ ಸುಳಿಯಲೆ
ನಿನ್ನ ಗಲ್ಲದಮೇಲಿನ ಕಡುಗಪ್ಪು ಚುಕ್ಕಿಯಾಗಲೆ


ನನ್ನೆದುರಿನ ದರ್ಪಣದಿ ನೀನೆ ಮೂಡುವೆ
ನಿನ್ನೆದೆಯ ಪ್ರೀತಿಗೆ ನಾನೆ ಸಮರ್ಪಣೆಯಾಗಿರುವೆ
ಬೇಡವೆಂದರು ಕನಸಿಗೆ ಸದ್ದುಮಾಡದೆ ಬರುವೆ
ನೋಡದಿದ್ದರು ನಿನ್ನ ನೆನಪಾಗಿ ಸುಳಿದುಕಾಡುವೆ
ನಿನಗಾಗಿ ನಿನ್ನಪ್ರೀತಿಯಲಿ ಕರಗಿಹೋಗುವೆ


ನಿನ್ನ ನಿಶಾಂತ್.ಏ
ಪ್ರೀತಿಯ ಕಣ್ಣಿಗೆ
ಸೋತ ಮೊಹನ ನಾ
ನಿನ್ನೆಜ್ಜೆಯ ಮಣ್ಣಿಗೆ
ಮೊಹಿತ ಮಾಧವ ನಾ


ನಿನ್ನ ಕಣ್ಣೊಳಗೆ
ಬಿಂಬಿತ ಚಂದಿರ ನಾ
ನೀ ನನ್ನೆದೆಯೋಳಗೆ
ತುಂಬಿದ ಬೆಳದಿಂಗಳೆನಾ,,


ನಿನ್ನೆರಡು ನುಡಿಗೆ
ಮರುಳಾದ ಮುರಳಿ ನಾ
ಅದರುತ್ತಿರುವ ತುಟಿಗೆ
ಚುಂಬಿತ ಕೊಳಲು ನಾ,,


ಕಾದಿರುವೆ ನಿನಗೆ
ಹೊಳೆವ ಸುಂದರಾಂಗ ನಾ
ವಿರಹದರಿವಿಲ್ಲ ನನಗೆ
ಸ್ತ್ರೀಪ್ರೀಯ ಗೋಪಿಲೋಲ ನಾ

ಪ್ರೀತಿಯ ಹೆಣ್ಣಿಗೆ
ಮಣಿದ ಶ್ರೀಕಾರನ
ನಿನ್ನ ಕನಸಿನೂರಿಗೆ
ಸುಳಿದ ತುಂಟ ಕೃಷ್ಣ ನಾ

ನಿನ್ನ ಮನದೊಳಗೆ
ತಣಿದಿರುವ ಮಧನ ನಾ
ಮನಸೋತೆ ನಿನಗೆ
ತುಡಿಯುತ್ತಿರುವ ಮನ್ಮಥ ನಾ

ಕೃಷ್ಣ ಪ್ರೀಯಾ ನಿಶಾಂತ್.ಏ
ನಿನ್ನ ಮೊದಲ ನೋಟಕೆ
ಮಿಡುಕಾಡದೆ ನಿಂತೆ
ನಿನ್ನ ಕಣ್ಣಿನಾಟಕೆ
ತಡಮಾಡದೆ ಸೋತೆ


ನೀ ನಡೆದಾಡುವ ಹಾದಿಗೆ
ಕನಸಿನ ಹೂ ಮಳೆ
ಹಿಂಪು ನೀಡಿದೆ ಕಿವಿಗೆ
ಸದ್ದುಮಾಡುವ ನಿನ್ನ ಕೈ ಬಳೆ


ನನ್ನ ನಾನೆ ಮರೆತು
ನಿನ್ನನ್ನೆ ಹರಸಿ ಬರಲು
ಕೇಳಿದೆ ನಿನ್ನೆಜ್ಜೆಯ ಗುರುತು
ಹುಡುಕಬಲ್ಲೆಯ ಎಂಬ ಸಾವಲು



ನಿನಗಾಗಿ ಹುಡುಕಿ ಸಾಕಾಗಿ
ಧಣಿದು ನೊಂದು ಮಲಗಲು
ನಲಿದಾಡಿ ಧುಮ್ಮಿಕ್ಕಿ ಸೊಗಸಾಗಿ
ಮೊಹಿಸಿ ನಗುತ ನಿ ಬರಲು


ಧಣಿವೆಲ್ಲ ಮಣಿದು ಮಾಯವಾಗಿ
ನನ್ನ ಕಂಗಳು ತಣಿಯಲು
ದಿನವೆಲ್ಲ ನೀ ನನ್ನ ಜಗವಾಗಿ
ನಾ ನಗುತ ಸಮಯ ಕಳೆಯಲು


ನನ್ನ ಪ್ರೀತಿಗೆ ಬೆರಗಾಗಿ
ನನ್ನನ್ನೆ ದಿಟ್ಟಿಸಿ ನೋಡಲು
ನಾ ತೀರ ನಿ ಸಾಗರವಾಗಿ
ನಿನ್ನ ಪ್ರೀತಿ ಅಲೆಯಾಗಿ ನನ್ನಸೆರಲು,,

ನಿಮ್ಮ ನಿಶಾಂತ್.ಏ
ನನ್ನ ಮೌನದ ಮಾತು
ನಿನಗೆ ಕೆಳಲಿಲ್ಲವೆ
ಕಣ್ಣಿನಲ್ಲೆ ಮಾತನಾಡಿ
ಹೋರಟು ಹೋದವಳೆ


ಮುಚ್ಚಿದ ಕಣ್ಣಲ್ಲಿ
ನಲಿದು ಬರುವವಳೆ
ಕನಸಿನಲಿ ಕದ್ದು ನನಗೆ
ಮುತ್ತು ನೀಡಿದವಳೆ


ಎದುರು ನಿಂತದ್ದು ನಾನೆ
ನಿನಗೆ ಹರಿವೆ ಇಲ್ಲವೆ
ಕರೆದು ನನ್ನ ಭ್ರಮಿಸಿದ್ದು
ನಿನಗೆ ಪ್ರೀತಿಯಲ್ಲವೆ


ಬೆನ್ನು ತೋರಿ ತಿರುಗಿ
ನೋಡಿದ ನೋಟ ನಿನ್ನದಲ್ಲವೆ
ಮೋಹಿಸಿ ಮಾಡಿದ ಪಾಠ
ನಿನಗೆ ನೆನಪೆ ಇಲ್ಲವೆ


ಕಂಕಣ ಕೂಡಿ ಬರಲು
ತೊರೆದು ನನ್ನ ಹೊರಟವಳೆ
ಎನ್ನ ಮನದ ಮನೆಯ
ಮುದ್ದು ಮಡದಿ ನೀನಲ್ಲವೆ..


ಕದ್ದು ಮನಸಿನಲ್ಲಿಳಿದು
ಪ್ರೀತಿಯ ಹಿರಿದು ಕೊಂದವಳೆ
ಪರಸತಿಯಾಗಿ ಹೊರಟಾಗಲು
ನನ್ನ ಪ್ರೀತಿ ತಿಳಿಯಲಿಲ್ಲವೆ


ನಿಶಾಂತ್.ಏ


ನಿನ್ನ ನೆನಪೆ ಕಾಡಿದೆ ನನಗೆ
ನಿನ್ನಮಾತು ಸಾಲದು ಎನಗೆ
ಪ್ರೀತಿಯಾ ಅಲೆಯಲಿ ಸಿಲುಕಿದೆನಾನು
ಪ್ರೇಮದಿ ಸೆಳೆಯಲು ಬಾರೆಯನೀನು,,


ತೀರದಿ ಮೂಡಿದ ಮರಳಿನಗೊಂಬೆ
ಸುಳಿದು ಮಾಡಿದೆ ಹೆಜ್ಜೆಯ ಗುರುತು
ಬಾಳಲಿ ಹೇಗೆ ನಿನ್ನನು ಮರೆತು
ನನ್ನೆದೆ ತುಂಬ ನಿನ್ನದೆ ಬಿಂಬ,,


ಕರೆಯಾದೆ ಕನಸಿಗೆ ಬರುವೆ ನೀನು
ಬೆಳಕಿನ ಬದುಕಲಿ ಕರಗುವೆ ಏನು?
ಅಗಲಿ ಹೋಗಲು ಕಾರಣವೇನು
ಬಣ್ಣದ ಬದುಕಿಗೆ ಪ್ರೇರಣೆ ನೀನು,,


ಮರಳಿ ಬಾರೆಯ ನನ್ನೆದೆ ಗುಡಿಗೆ
ಮಾತನು ಮರೆತ ಮೌನಿಯು ನಾನು
ಕಣ್ಣೆ ಇಲ್ಲವೆ ಹೆಣ್ಣೆ ಪ್ರೀತಿಗೆ
ನಿನ್ನ ನೆನಪಲೆ ಬದುಕುವೆ ನಾನು,,,


ನಿಮ್ಮ ನಿಶಾಂತ್.ಏ



ಬಾಳಿನಲ್ಲಿ ಬಯಸಿದಾಗ
ಬಾರದೆ ಹೋದೆಯಾ
ನೆತ್ತರ ಹೊಸೆದುಬಸಿದಾಗ
ಕಾಣದೆ ನಿಂತೆಯಾ,,


ಮಾತುಬರದೆ ತಡವರಿಸುವಾಗ
ಧನಿಯಾಗಿ ಬಂದೆಯಾ
ಎನೂ ಮಾಡಲೆಂದು ಚಡಪಡಿಸುವಾಗ
ಧೃಡತೆ ನಿನಾದೆಯಾ,,


ಕದ್ದುನೊಡಲು ಬರುವಾಗ
ಮರೆಯಾಗಿ ಹೋದೆಯಾ
ಸನಿಹ ಸುಳಿವಾಗ
ದೂರ ಸರಿದು ನಿಂತೆಯಾ,,


ಎಕಾಂತವಾಗಿ ಕುಳಿತಾಗ
ನಲಿದಾಡಿ ಬರುವೆಯಾ
ಜೊತೆಗಿರಲು ಬಯಸುವಾಗ
ಎಕಾಂಗಿಯಾಗಿ ಹೋದೆಯಾ,,


ಕನಸಲ್ಲಿ ಕಾಣುವಾಗ
ಕರಗಿ ಹೋದೆಯಾ
ಕಂಬನಿ ಮಿಡಿವಾಗ
ಕಣ್ಮರೆಯಾಗಿ ಹೋದೆಯಾ,,


ಕಂಪಿಸಿದೆ ತನುವೀಗ
ಒಂಟಿಮಾಡಿ ಹೋದೆಯ
ನನಗಾಗಿ ಮರಳಾಗುವಾಗ
ಮಣ್ಣಾಗಿ ಹೋದೆಯಾ,,


ನಿನಗಾಗಿ ಕಾದುಕುಳಿತಿರುವಾಗ
ಮಸಣದ ಹಾದಿ ಹಿಡಿದೆಯಾ,,
ನಿಟ್ಟುಸಿರು ಬಿಡುವಾಗ
ನಿನ್ನುಸಿರ ನಿ ಮರೆತೆಯಾ,,,,


ನಿಶಾಂತ್.ಏ

ತನುವು ಚಳಿಗೆ ನಡುಗಿ
ಆಲಿಂಗನವ ಬಯಸಿದೆ
ಹುಡುಕಿದೆ ಕಣ್ಣು ಹುಡುಗಿ
ನಿನ್ನ ಸಾನಿಧ್ಯವು ಬೇಕಿದೆ


ಬೆಳಕಂತೆ ಕಂಡ ಬೆಡಗಿ
ಒಮ್ಮೆ ಸಂದಿಸಬೇಕಿದೆ
ಬರುವಾಗ ನೀನು ತಲೆಬಾಗಿ
ನೋಡಬೇಕು ಕಣ್ಮುಚ್ಚದೆ


ಹೇಳಬಲ್ಲೆ ನಾ ಕೂಗಿ ಕೂಗಿ
ನಾ  ಬಾಳಲಾರೆ ನೀನಿಲ್ಲದೆ
ನನ್ನೆದೆಯ ನೋವನೀಗಿ
ನೀ ಇಂದಾದರು ಬರಬಾರ್‍ಅದೆ,,


ಕಾಯುತ್ತಿರುವೆ ನಿಶಾಂತ್. ಏ

Monday, October 10, 2011



ಕಣ್ಣ ಕಂಬನಿಯು ನೀನೆ
ಮೊಹಿಸಿ ಅಗಲಿ ಹೊದೆಯ
ತನುವಿನ ಬಿಸಿಯುಸಿರು ನೀನೆ
ಮರೆಯಾಗಿ ನಿಂತೆಯಾ....


ನನ್ನೆದೆ ಪ್ರೀತಿಗೆ ಜನನಿ
ನನ್ನ ಸ್ಮರಿಸದೆ ಹೊದೆಯ
ಅಸ್ಪಷ್ಟವಾಗಿರುವ ಕಾಮಿನಿ
ಪ್ರತಿರಾತ್ರಿ ಕನಸಲ್ಲಿ ಸುಳಿವೆಯಾ..


ಕಳೆದುಕೊಂಡಿರುವೆ ನನ್ನೆ ನಾನೆ
ಮರೆತೆಯ ನೀ ನನ್ನೆದೆಯ
ಜೀವಜೀವದ ಗೆಳತಿ ನೀನೆ
ನಿರಾಕರಿಸುವೆಕೆ ನನ್ನಪ್ರೀತಿಯ..?


ನಿಮ್ಮ ನಿಶಾಂತ್. ಏ

Thursday, September 1, 2011



ಮಳೆಯಲ್ಲಿ ನೆನೆದು
ಚಳಿಯಲ್ಲಿ ನಡುಗಿ
ಚ೦ದ್ರನ ಬಯಸದಿರು ಹುಡುಗಿ

ಬಿಂಬವ ಕಂಡು
ಬಯಸದಿರು ಲಲನೆ
ತೀರದೆಂದೂ ನಿನ್ನ ಕಾಮನೆ


ನಾ ಸುಂದರ ಮಿಂಚು
ನಯನ ಮನ ಮೋಹಕ
ನನ್ನ ಸನಿಹ ಪ್ರಾಣಕ್ಕೆ ಹಂತಕ


ಮತಿ ಇಲ್ಲದ ಹೆಣ್ಣು
ಮುಸುಕು ಮುಚ್ಚಿದ ಬದುಕು
ಬೇಡ ನನಗೆ ಪ್ರೀತಿಯ ಸೋಂಕು

ನಿಶಾಂತ್,
 



ಮನಸ್ಸೆಂಬ ಸಮುದ್ರದಲ್ಲಿ
ನಿನ್ನಪ್ರೀತಿಯ ಮಂಥನ
ಕಂಪಿಸಿ ಚಡಪಡಿಸಿದೆ ಮನ


ಭಾವನೆಗಳೆಂಬ ಅಲೆಗಳಲಿ
ಕುಳಿತುಬಂದ ಮತ್ಸಕನ್ಯೆ
ಎಂದೆಂದಿಗೂ ನನಗೆ ನೀ ಅನ್ಯೆ


ಬೇಕುಬೇಡವೆಂಬ ಸೆಳೆದಾಟದಲ್ಲಿ
ನೀ ನನ್ನ "ನಲ್ಲ" ಎಂದದ್ದು ವಿಷವಂತೆ
ನಾ ನಿನ್ನನ್ನೊಲ್ಲೆ ಎಂದದ್ದು ಅಮೃತವಂತೆ


ಮಿತಿ ಮೀರಿದ ಹೊರಾಟದಲಿ
ನಿನ್ನೆಡೆಯ ಸೆಳೆತವೆ ಅಸುರರು
ಧಿಕ್ಕರಿಸಿದ ಭಾವವೆ ಸುರರು


ತೃಣವು ಲಭಿಸದು ಪಾಲುಪ್ರೀತಿಯಲಿ
ನೀ ನನಗಾಗಿ ಕಾದರೆ ಹೆಣ್ಣೆ
ನನಗಿಷ್ಟ ಭೂತಾಯಿ ಮಡಿಲಿನ ಮಣ್ಣೆ


ನಿನ್ನ ಭಾವನೆಗಳಿಗೆ ನಾ ಏಟುಕದ ತಾರೆ ಕ್ಷಮೆ ಇರಲಿ
ನಿಶಾಂತ್.

Wednesday, August 31, 2011


ಮೂಷಿಕವೇರಿ ಬರುವ ಗಣಪ
ಲಡ್ಡುಮೊದಕ ಇವನಿಗೆ ನೈವೆದ್ಯ
ಮಾಡಿತನ್ನಿ ವಿಧವಿಧಖಾದ್ಯ
ನೀ ಹರಸಿ ಹರುಷದಿ ಬಾರಪ್ಪ


ಸಿದ್ಧಿಬುದ್ಧಿಗೆ ಒಡೆಯನು ನೀನಪ್ಪ
ನೀನೆ ಸಕಲವಿದ್ಯೆಗೆ ಅಧಿಪತಿ
ಸಂಕಷ್ಟ ನಿವಾರಣ ಗಣಪತಿ
ಭಕ್ತಿಗೆ ಒಲಿದು ನಲಿದು ಬಾರಪ್ಪ


ಎಲ್ಲೆಲ್ಲೂ ಕಾಣುವೆ ನಿನ್ನೆ ನನ್ನಪ್ಪ
ವಿಘ್ನಗಳ ಅಂತ್ಯ ವಿಘ್ನೇಶ್ವರ
ಶುಭಕೆ ಆದಿ ಗಣೆಶ್ವರ
ಎಲ್ಲರಿಗೂ ದರ್ಶನವ ನೀಡಪ್ಪ


ಗಣಪ ಗಣಪ ಗಣಪ ಗಣಪ
ಎಂದು ಕೂಗಿ ಮೈಮರೆವೆ ನಾನು
ಪದಪದವಾಗಿ ಮುಡಿರುವೆ ನೀನು
ಗಣಪ ನಮ್ಮ ಎಂದೆದೂ ಕಾಪಡಪ್ಪ

ಗಣೆಶ ಹಬ್ಬದ ಹಾರ್ಧಿಕ ಶುಭಾಶಯಗಳು ಎಲ್ಲರನ್ನು ಹರಸಿ ಹಾರೈಸಲಿ ಗಣಪತಿ
ನಿಮ್ಮ ನಿಶಾಂತ್.
 

Tuesday, August 30, 2011




ಮಹಾಮಾತೆ ಗೌರಿ
ಭಕ್ತರು ಕರೆದಿಹರು ನಿನ್ನ
ಮನಒಲಿದು ಬಂದರೆ ಚೆನ್ನ
ನಗುತಲಿ ಬಾಮ್ಮ ಪರಮೇಶ್ವರಿ

ನಿನಗಾರು ಸಾಟಿ ಹೇ ಶಂಕರಿ
ಮಂದಹಾಸವ ಎಲ್ಲೆಲ್ಲೂ ಬೀರಮ್ಮ
ಸರ್ವರಿಗೂ ಸುಖಃಶಾಂತಿ ನೀಡಮ್ಮ
ಬಾರಮ್ಮ ನಿನ್ನೊಮ್ಮೆ ಮಾಹೇಶ್ವರಿ

ಸಕಲವು ತಿಳಿದಿರುವ ಸರ್ವೇಶ್ವರಿ
ನನ್ನ ಬದುಕು ಮುಗಿಯುವ ಮುನ್ನ
ಒಮ್ಮೆಬಂದು ಸಲಹಮ್ಮ ನನ್ನ
ಪೂಜೀಪೆನು ನಿನ್ನ ದೇವೀಶ್ವರಿ

ಜಗದಂಬ ನೀ ಜಗದೀಶ್ವರಿ
ಭಕ್ತಿಯ ಪೂಜೆಗೊಲಿದು ಬಾರಮ್ಮ
ಭಕ್ತರಿಗೆ ಮುಕ್ತಿಯ ನೀಡಮ್ಮ
ಪರ್ವತೇಶ್ವರಿ ಶ್ರೀ ಚಾಮುಂಡೇಶ್ವರಿ


ನಿಶಾಂತ್ .


Saturday, August 27, 2011




ಒಂದೆ ನೊಟಕೆ ಕಳೆದುಹೊದೆ
ಕಂಪಿಸಿದ ಮನಸು ನಿಯಂತ್ರಿಸಿ
ನೊಡಲು ನೀನೆಲ್ಲಿ ಮರೆಯಾದೆ
ಒಂದೊಮ್ಮೆ ಮನಸಿಗೆ ಚುಂಬಿಸಿ

ಅಂದು ಕಣ್ಣೆದುರು ನಿಂದುಹೋದೆ
ಬದುಕಿದೆ ಜೀವ ನಿನ್ನಸ್ಮರಿಸಿ
ಮತ್ತೊಮ್ಮೆ ನಲಿದು ಬರಬಾರದೆ
ನಿನಗಾಗಿ ಕಾದಿರುವೆ ನಿನ್ನ ಹರಸಿ

ನನ್ನ ಪ್ರೀತಿಯ ಹುಡುಗಿ ನೀನಾದೆ
ಹೊದ್ದದಾದರೂ ಎಲ್ಲೆಗೆ ನನ್ನಮರೆಸಿ
ನಯನಗಳು ಹಾದಿಯ ಕಾದಿದೆ
ಹೊರಡು ಪ್ರೇಮಪಾಠವ ಕಲಿಸಿ

ಹೊಗುವೆ ಎಲ್ಲಿ ಮನಸಿಗೆ ಬಾರದೆ
ಕಾದಿರುವೆ ನನ್ನ ಹೃದಯವನ್ನಲಂಕರಿಸಿ
ಬಂದುಬಿಡು ಗೆಳತಿ ತಡಮಾಡದೆ
ಕನಸಿನೊರಿಗೆ ಮಗದೊಮ್ಮೆ ದಾವಿಸಿ

ನಿಮ್ಮ ಪ್ರೀತಿಯ ನಿಶಾಂತ್.
 

Friday, August 26, 2011



ಒಂಟಿಯಾಗಿ ಒಬ್ಬನೆ ಕುಳಿತು
ಸಾಗದಸಮಯವ ನೂಕುತ್ತ
ಸತ್ತ ಶವದಂತೆ ಕಣ್ಬಿಟ್ಟು
ಗಡಿಯಾರವನ್ನೆ ದಿಟ್ಟಿಸುತ್ತ

ಎಲ್ಲ ಕೆಲಸಗಳನ್ನು ಬದಿಗಿಟ್ಟು
ತೊಂದರೆ ಕೊಟ್ಟವರನ್ನು ನಿಂದಿಸುತ್ತ
ಕಾಡುವ ನೆನಪುಗಳ ಮೇಲೇಕೊ ಸಿಟ್ಟು
ಮೌನಿಯಾಗುವೆ ನೊಡಿ ಸುತ್ತಮುತ್ತ

ನನ್ನೆಲ್ಲ ಆಸೆಗಳ ಬಲಿಕೊಟ್ಟು
ನನ್ನದಲ್ಲದ ಬದುಕು ನಡೆಸುತ್ತ
ನನ್ನನ್ನೆ ನಾ ಮರೆಯಾಗಿಸಿಟ್ಟು
ಕುಳಿತೆ ನೊವಿನೊಳು ಬೆಯುತ್ತ

ಹುಟ್ಟಿನಿಂತ ಭಾವನೆಗಳಿಗೆ ಕೊಳ್ಳಿಇಟ್ಟು
ಕಣ್ಮುಚ್ಚಿ ತಿಲಾಂಜಲಿಯ ಬಿಡುತ್ತ
ಪ್ರೀತಿಯ ಅಂತರಾಳಾದಿ ಹುದುಗಿಸಿಟ್ಟು
ಒಬ್ಬನೆ ನಡುಗಿನೊಂದು ಬೆವರುತ್ತ

ಬದುಕಿನ ಹೆಜ್ಜೆಗಳನಿಟ್ಟು
ಪ್ರತಿ ಕ್ಷಣವು ಸತ್ತುಬದುಕುತ್ತ
ಜೀವನವೆ ನಿನ್ನದೆಂದು ದೆವರಿಗೆ ಕೊಟ್ಟು
ಬದುಕುತ್ತಿರುವೆ ಮುಗಿಲೆಡೆ ನೊಡುತ್ತ

ನಿಮ್ಮ ನಿಶಾಂತ್.



ಅಂತರಾಳದಿ ಉಗಮಿಸಿದ ನಗು
ಹೊರಹೊಮ್ಮಿ ಸೂಸಿದೆ ಕಂಪು
ಇರಲಿ ಸದಾ ನಗುವಿನುರುಪು
ನಗುವಿನಿಂದ ನೊಂದಮನವ ಬೆಳಗು

ನಗುವಾಗ ನೀ ಮುಗ್ದಮಗು
ಮನಕೆ ನೊವಮರೆತ ಬಿಗುಮಾನ
ಕಣ್ಣತುದಿಯಲ್ಲಿ ಕಂಬನಿಯಾಗಮನ
ನಗುವ ಕಲಿಸಬಾರದೆ ನನಗು

ನಗುವಿನಲ್ಲಿ ನಕ್ಷತ್ರಗಳ ಮಿನುಗು
ಪೂರ್ಣಚಂದ್ರನ ಹೊಂಬೆಳಕು
ಸೊಂಪಾದ ಹೊಬಳ್ಳಿಯ ಮೈತಳುಕು
ತೊರಿಹೇಳುತ್ತಿದೆ ನೀ ನಗು ನೀ ನಗು


ನಿಮ್ಮ ನಿಶಾಂತ್.

Thursday, August 25, 2011



ಕೆಣಕಿ ಪ್ರಶ್ನಿಸುತ್ತಿದೆ ಕತ್ತಲು
ನಿದ್ರಿಸದೆ ಕೆಂಪಾದಕಣ್ಣಿಗೆ ಕಾರಣ
ಯಾರಿಗು ಕಾಣದ ರಾತ್ರಿಪಯಣ
ದಿಕ್ಕರಿಸಿ ಬೆಳಕು ಮಾಡುತ್ತಿದೆ ಬೆತ್ತಲು


ಚಿಂತೆಗಳು ಕತ್ತಲನ್ನು ಮುದ್ದಿಸಲು
ಮೂಡಿತು ಕಣ್ಣಸುತ್ತಲಿನ ಕಪ್ಪುಕಲೆ
ಇದು ಇರಬಹುದು ಚಿಂತೆಕತ್ತಲಿನ ನೆಲೆ
ಒಂದಕ್ಕೊಂದು ಒಡ್ಡಿನಿಂತಿವೆ ಸವಾಲು


ಮನಸು ಅತ್ತಿತ್ತ ಬಡಬಡಿಸಲು
ಎತ್ತೆತ್ತಲೊ ಸಾಗಿವೆ ಆಲೋಚನೆಗಳು
ನಿಶ್ಯಬ್ದವಾಗಿ ನಡೆಯುತ್ತಿವೆ ಅವಲೋಕನಗಳು
ಒಣಗಿನಿಂದ ತುಟಿಗಳು ಅದರಲು


ಅರೆಬರೆ ಮಾತುಗಳು ತಡವರಿಸಲು
ದೃಢತೆಯನ್ನು ಕಳೆದುಕೊಂಡ ಮನಸು
ನಿದ್ರೆಇಲ್ಲದೆ ಮರೆಯಾದ ಕನಸು
ನಡೆದಿದೆ ಜೀವನ ಇವುಗಳ ಸುತ್ತಲು

ನಿಮ್ಮ ನಿಶಾ೦ತ್.

Tuesday, August 23, 2011



ಮನ ಮೌನವಾದ ಸಮಯ
ಕಣ್ಣ್ ರೆಪ್ಪೆಗಳ ಆಲಿಂಗನ
ಚಹರೆ ಕೆಂಬಣ್ಣಮಯ
ಮರುಕ್ಷಣವೆ ಕಂಬನಿಯ ಜನನ

ಒದ್ದೆಮಾಡುತ್ತ ಒಣಗಿದ ತುಟಿಯ
ಸ್ವಿಕರಿಸುತ್ತ ಬದುಕು ಕೊಟ್ಟಬಹುಮಾನ
ನೆನೆದು ನೊವುಕೊಟ್ಟ ಲಲನೆಯ
ನೊವಿನನೆನಪುಗಳ ಮಾಡಿರುವೆ ಜೋಪಾನ

ತಲೆಯಲ್ಲಿ ಹೊತ್ತುನಡೆದಿರುವೆ ನೆನಪಿನಬುತ್ತಿಯ
ಇಲ್ಲನನಗೀಗ ಯಾರಮೇಲೂ ಅಭಿಮಾನ
ಕಳೆದುಕೊಂಡಿರುವೆ ಸಹಿಸುವ ಶಕ್ತಿಯ
ದೂರಹೊಗುತ್ತಿದೆ ನೊಂದ ಮನ


ನಿಮ್ಮ ನಿಶಾಂತ್ .


 

 

Monday, August 22, 2011



ಹೊರಟುನಿ೦ತಾಗ ನಿನ್ನ ತೊರೆದು
ನಿನ್ನ ಮಾತುಗಳಲ್ಲೆಕೆ ಕಂಪನ
ನೀ ನುಡಿಯಲಿಲ್ಲೆಕೆ ಜೋಪಾನ
ನಿಂದೆ ನೀ ಕಾಲ್ಬೆರಳಿನಲ್ಲೆನೊ ಬರೆದು

ಒಮ್ಮೆ ಅಪ್ಪಿಕೊಳ್ಳಬಾರದೆ ನನ್ನಕರೆದು
ಕಡಿಮೆಯಾಗಲಿಲ್ಲವೆ ನಿನ್ನ ಬಿಗುಮಾನ
ಪ್ರತಿ ಹೆಜ್ಜೆಗಳಲ್ಲು ನೆನಪುಗಳಾಗಮನ
ಎದುರಾಗಿ ನಿಲ್ಲಬಾರದೆ ನನ್ನ ತಡೆದು

ಎಲ್ಲರಂತೆ ನಿಂತೆಯಾನೀನು ಸರಿದು
ನಿನ್ನೆಲ್ಲ ಕೊಪತಾಪಗಳಿಗಿಂದು ಶಮನ
ನೊವಿನಲ್ಲಿ ತೊಯ್ದುಹೊಗಿದೆ ಮೈಮನ
ಮುನ್ನಡೆದಿರುವೆ ನಾ ಎಲ್ಲರೀಗೂ ಕೈಮುಗಿದು

ಪ್ರೀತಿಯಿಂದ ನಿಶಾಂತ್.

Sunday, August 21, 2011




ನನ್ನ ಬದುಕು ಚದುರಂಗ
ರಾಜನ ಪಟ್ಟಭಿಷೇಕ ನನಗೆ
ಎಲ್ಲದಿಕ್ಕಿಗೂ ಸಾಗುವಮನಸು ರಾಣಿ
ಮುತ್ತಿಕ್ಕುವ ಸೈನಿಕರೆ ನನ್ನ ಭಾವನೆಗಳು

ಎದುರಾಳಿ ಸು೦ದರ ರಾಜಕುಮಾರಿ
ಕನಸಿನಲ್ಲೆ ಕಾಣುವೆ ಅವಳ ರಾಜ್ಯ
ಸೈನಿಕರುಗಳ ಸಂಘರ್ಷ ನನ್ನರಾಣಿಗಾಗಿ
ಒಮ್ಮೆಪ್ರೀತಿಯ ಇರಿತಮಾಡುವ ಪ್ರಯತ್ನ

ಪ್ರೀತಿಗಾಗಿ ಗೆಲುವುಸೋಲಿನ ಯುದ್ಧ
ನಾಮೊದಲೆಂದು ಮುನ್ನುಗುವ ಭಾವನೆ
ಇವುಗಳೆಲ್ಲದರ ಲಗಾಮು ನನ್ನನೊಟ
ಸ್ಪಂದನೆಗೆ ಸಿಗದ ಭಾವನೆಗಳ ಛಾಟಿಏಟು

ನೂರುನೊವಿನಲ್ಲೂ ಸೆಟೆದೆಳುವ ಭಾವನೆ
ಬಯಸಿಬೇಡವೆಂದು ನಿಲ್ಲುವ ರಾಣಿಮನಸು
ರಣರಂಗತ್ಯದ ರೌಧ್ರತೆ ಮತ್ತು ನಿರವಮೌನ
ಹಲವು ಭಾವನೆಗಳ ಮಾರಾಣಾಂತಿಕ ಯಾತನೆ

ನೋವಿನಲ್ಲಿ ಪ್ರೀತಿಯೆ ಪ್ರೀತಿಯಲ್ಲಿ ನೋವೆ
ಮನಸಿನಲ್ಲಿ ನೀನ ನೀನೆನನ್ನ ಮನಸೆ
ಕನಸಿನಲ್ಲಿ ನೀನ ನೀನೆನನ್ನ ಕನಸೆ
ಚದುರಂಗದಿ ಪ್ರೀತಿಯೆ ಪ್ರೀತಿಯಲ್ಲಿ ಚದುರಂಗವೆ


ಪ್ರೀತಿಯ ನಿಶಾಂತ್ .

 
 


ಕಣ್ಣಿನಲ್ಲಿ ಸೇರೆಯಾಗಿ
ಕ್ಷಣಮಾತ್ರದಿ ಮರೆಯಾಗಿ
ಹಗಲಿನಲಿ ನೆನಪಾಗಿ
ಇರುಳಿನಲಿ ಕನಸಾಗಿಬರುವೆಯಾ


ಕತ್ತಲಿಗೆ ಬೆಳಕಾಗಿ
ಪುಷ್ಪದೊಳು ಸೌಗ೦ಧವಾಗಿ
ಮನಸಿನೊಳು ಮಿಡಿತವಾಗಿ
ಹೃದಯದಿ ಬಡಿತವಾದೆಯಾ


ಕಣ್ಣಿಗೆ ರೆಪ್ಪೆಯಾಗಿ
ದೇಹಕ್ಕೆ ಉಸಿರಾಗಿ
ಕಣ್ಣಿನೊಳು ಕಲ್ಪನೆಯಾಗಿ
ಮೌನದಲ್ಲಿ ಮಾತಾಗಿಬರುವೆಯಾ


ಭಾವಗಳಿಗೆ ಜೀವವಾಗಿ
ಸೌ೦ದರ್ಯಕ್ಕೆ ರಾಣಿಯಾಗಿ
ತುಟಿಗಳಲ್ಲಿ ನಗುವಾಗಿ
ಜನುಮ ಜನುಮಗಳು ನನಗಾಗಿಬರುವೆಯಾ


ಪ್ರೀತಿಯ ನಿಶಾಂತ್.

 




ನಿದ್ರೆಯಲ್ಲಿ ರಾರಾಜೀಸುತ್ತಿರುವೆ
ಹೆಣ್ಣೆ ನೀ ಸು೦ದರ ಪ್ರಶ್ನಾರ್ಥಕಚಿನ್ಹೆ ?
ಕಗ್ಗತ್ತಲಿನಲ್ಲಿ ಪಳಪಳಿಸಿದೆ ನಿನ್ನಕೆನ್ನೆ
ಉತ್ತರವಿಲ್ಲದ ಪ್ರಶ್ನೆ ನೀನೆ ಅಲ್ಲವೆ


ಪ್ರತಿಕನಸಲ್ಲು ಸುಳಿದಿರುವೆ
ಯಾರು ನೀ ಅಸ್ಪಷ್ಟ ಕನ್ಯೆ
ಹಂಬಲಿಸಿದೆ ಮನಸು ನಿನ್ನನೆ
ಬೆನ್ನುತೊರಿ ಅರೆತಿರುಗಿ ನಿಂತಿರುವೆ

ಕಣ್ತು೦ಬಿಕೊಳ್ಳಲು ನಿನ್ನ ಬಯಸಿರುವೆ
ಕಣ್ತೆರೆಯುವಮುನ್ನ ಎದುರಿಗೆ ಬಾಹೆಣ್ಣೆ
ಅರ್ಪಿಸಿಬಿಡುವೆ ನಿನಗೆ ನನ್ನನ್ನೆ
ನಿನ್ನಬರುವಿಗಾಗಿ ನಾ ಕಣ್ಮುಚ್ಚಿಕಾದಿರುವೆ

ಹರಿವಿಲ್ಲದೆ ನಿನ್ನ ಮೊಹಿಸಿರುವೆ
ನಿನೀಗ ಮನದೊಡತಿ ಮನದನ್ನೆ
ಬಾರದೆ ಹೊದರೆ ಬಿಡುವೆ ಪ್ರಾಣವನ್ನೆ
ನೀ ಬರುವವರೆಗೂ ಕಣ್ಮುಚ್ಚಿ ಮಲಗಿರುವೆ


ಪ್ರೀತಿ ಇ೦ದ ನಿಶಾ೦ತ್.

Saturday, August 20, 2011



ನೊಂದಮನವ ಕಣ್ಣಲ್ಲಿ ಕ೦ಡು
ಮನದೊಳಗಿಳಿದು ಈಜಾಡಿ
ಮೌನದಲ್ಲೆ ಮನವ ಜಾಲಾಡಿ
ಜೋತೆಗಿರುತಿದ್ದೆ ನನ್ನನೊವಿನಲಿ ಮಿ೦ದು

ರೆಪ್ಪೆಯಿ೦ದ ಜಾರಿದಾಗ ಕಣ್ಣಬಿ೦ದು
ನನ್ನೊ೦ದಿಗೆ ಹಿತವಾಗಿ ಮಾತಾಡಿ
ಮನಸು ಮಗು ಎಂಬಂತೆ ಮುದ್ದಾಡಿ
ಕ೦ಬನಿಯ ಸೆರಿಹಿಡಿಯುತ್ತಿದ್ದೆ ನೀ ಬಂದು

ಆ ಪ್ರೀತಿ ಇಲ್ಲವಾಯಿತೆ ನನಗಿ೦ದು
ಕ೦ಬನಿಜಾರಿದೆ ಕೆನ್ನೆಮೇಲೆ ಸುಳಿದಾಡಿ
ನೀ ಹೇಗಿರುವೆ ಸುಮ್ಮನೆ ಕಣ್ಣಿರನೋಡಿ
ಬೇಡವಾದೆನೆ ನಿನಗೆ ನಾನಿ೦ದು

ಊಹೆಗೂಮೀರಿದ ಬದಲಾವಣೆ ನಿನ್ನಲ್ಲಿ೦ದು
ಒಂದೊಮ್ಮೆ ನಾವಿಬ್ಬರೂ ಜನುಮದಜೋಡಿ
ಇ೦ದು ನಿ ಬೆನ್ನತಿರುಗಿಸಿರುವೆ ನನ್ನನೋಡಿ
ಉಕ್ಕಿಹರಿದಿದೆ ಪ್ರವಾಹ ನನ್ನಕಣ್ಣಲ್ಲಿ೦ದು


ನಿಮ್ಮ ಪ್ರೀತಿಯ ನಿಶಾ೦ತ್ .


 

Friday, August 19, 2011


ದಿನ ಮುಗಿವ ಸಮಯ
ಮನೆ ದೂರ ಮೈ ಭಾರ
ಕಳೆದುಕೊ೦ಡಿರುವೆ ವಿನಯ
ಯಾತನೆಗಿಲ್ಲವೆ ಪರಿಹಾರ

ಹೇಗೆ ಹೆಳಲಿ ವ್ಯಥೆಯ
ಬ೦ದ೦ತಿದೆ ಸ್ವಲ್ಪವೆ ಜ್ವರ
ಬರೆದು ಬಿಡಲೆ ಪುಟ್ಟಕಥೆಯ
ತನುಮನದಲ್ಲಿ ಇಲ್ಲವೆಇಲ್ಲ ಸಾರ


ಮಾಡಿಕೊಳ್ಳಲೆ ಯಾರನ್ನಾದರು ಪರಿಚಯ
ಒ೦ಟಿತನ ಕಾಡುತ್ತಿರುವುದೆಕೂ ತೀರ
ದುಡಿದುಧಣಿದು ನಾನೀಗ ತನ್ಮಯ
ನಡೆದಿರುವೆ ಮನೆಕಡೆ ನೀನೂ ಬಾರ


ನಿಮ್ಮ ನಿಶಾ೦ತ್ .

Thursday, August 18, 2011


ದೊರದೂರಿನ ಗೆಳತಿ
ಎದುರು ಸುಳಿದು ಹೋದೆಯ
ದಿಟ್ಟಿಸಿ ನೋಡಿ ನನ್ನ
ಮಾತನಾಡದೆ ಹೊರಟೆಯ


ಎದುರಾದೆ ಮೊದಲಬಾರಿಗೆ
ತೊದಲು ನುಡಿಇಲ್ಲ
ಮುಖದಿ ಗಾಬರಿಛಾಯೆ
ಮೂಡಿತ್ತೆ ಸ೦ಶಯ ಯಾರಿದು?


ಎಲ್ಲೊನೋಡಿದ ನೆನಪು
ಆಲೋಚಿಸುತ್ತಿರುವಾಗಲೆ ಮರೆಯಾದೆ
ನನಗೆ ಕಡಿಮೆಯೆ ನೆನಪು
ಮೌನದಲ್ಲೆ ನಾ ಸುಮ್ಮನಾದೆ


ಮರುದಿನ ಕೇಳಿದೆ ಅದು ನೀನೆನಾ
ನಾ ನುಡಿದೆ ಅದು ನಾನೆ
ನಿನಗೆ ಮಾತನಾಡಿಸಲಿಲ್ಲವೆ೦ಬ ಕೊರಗು
ನನಗೆ ಗುರುತಿಸಲಿಲ್ಲವಲ್ಲವೆ೦ಬ ನೋವು

ನಿಮ್ಮ ನಿಶಾ೦ತ್ .



ಅರಕು ಬಟ್ಟೆಯನ್ನುಟ್ಟು ನಿ೦ದಬಡವ
ಬೆನ್ನಿಗ೦ಟಿದ ಹೊಟ್ಟೆಯ ಸವರುತ್ತ
ಬಿಸಿಲಲ್ಲಿ ಬೆವರಿಳಿಸಿ ಮೈಮುರಿವ
ತುತ್ತುಅನ್ನಕ್ಕಾಗಿ ದುಡಿವ ಧಣಿಯುತ್ತ

ತೂತುಸೀರೆಯನ್ನುಟ್ಟು ಮನೆಯಲ್ಲಿಹಳು ಮಡದಿ
ಕುಪ್ಪಸದಿ೦ದಿಣುಕುತ್ತಿರವ ಮೈ ಮುಚ್ಚುತ್ತ
ಕಾದಿಹಳಾಕೆ ನೀರುತು೦ಬಿಸಿ ಕೊಡದಿ
ತು೦ಬುಗರ್ಭವನೋತ್ತು ಹಸಿವನ್ನು ಮರೆಯುತ್ತ


ಎಕೆಬರಲಿಲ್ಲ ನನ್ನೊಡೆಯ ನನ್ನವ
ಹೊಸ್ತಿಲಲ್ಲಿ ನಿ೦ದಿಹಳು ಯೋಚಿಸುತ್ತ
ತು೦ಬುಬಸುರಿ ಬಯ್ಯುತಿಹಳು ಕಾಲವ
ನುಸುಳಿದ ಮಳೆರಾಯ ಅವಳನೆನೆಸುತ್ತ

ಒಳನಡೆದಳಾಕೆ ಮುಚ್ಚಿ ಗುಡಿಸಲಿನಕದವ
ಛಾವಾಣಿಇ೦ದಿಳಿದ ಹನಿಗಳ ನಿ೦ದಿಸುತ್ತ
ಶಬ್ದತೇಲಿಬ೦ತು ಬಾಗಿಲನ್ನು ತಟ್ಟುವ
ತಡವರಿಸಿ ಬಾಗಿಲುತೆರೆದಳಾಕೆ ನಾಚುತ್ತ

ಮುಗಿಸಿಮನೆಗೆಲಸ ಬ೦ದಿಹಳಾಕೆ ಮೈಕೂಡವಿ
ತ೦ದಿಹಳು ಮಾಲಿಕನಮನೆಯ ಉಳಿದನ್ನದತುತ್ತ
ಹಸಿದಗ೦ಡನ ಕ೦ಡು ನುಡಿದಳು ನಾಬಡವಿ
ತನ್ನಹಸಿವನ್ನಡಗಿಸಿ ನೀಡಿಹಳು ಕೈತುತ್ತ

ಹರಿದಛಾಪೆಯನ್ನೊದರಾಸಿ ನೋಡಿತಿಹಳು ದೀಪವ
ತಣಿದಳಾಕೆ ಮಡಿಕೆಯಲ್ಲುಳಿದ ಗ೦ಜಿಯಕುಡಿಯುತ್ತ
ಹಸಿವಿಗೆ ಕೊಡದನೀರ ಬಸಿದು ಹಿರಿಹಳುಕೊಡವ
ಮಹಿಳೆಬ೦ದು ಮಲಗಲು ದೀಪವ ನ೦ದಿಸುತ್ತ

ಗ೦ಡಮೇಲೊರಗಿಬರಲು ತಿರಿಸೆ೦ದು ಕಾಮವ
ತನುವನರ್ಪಿಸಿದಳಾಕೆ ಅಲ್ಲಲ್ಲಿ ಬೆವರುತ್ತ
ತಡೆದು ತಣಿಸಿಹಳು ಅವನ ಮೈಬಾರವ
ನಡುಇರುಳಾಗಲು ಅಲಿ೦ಗಿಸಿದಳಾಕೆ ನಿದ್ರಿಸುತ್ತ

ನಿಮ್ಮ ನಿಶಾ೦ತ್ .

Tuesday, August 16, 2011


ಕರೆಯೋಣ ಮನೆಗೆ ಶ್ರೀಕೃಷ್ಣನ
ಪುಟ್ಟ ಹೆಜ್ಜೆಗಳ ಮನೆತು೦ಬಬಿಡಿಸಿ
ಬಾಗಿಲಿಗೆ ಕಟ್ಟಿ ಹಸಿರುತೋರಣ
ಬಣ್ಣ ಬಣ್ಣಗಳಿ೦ದ ರ೦ಗೋಲಿಬಿಡಿಸಿ


ಜನ್ಮದಿನವಿ೦ದು ನವನೀತ ಚೋರನ
ಮಡಿಕೆ ಬೆಣ್ಣೆಯ ನೈವೆದ್ಯಮಾಡಿಸಿ
ಶ್ರೀಚರಣಕೆ ತಲೆಬಾಗಿ ನಮಿಸೋಣ
ತಪ್ಪುಒಪ್ಪುಗಳ ಮಾಧವನಿಗೊಪ್ಪಿಸಿ


ನಲಿಯೋಣ ಕರೆದು ಹಾಲ್ಗೇನ್ನೆಕೃಷ್ಣನ
ಹಾಲುಜೇನುಗಳಿ೦ದ ಅಭಿಷೇಕ ಮಾಡಿಸಿ
ಪೊಜಿಸೋಣ ನಾವು ಶ್ರೀಚಕ್ರಧಾರನ
ಎಕ್ಕಿತ೦ದು ಪುಷ್ಪಗಳ ಅಲ೦ಕರಿಸಿ


ಕೊಳಲನುದುತ ಕುಳಿತ ಗೋಪಾಲನ
ಚ೦ದನವ ಚೆಲುವನಿಗೆ ಲೆಪಿಸಿ
ಬೇಗಬಾರೊ ಮನೆಗೆ ಶ್ರೀಕೃಷ್ಣ
ಬ೦ದೆ ಬರುವಳು ಭಾಮೆ ನಿನ್ನರಸಿ


ಭಕ್ತಿಯಲಿ ಪೊಜಿಸುವೆ ಸು೦ದರಾ೦ಗನ
ಶಿರಬಾಗಿ ಕೈಮುಗಿದು ನಮಿಸಿ
ನಿನ್ನಲ್ಲೆ ಲೀನಾವಾಗಿಸಿಕೋ ನನ್ನನ್ನ
ಧೀನಾನಾಗಿರುವೆ ನನ್ನನ್ನೆ ನಿನಗರ್ಪಿಸಿ  

ನಿಶಾ೦ತ್  .




Monday, August 15, 2011



ಹೃದಯ ಮ೦ದಿರದಲ್ಲಿ
ಪ್ರೀತಿಯ ದೇವಿಯು ನೀನು
ಎನ್ನ ಕನಸಿನ ಲೋಕದಲಿ
ನಿನ್ನ ಆರಾಧಕ ನಾನು

ಒ೦ಟಿಬಾಳಿನ ಪಯಣದಲಿ
ಜೊತೆಗೆ ಬರುವೆಯಾ ನೀನು
ಕತ್ತಲಾದ ಬದುಕಿನಲಿ
ಸು೦ದರ ಸ್ವಪ್ನವೇ ನೀನು


ಇರುಳ ಆಗಸದಲಿ
ತು೦ಬುಚ೦ದ್ರನು ನಾನು
ಮೋಡಗಳಾಗಿ ಗಾಳಿಯಲಿ
ತೇಲಿ ಹೋಗುವೆ ನೀನು


ಮೂಡಣನ ಕಿರಣಗಳಲಿ
ಸುಳಿದು ಬರಲು ನಾನು
ಕುಳಿತು ಇಬ್ಬನಿಯ ಹನಿಯಲ್ಲಿ
ಕರಗಿ ಹೋದೆಯ ನೀನು


ನನ್ನ ಬಾಳಿನ ಸು೦ದರ ಕನಸು ನೀನು ಕನಸಲ್ಲಿದ್ದರೆ ನಿ ಚೆ೦ದ ನನಸಾಗಿ ನೀ ಬರುವಾಗ ನನ್ನ ಆದಿಯಲ್ಲಿ ನಿನ್ನ ಅ೦ತ್ಯ ಓ ಕನಸೆ ನೀ ಕನಸಾಗೆ ಉಳಿದುಬಿಡು ನನ್ನ ಬಾಳಹಾದಿಗೆ ಬೆಳಕು ಕೊಡು


ಈ ಕವನ ನನ್ನ ಎಲ್ಲ ಕವನಗಳಿಗೆ ಸ್ಪೂರ್ತಿಯಾದ ನನ್ನ ಕಲ್ಪನೆಗೆ


ಇ೦ತಿ ನಿನ್ನ ನಿಶಾ೦ತ್.


Sunday, August 14, 2011





ಭಾರತದೇಶ ಪುಣ್ಯ ಭೂಮಿಯು
ಸ೦ಸ್ಕೃತಿಗಳಿಗೆ ತವರೂರು
ನಮ್ಮರಾಷ್ಟ್ರ ಪರರಿಗೆ ಮಾಧರಿಯು
ನಮ್ಮ ಐಕ್ಯತೆಯ ಮೆಚ್ಚುವರೆಲ್ಲರು


ತ್ರಿವರ್ಣವೆ೦ದರೆ ತಿಳಿದಿರಲಿ ನಾವುಭಾರತೀಯರು
ಕೇಸರಿ ಶಕ್ತಿ ಮತ್ತು ತ್ಯಾಗದ ತವರೂರು
ಬಿಳಿಬಣ್ಣ ಸಾರಿಹೇಳಿದೆ ಶಾ೦ತಿಸತ್ಯ ಪ್ರಿಯರು
ಹಸಿರುವರ್ಣ ತೋರಿದೆ ರೈತಸುರಿಸುವ ಬೆವರು

ನವಿಲು ನಮ್ಮ ರಾಷ್ಟ್ರಪಕ್ಷಿಯು
ಗರಿಗೆದರಿ ಬಿ೦ಬಿಸಿದೆ ನಮ್ಮನಾಡ ಸೌ೦ದರ್ಯ
ವ್ಯಾಘ್ರಹುಲಿರಾಯ ನಮ್ಮ ರಾಷ್ಟ್ರಪ್ರಾಣಿಯು
ಶತ್ರುಗಳ ಮೆಟ್ಟಿನಿ೦ದ ಗ೦ಡೆದೆಯ ಗಾ೦ಭೀರ್ಯ

 ನಮಗೆ ರಕ್ಷಕವಚ ಆಶೋಕ ಚಕ್ರವು
ಶತ್ರುಗಳಿಗೆ ವಿಷಪೊರಿತ ೨೪ ನೀಲಿಬಾಣವು
ಎದುರಿಸಲು ಎದುರಾಳಿಗಳ ಸದಾಸಿದ್ದವು
ತಿರುಗುತಲಿದೆ ನಿತ್ಯನಿರ೦ತರ ಸತ್ಯಚಕ್ರವು

ನಮಗಾಗಿ ಗಡಿಯನ್ನು ಹಗಲಿರುಳು ಕಾದಿಹರು
ಸದೆ ಬಡಿಯಲು ಶತ್ರುಗಳ ನಮ್ಮಯೋಧರು
ಈ ಭೂಮಿಯಲ್ಲಿ ಜನಿಸಿರುವ ಭಾಗ್ಯವ೦ತರು
ನಾವು ಭಾರತಿಯರು ಪುಣ್ಯಭೂಮಿಯ ನಾವುಭಾರತಿಯರು

ನಿಮ್ಮ ಪ್ರೀತಿಯ ನಿಶಾ೦ತ್ .

Saturday, August 13, 2011


ಸಹೋದರಿ ರಕ್ಷೆಕಟ್ಟುವಳಿ೦ದು
ತಿಲಕವಿಟ್ಟು ಆರತಿಬೆಳಗಿ
ಹಾರೈಸಿ ಅಮರವಿಜಯಿಯಾಗೆ೦ದು
ನಗುತಲಿರುವಳು ತ೦ಗಿ ಸಿಹಿತಿನಿಸಿ

ಅಡಿಮುಗಿದು ಅಣ್ಣ ಆಶೀರ್ವದಿಸೆ೦ದು
ಕುಳಿತಿರಲು ನನ್ನತ೦ಗಿ ತಲೆಬಾಗಿ
ಕ೦ಬನಿಜಾರಿತು ನೆನೆ ನೆನೆದು
ಮರೆಯಾಲಾಗದು ಇವಳ ಒಡನಾಟ

ಭಾವನ ಮಡದಿ ಅವಳಿ೦ದು
ಅವಳಮನೆಗೆ ಹೋಗುವಳು ನನತ೦ಗಿ
ಪುಟ್ಟ ತ೦ಗಿಗೆರಡು ಮಕ್ಕಳಿ೦ದು
ಜನುಮಗಳ ಅನುಬ೦ಧ ನನ್ನತ೦ಗಿ

ತಿಳಿಸಿಹೇಳುವಳು ಬುದ್ದಿ ನನಗಿ೦ದು
ಯೋಚಿಸಿದೆ ಇವಳೇನ ಪುಟ್ಟಬಾಲೆ
ಇರಲಮ್ಮ ಹೀಗೆ ಪ್ರೀತಿ ಎ೦ದೆದೂ
ನುಡಿದೆ ನಗುತಲಿ ನಾನಿ೦ದು

ಪ್ರೀತಿಯಿ೦ದ ನಿಶಾ೦ತ್
.