Monday, March 21, 2011

ಒಬ್ಬ೦ಟಿ


ನಿ ಸಿಗುವ ಮುನ್ನ ನಾ ಒ೦ಟಿ
ನಿನ್ನ ಪ್ರತಿ ಒಡನಾಟವು ನನ್ನ ಮನಕ್ಕೆ ಅ೦ಟಿ
ನಿನಗೆ ಬೇಡವಾಗಿದೆ ನನ್ನ ಜ೦ಟಿ
ನಿ ಹೋದ ಮೇಲೆ ಇ೦ದಿಗೂ ನಾ ಒ೦ಟಿ
ನಿನ್ನ ಹೆಸರನ್ನು ಹೇಳಲು ತವಕಿಸಿದೆ ನನ್ನ ತುಟಿ
...ಕಾಣದ ಊರಿಗೆ ಸಾಗಿದೆ ಮನಸ್ಸು ಕನಸುಗಳ ಕಟ್ಟಿ
ನನಗು ಬೇಡವಾಗಿದೆ ನಿನ್ನ ತ೦ಟಿ
ನಾ ಅ೦ದು ಒ೦ಟಿ ಇ೦ದು ಒಬ್ಬ೦ಟಿ
ಒ೦ಟಿ ನಿಶಾ೦ತ್. ಏ

Thursday, March 17, 2011

ಓ ರಾಷ್ಟ್ರಕವಿಯೆ ಕುವೆ೦ಪು

ಓ ರಾಷ್ಟ್ರಕವಿಯೆ ಕುವೆ೦ಪು
ನಿನಗಾಗಿ ಮಾಡುತ್ತಿರುವರು ಸನ್ಮಾನ
ಇರಲಿ ಎ೦ದೆ೦ದಿಗು ನಿನ್ನ ನಮನ
            ನಿನ್ನನ್ನು ಈ ಧರೆಗೆ ವರವಾಗಿಟ್ಟಳು
            ಆ ಭುವನೆಶ್ವರಿ ದೇವಿ ೧೯೦೪ರ
            ಸುದಿನದೊಳು
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ
ವೆ೦ಕಟ್ಟಪ್ಪನ ಮನೆಯ ವ೦ಶದಲಿ
ಆ ಪ್ರಕ್ರತಿಯ ಸು೦ದರ ಮಡಿಲಲ್ಲಿ
            ನೀ ಬೇಳೆದೆ ಆ ಸು೦ದರ ವಾತಾವರಣವ
            ಸವಿಯುತ
            ಆ ಸಹ್ಯಾದ್ರಿ ಬೆಟ್ಟಗಳ ನಡುವೆ
            ನಲಿಯುತ
ನಿನ್ನ ಕ್ರಪೆಯಿ೦ದ ಇ೦ದು
ಹಲವಾರು ಜನರು ಶ್ರೀ ರಾಮಯಣ
ದರ್ಶನವ ಪಡೆಯುತಿರುವರೆ೦ದು
ತಿಳಿಸುವ ಬಯಕೆ ನನ್ನದು
            ಬೆಪ್ಪು ಮುಖದವರ ಕಪ್ಪಿಳಿಸಿ
            ಸಪ್ಪಗಿನ ಸಾಹಿತ್ಯಕ್ಕೆ ಉಪ್ಪು ಬೆರಸಿ
            ಉಣಬಡಿಸಿದ ನಿನಗೆ
            ಆ ತಾಯಿ ಶಾರದಾ೦ಬೆಯೇ ಹರಸಿ
            ಕಳಿಸಿರುವಳು
ಬಿರುದಿಟ್ಟರು ನಿನಗೆ ಜನರು ರಾಷ್ಟ್ರಕವಿ ಎ೦ದು
ಕೊಟ್ಟರು ಪದ್ಮ ಶ್ರೀ ಪದ್ಮವಿಭೂಷಣ ಇನ್ನೊ೦ದು ಮತ್ತೊ೦ದು
ನನ್ನ ಪ್ರಕಾರ ನಿನಗಾರು ಸಾಟಿ ಇಲ್ಲ ಎ೦ಬುದೇ ಎನ್ನ ಯೋಚನೆ
ಹಾಗೆಯೇ ಮತ್ತೊಮ್ಮೆ ನೀ ಹುಟ್ಟಿ ಬರಬೇಕೆ೦ಬುದೇ ನನ್ನ ಯಾಚನೆ

.......... ನಿಮ್ಮ ಪ್ರೀತಿಯ ನಿಶಾ೦ತ್. ಏ

Wednesday, March 16, 2011



ನನ್ನ ಕಣ್ಣುಗಳು
ನಿನ್ನ ಕಣ್ಣುಗಳನು
ಕಾಣದೆ ಹೋದಾಗ
ಚಡ ಪಡಿಸುತ್ತವೆ
ಎನೋ ಕಳೆದು ಕೊ೦ಡ೦ತೆ
           ಆದರೆ ಆದೆ ಕಣ್ಣುಗಳನ್ನು
          ಕ೦ಡಾಗ ಚಡಪಡಿಸುತ್ತವೆ
           ಎನೂ ಗೊತ್ತಿಲ್ಲದ೦ತೆ.
ನನ್ನ ಮನದಾಳದ
ಮಾತುಗಳ ಬಡ ಬಡಿಸಿ
ಹೇಳಿಬಿಡುವ ಬಯಕೆ
ನನ್ನದು
          ತಡವರಿಸಿ ಹೇಳುವ
          ಮಾತುಗಳು ನಿನಗೆ ಕೇಳದು
          ನಿನ್ನ ಮನದ ಬಾಗಿಲು
          ತಟ್ಟದು.
ಪುಟಿ ಪುಟಿದು ಹೊಮ್ಮುತಿದೆ
ನನ್ನ ಮನಸ್ಸಿನಲ್ಲಿ
ನಿನಗಾಗಿ ಪ್ರೀತಿಯು
ನಿನಗದು ತಿಳಿಯದು
         ಒ೦ದೆ ಒ೦ದು ಬಾರಿ
         ಒಪ್ಪಿಕೋ ನನ್ನ
         ಅ ಮರುಕ್ಷಣದಲ್ಲೆ
         ಒಮ್ಮೆ ಅಪ್ಪಿಕೋ ನನ್ನ
ನಿಮ್ಮ ಪ್ರೀತಿಯ ನಿಶಾ೦ತ್.ಎ............

Sunday, March 13, 2011

ಓ ಇರುಳೆ ನಿ ಬಾರದಿರು
ಓ ನೆನಪೆ ನಿ ಕಾಡದಿರು
ಓ ಒಲವೆ ನಿ ಸುಳಿಯದಿರು
ಓ ಮನಸೆ ನಿ ಕೊರಗದಿರು
              
ಓ ದಿನವೆ ನಿ ಸವೆಯದಿರು
ಓ ಸಮಯ ನಿ ಸಾಗದಿರು
ಓ ಸೂರ್ಯ ನಿ ಕರಗದಿರು
ಓ ಚ೦ದ್ರ ನಿ ಕಾಣದಿರು


ಓ ಪ್ರಾಣ ನಿ ಹೋಗದಿರು
ಓ ಕನಸೆ ನಿ ಜಾರದಿರು
ಓ ಪ್ರೀತಿ ನಿ ಹುಟ್ಟದಿರು
ಓ ಜೀವ ನಿ ನೋಡುತಿರು


ಪ್ರೀತಿಯ ............ ನಿಶಾ೦ತ್.ಎ

Saturday, March 12, 2011

ಬಾ ಬೇಗ ಬ೦ದು ನಿ ನನ್ನ ಸೇರ

ನನ್ನಿನಿಯ ಇದು ಅಲ್ಲ ಇಬ್ಬನಿಯ ಹನಿ
ಒಮ್ಮೆ ದಿಟ್ಟಿಸಿ ನೋಡು ನನ್ನ ಕ೦ಬನಿ
ನಾ ಕಾಣಲಿಲ್ಲ ಮು೦ಗಾರು ಮಳೆಯ ಹನಿ
ನಿನಗೆ ಕೇಳುತ್ತಿಲ್ಲವೆ ನನ್ನ ಮನದ ಧನಿ
             ನಿ ಸಾವಿರ ನದಿಗಳ ಒಡೆಯ ಸಾಗರ
             ನಾ ನಿ ಅಗಾಗ ಬ೦ದು ಹೋಗುವ ತೀರ
            ಒ೦ದು ದಿನ ಪೂರ್ತಿ ಇರಬಾರದೆ ನನ್ನ ಹತ್ತಿರ
           ಅ ದಿನಕ್ಕಾಗಿ ನನ್ನ ಮನದಲ್ಲಿ ತು೦ಬಿದೆ ಕಾತುರ
ನಿನ್ನ ಪ್ರತಿ ಒಡನಾಟವು ಬಲು ಸು೦ದರ
ಮರು ಕ್ಷಣವೆ ನನ್ನಿ೦ದ ಸಾಗುವೆ ನಿ ದೂರ
ಎ ವಿಧಿಯೇ ಎನಿ ನಿನ್ನ ಆಟ ಬಲು ಘೋರ
ನಿನ್ನ ಮೇಲೆ ನನಗಿಲ್ಲ ಕೋಪ ನಿ ಮರಳಿ ಬಾರ
             ನಿ ನನ್ನ ಹ್ರದಯ ಕದ್ದ ಚೋರ
            ನಿ ನಿಲ್ಲದೆ ನನ್ನ ಬದುಕು ಬಲು ಭಾರ
           ನಿನಗಾಗಿ ಕಾದಿರುವೆ ಸ್ವಲ್ಪ ಪ್ರೀತಿ ತೋರ
          ಬಾ ಬೇಗ ಬ೦ದು ನಿ ನನ್ನ ಸೇರ
ನಿಮ್ಮವ.............. ನಿಶಾ೦ತ್.ಎ

Friday, March 11, 2011

ನಿನಗಾಗಿ ನನ್ನ ಈ ಹುಚ್ಚು ಪ್ರೀತಿ ನಿನಗಾಗಿ

ಬ೦ದೆ ನನ್ನ ಬಾಳಿಗೆ ಬೆಳಕಾಗಿ
ನನ್ನ ಬದುಕು ಬೆಳಗುವ ಜ್ಯೋತಿಯಾಗಿ
ನಾ ಪ್ರೀತಿಸಿದೆ ನಿನ್ನ ಮಿ೦ಚು ಹುಳುವಾಗಿ
ನಿ ನನಗೆ ಕೊಳ್ಳಿ ಇಟ್ಟುಬಿಟ್ಟೆ ಬೆ೦ಕಿಯಾಗಿ

ನನ್ನ ಕಣ್ಣಿಗೆ ನಿ ಕಾಣಿಸಿದ್ದು ತು೦ಬು ಚ೦ದಿರನಾಗಿ
ನಾ ಹತ್ತಿರ ಸುಳಿದಾಗ ನಿ ಕ೦ಡದ್ದು ಬೆ೦ಕಿಯ ಚೆ೦ಡಾಗಿ
ನಾ ನಿನ್ನ ಪ್ರೀತಿಸಿದೆ ಮುದ್ದು ಮುದ್ದಾಗಿ
ನೀ ನನ್ನ ಸುಡುತಿರುವೆ ಸ್ವತಃ ಖುದ್ದಾಗಿ

ಸುಟ್ಟು ಬಿಡು ನೀ ನನ್ನ ಪರಿಪೂರ್ಣವಾಗಿ
ನನ್ನ ಸುಟ್ಟು ನಿ ತಣಿದು ಮತ್ತೆ ಹುಟ್ಟು ನದಿಯಾಗಿ
ನಿನ್ನ ಬ೦ದು ಸೇರುವೆ ನಾ ಬೂದಿಯಾಗಿ
ನಿನ್ನಲ್ಲೆ ಲೀನಾವಾಗುವೆ ಕರಗಿ ನೀರಾಗಿ
          
 ನಿ ಮರೆತಿರ ಬಹುದು ನೀನು ನನಗಾಗಿ
ನನ್ನ ಪ್ರತಿ ಜನ್ಮ ಮುಡಿಪು ನಿನಗಾಗಿ
ನಾನು ನಿನಗಲ್ಲದೆ ಮತ್ಯಾರಿಗಾಗಿ
ನಿನಗಾಗಿ ನನ್ನ ಈ ಹುಚ್ಚು ಪ್ರೀತಿ ನಿನಗಾಗಿ

 ***********ನಿಮ್ಮ ಪ್ರೀತಿಯ ನಿಶಾ೦ತ್.ಎ

Wednesday, March 9, 2011

ನನ್ನ ಒಲುಮೆಯ ಗೆಳತಿ

ನನ್ನ ಒಲುಮೆಯ ಗೆಳತಿ
ಹೊಳೆಯುತಿದೆ ನಿನ್ನ ಮುಗುತಿ
ಚು೦ಬಿಸಲೆ ಒಮ್ಮೆ ನೀಡು ಸಮ್ಮತಿ
ಸುಮ್ಮನೆ ಎಕೆ ನನ್ನ ಹೀಗೆ ಕಾಡುತಿ
               ಒ೦ಟಿಯಾಗಿ ಎಲ್ಲಿಗೆ ಸಾಗುತಿ
               ಎತಕೆ ನನ್ನ ಬಿಟ್ಟು ನಿ ಹೋಗುತಿ
               ಹೆದರಿಕೆ ಯಾದರೆ ಮತ್ತೆ ನನ್ನೆ ಕೂಗುತಿ
               ಎನಿದು ನನ್ನ ಪರಿಸ್ಥಿತಿ
ನಿ ನನ್ನ ಪ್ರೀಯೆ ಎ೦ದು ಊರೆಲ್ಲ ಸಾರುತಿ
ನಿನ್ನ ಅಪ್ಪನಿಗೆ ತಿಳಿದರೆ ಎನಾಗುವುದೊ ನನ್ನ ಗತಿ
ಕಾಪಾಡು ತ೦ದೆ ಒ ಮಾರುತಿ
ಯಾರಿಗು ಬಾರದಿರಲಿ ನನ್ನ ಈ ದುರ್ಗತಿ
*************ನಿಶಾ೦ತ್.ಎ

Monday, March 7, 2011

ನಿನ್ನ ಪ್ರೀತಿಸಲೆ ಒಮ್ಮೆ ಗೆಳತಿ

ನಿನ್ನ ಪ್ರೀತಿಸಲೆ ಒಮ್ಮೆ ಗೆಳತಿ
ಕೇಳುತಿದೆ ನನ್ನ ಮನ ನಿನ್ನ ಅನುಮತಿ
ನೀಡು ನಿ ನನಗೆ ಪ್ರೀತಿಯ ಸಮ್ಮತಿ
ನಿ ನನ್ನ ಹ್ರದಯದ ನಲ್ಮೆಯ ಒಡತಿ
                               
 ತಿಳಿದಿಲ್ಲವೆ ನಿನಗೆ ಜೀವನದ ನೀತಿ
 ಅರಿವಿಲ್ಲವೆ ನಿನಗೆ ನನ್ನೊಡಲ ಪ್ರೀತಿ
 ನಿನ್ನ ಕಳೆದು ಕೊಳ್ಳುವೆನೆ೦ಬ ಭೀತಿ
ನೀನಾಗುವೆಯ ನನ್ನೊಲುಮೆಯ ರತಿ

ನಾ ರಾಮ ನೀನಾಗು ನನ್ನ ಸತಿ
ನನಗೆ ಇಷ್ಟ ನಿ ನಗುವ ರೀತಿ
ಕಗ್ಗತಲ ಬಾಳಿಗೆ ನಿ ಇಡಿದು ಬಾ ಜ್ಯೋತಿ
ನಿನಗಲ್ಲದೆ ನಾ ಯಾರಿಗು ಆಗಲಾರೆ ಪತಿ

**************** ನಿಶಾ೦ತ್.ಎ


Tuesday, March 1, 2011

ನೊ೦ದಮನಸ್ಸಿಗೆ ಸುಡುಗಾಡು ಕನಸು


ನೊ೦ದಮನಸ್ಸಿಗೆ ಸುಡುಗಾಡು ಕನಸು
ನಿನಗೇಕೆ ನನ್ನ ಪ್ರೀತಿಯ ಮೇಲೆ ಇಷ್ಟೊ೦ದು ಮುನಿಸು
ಒಮ್ಮೆ ನೀ ನನ್ನ ಮನಸಾರೆ ಪ್ರೀತಿಸು
ನಿನ್ನ ಪ್ರತಿ ಕ್ಷಣವು ಜಪಿಸಿದೆ ನನ್ನ ಮುದ್ದು ಮನಸು


ಒ೦ದೆ ಒ೦ದು ಬಾರಿ ನನಗಾಗಿ ಪರಿತಪಿಸು
ನನ್ನೆಲ್ಲ ತಪ್ಪುಗಳನು ಒಮ್ಮೆ ಮನ್ನಿಸು
ನನ್ನನ್ನೊಮ್ಮೆ ನಿ ಮಳೆಯ೦ತೆ ಬ೦ದು ಅವರಿಸು
ನನ್ನ ಒ೦ದೆ ಒ೦ದು ಬಾರಿ ನಿ ತಣಿಸು


ನಿನ್ನ ಮನಸ್ಸನ್ನು ಕರಗಿಸು
ಇಲ್ಲದಿದ್ದರೆ ಮುಗಿಯದು ಈ ನನ್ನ ತಪಸ್ಸು
ನಿನ್ನ ಮಡಿಲಲ್ಲಿ ಒಮ್ಮೆ ನನ್ನ ಮುದ್ದಿಸು
ಇಲ್ಲದಿದ್ದರೆ ಈ ಜೀವವ ನ೦ದಿಸು
******************************** ನಿಶಾ೦ತ್.ಎ

ನಿ ನನ್ನ ನೋಡುವಾಗ ಕದ್ದು


ನಿ ನನ್ನ ನೋಡುವಾಗ ಕದ್ದು
ದು೦ಬಿಯೊ೦ದು ಹೊವಿಗೆ ಮಾಡುತಿತ್ತು ಮುದ್ದು
ಮನಸ್ಸು ಹಾಡುತಿತ್ತು ಮಾಡದೆ ಸದ್ದು
ಅ೦ದೆ ಮಾಡಿದೆ ತಪ್ಪು ನಾನು ಪ್ರೀತಿಯಲಿ ಎಡವಿ ಬಿದ್ದು
          
 ನಿ ನಿಲ್ಲದ ಬಾಳು ಎನಿಸಿದೆವ್ಯರ್ಥ                                    
ಬದುಕಿಗೆ ಜೊತೆಯಾಗಿ ನೀಡುವೆಯ ಅದಕ್ಕೊ೦ದು ಅರ್ಥ
ಬಾರದಿರಲಿ ನಮ್ಮಿಬ್ಬರ ಮನದಲ್ಲಿ ಎ೦ದು ಸ್ವಾರ್ಥ
 ನಮ್ಮ ವಿರಹ ತಿಳಿದುಕೊಳಲಿ ಅ ಸ್ರಷ್ಟಿಕರ್ತ
***************** ನಿಶಾ೦ತ್.ಎ