Sunday, August 21, 2011




ನನ್ನ ಬದುಕು ಚದುರಂಗ
ರಾಜನ ಪಟ್ಟಭಿಷೇಕ ನನಗೆ
ಎಲ್ಲದಿಕ್ಕಿಗೂ ಸಾಗುವಮನಸು ರಾಣಿ
ಮುತ್ತಿಕ್ಕುವ ಸೈನಿಕರೆ ನನ್ನ ಭಾವನೆಗಳು

ಎದುರಾಳಿ ಸು೦ದರ ರಾಜಕುಮಾರಿ
ಕನಸಿನಲ್ಲೆ ಕಾಣುವೆ ಅವಳ ರಾಜ್ಯ
ಸೈನಿಕರುಗಳ ಸಂಘರ್ಷ ನನ್ನರಾಣಿಗಾಗಿ
ಒಮ್ಮೆಪ್ರೀತಿಯ ಇರಿತಮಾಡುವ ಪ್ರಯತ್ನ

ಪ್ರೀತಿಗಾಗಿ ಗೆಲುವುಸೋಲಿನ ಯುದ್ಧ
ನಾಮೊದಲೆಂದು ಮುನ್ನುಗುವ ಭಾವನೆ
ಇವುಗಳೆಲ್ಲದರ ಲಗಾಮು ನನ್ನನೊಟ
ಸ್ಪಂದನೆಗೆ ಸಿಗದ ಭಾವನೆಗಳ ಛಾಟಿಏಟು

ನೂರುನೊವಿನಲ್ಲೂ ಸೆಟೆದೆಳುವ ಭಾವನೆ
ಬಯಸಿಬೇಡವೆಂದು ನಿಲ್ಲುವ ರಾಣಿಮನಸು
ರಣರಂಗತ್ಯದ ರೌಧ್ರತೆ ಮತ್ತು ನಿರವಮೌನ
ಹಲವು ಭಾವನೆಗಳ ಮಾರಾಣಾಂತಿಕ ಯಾತನೆ

ನೋವಿನಲ್ಲಿ ಪ್ರೀತಿಯೆ ಪ್ರೀತಿಯಲ್ಲಿ ನೋವೆ
ಮನಸಿನಲ್ಲಿ ನೀನ ನೀನೆನನ್ನ ಮನಸೆ
ಕನಸಿನಲ್ಲಿ ನೀನ ನೀನೆನನ್ನ ಕನಸೆ
ಚದುರಂಗದಿ ಪ್ರೀತಿಯೆ ಪ್ರೀತಿಯಲ್ಲಿ ಚದುರಂಗವೆ


ಪ್ರೀತಿಯ ನಿಶಾಂತ್ .

 
 

No comments:

Post a Comment