Sunday, August 21, 2011


ಕಣ್ಣಿನಲ್ಲಿ ಸೇರೆಯಾಗಿ
ಕ್ಷಣಮಾತ್ರದಿ ಮರೆಯಾಗಿ
ಹಗಲಿನಲಿ ನೆನಪಾಗಿ
ಇರುಳಿನಲಿ ಕನಸಾಗಿಬರುವೆಯಾ


ಕತ್ತಲಿಗೆ ಬೆಳಕಾಗಿ
ಪುಷ್ಪದೊಳು ಸೌಗ೦ಧವಾಗಿ
ಮನಸಿನೊಳು ಮಿಡಿತವಾಗಿ
ಹೃದಯದಿ ಬಡಿತವಾದೆಯಾ


ಕಣ್ಣಿಗೆ ರೆಪ್ಪೆಯಾಗಿ
ದೇಹಕ್ಕೆ ಉಸಿರಾಗಿ
ಕಣ್ಣಿನೊಳು ಕಲ್ಪನೆಯಾಗಿ
ಮೌನದಲ್ಲಿ ಮಾತಾಗಿಬರುವೆಯಾ


ಭಾವಗಳಿಗೆ ಜೀವವಾಗಿ
ಸೌ೦ದರ್ಯಕ್ಕೆ ರಾಣಿಯಾಗಿ
ತುಟಿಗಳಲ್ಲಿ ನಗುವಾಗಿ
ಜನುಮ ಜನುಮಗಳು ನನಗಾಗಿಬರುವೆಯಾ


ಪ್ರೀತಿಯ ನಿಶಾಂತ್.

 


1 comment: