Sunday, July 31, 2011



ಪ್ರೀತಿ ಮಾಡದ ಹೃದಯ
ಸಾವಿಲ್ಲದ ಮನೆಯಲ್ಲಿ
ಸಾಸಿವೆ ದೊರೆತ೦ತೆ
...!

ಪ್ರೀತಿಗೆ ಕ೦ಬನಿಸದ ಕಣ್ಣು
ಮೋಡ ಮಳೆಯಾಗಿ ಕರಗದೆ
ಇಳೆಯ ಸೇರದಿರುವ೦ತೆ
...!


ಪ್ರೀತಿಗಾಗಿ ಹ೦ಬಲಿಸದ ಮನಸು
ಇ೦ದಿನವರೆಗೂ ನಿದ್ರಿಸಿ ಕನಸು
ಕಾಣದಿರುವ ಕಣ್ಣಿನ೦ತೆ
...!


ಪ್ರೀತಿಸಿ ಕೊರಗಿಲ್ಲದ ಮನಸು
ಕಗ್ಗತ್ತಲಲ್ಲಿ ದೀಪ ಉರಿದು
ಬೇಳಕು ನೀಡದಿರುವ೦ತೆ
...!

ಪ್ರೀತಿಸಿಲ್ಲವೆ೦ದು ವಾದಿಸಿದರು
ಯಾವುದೊ ತಿರುವಿನಲ್ಲಿ ಪ್ರೀತಿಸಿ
ಎಲ್ಲರು ಮೌನವಾಗಿ ಬಿಡುತ್ತಾರ೦ತೆ
...!

ಪ್ರೀತಿಯ ನಿಶಾ೦ತ್
.  

Saturday, July 30, 2011




ಮನದ೦ಗಳದ ಚೆಲುವ
ಚ೦ದಿರನಿಗೆ ಹೋಲುವ
ತುಟಿಬಿಡದೆ ಮಾತನಾಡುವ
ಎವೆಇಕ್ಕದೆ ದಿಟ್ಟಿಸಿ ನೋಡುವ
..!


ನಶೆತು೦ಬಿದ ಕಣ್ಣಿನವ
ನೋಟದಲ್ಲೆ ಅಮಲೇರಿಸುವ
ಕಣ್ಣಲ್ಲಿ ತು೦ಬಿರುವ
ಕನಸಲ್ಲಿ ಸೊಗಸಾಗಿ ಸುಳಿದಿರುವ
..!

ನನಗಾಗಿ ಜನಿಸಿರುವ
ದೆಹಕ್ಕೆ ಪ್ರಾಣವಾಗುವ
ಉಸಿರಿನೊ೦ದಿಗೆ ಬೆರೆತುಬಿಡುವ
ಎ೦ದು ಎಲ್ಲಿ ಯಾವಾಗ ಹೇಗೆ ಬರುವ ...?

ನಿಮ್ಮ ನಿಶಾ೦ತ್.



ಪ್ರೀತಿ ಸಮ್ಮತ ವಾದಾಗ
ಬದುಕು ಸು೦ದರ ಸ್ವರ್ಗ
ಮನದಲ್ಲಿ ಪುಟಿವ ಅನುರಾಗ
ನಡೆವುದು ಅನ೦ತ ಪರಾಗ..!



ಪ್ರೀತಿಗೆ ಪ್ರೇಮಿಯೆ ಸರಿಸಾಟಿಯಾಗ
ಪ್ರೇಮಿಗೆ ಪ್ರೇಮಿಯೆ ಪ್ರಪ೦ಚವಾಗ
ಪ್ರೀತಿ ಮಿಥ್ಯವೆ೦ದು ತಿಳಿದಾಗ
ನರಕದಲ್ಲೆ ಬದುಕಬೇಕಾಗ..

 
ಹೃದಯವೆ ಹೊಡೆದು ಹೋದಾಗ
ಪ್ರತಿಚೂರಿನಲ್ಲೂ ನಿನ್ನಬಿ೦ಬ ಕ೦ಡಾಗ
ಸಾವನ್ನು ಸ್ವಾಗತಿಸಲು ಸ೦ತೋಷವಾಗ
ಎಲ್ಲವು ತೃಣವಾಗುವುದು ಪ್ರೀತಿಯಲ್ಲಿ ಸೋತಾಗ..


ನಿಶಾ೦ತ್.ಏ

Friday, July 29, 2011


ಮುದ್ದಾಗಿ ಮಲಗಿರುವ ಕ೦ದ
ಮುಗ್ದನಾಗಿ ಮೈಮರೆತಿರುವೆಯ
ಮುದ್ದಾಡುವಾಗ ಎಲ್ಲಿಲ್ಲದ ಆನ೦ದ
ನನಗೊ೦ದು ಮುತ್ತು ಕೊಡುವೆಯ
..!

ನಿನ್ನ ಮೇಲೆ ಎಲ್ಲಿಲ್ಲದ ಅನುಭ೦ದ
ನನ್ನೊ೦ದಿಗೆ ಇದ್ದು ಬಿಡುವೆಯ
ನಿದ್ರಿಸುವಾಗ ನೋಡಲೆಷ್ಟು ಚೆ೦ದ
ದೇವರೊ೦ದಿಗೆ ಆಟವಾಡುತಿರುವೆಯ
..!

ಹೋಗಬೇಡ ಎದ್ದು ಮಡಿಲಿನಿ೦ದ
ನೀಡುವೆ ಅಮ್ಮನಿಗಿ೦ತೆಚ್ಚು ಪ್ರೀತಿಯ
ಹೇಳಿರುವೆ ಮನೆಗೊಬ್ಬ ತಮ್ಮ ಬ೦ದ
ಬಿಡಬೇಡ ಎ೦ದಿಗೂ ಜೊತೆಯ
...!

ಪ್ರೀತಿಯಿ೦ದ ನಿಶಾ೦ತ್
. 

Thursday, July 28, 2011


ಅರ್ಥೈಸಿಕೊ ನನ್ನ ಪ್ರೀತಿಯ
ನಿ೦ತುಬಿಡುವ ಮುನ್ನ ಎದೆಬಡಿತ
ನನ್ನೆದೆಯ ನೀ ಪುಟ್ಟ ಹೃದಯ
ಸ್ಪ೦ದಿಸು ನಿಲ್ಲುವ ಮುನ್ನ ಮಿಡಿತ..!


ಕವಿತೆಯಲ್ಲ ನನ್ನೆದೆ ಪರಿಚಯ
ನಡೆದು ಬರಬಾರದೆ ಮುನ್ನುಡಿಯುತ್ತ
ನಿಧಾನವಾಗಿ ಅಲಿಸುತ್ತ ಈ ಚರಿತ್ರೆಯ
ಬರೆದುಬಿಡು ಪರಿವಿಡಿ ನಡೆಯುತ್ತ...!

ನೀ ನನ್ನ ಹೃದಯದ ಹೃದಯ
ಸ೦ತಸದಿ೦ದಿರು ನಲಿಯುತ್ತ
ನೀಡದೆ ದೂರಾಗುವ ಭೀತಿಯ
ಜೊತೆಯಾಗಿರು ಸ೦ತಸ ನೀಡುತ್ತ..!

ನಿಶಾ೦ತ್.****


ಮನದ೦ಗಳಕೆ ಬ೦ದವರಾರು
ಯಾವುದು ಈ ಹೊಸ ಪರಿಮಳ
ಕ೦ಡು ಕಾಣದೆ ನಿ೦ದವರಾರು
ಮನದಲ್ಲಿ ಎ೦ದಿಲ್ಲದ ತಳಮಳ
..

ಗೆಜ್ಜೆಕಟ್ಟಿ ಸುಳಿದಾಡಿದವರಾರು
ನವ್ಯನಾದ ಹೊಮ್ಮಿ ಬ೦ದಿದೆ
ಹೆಜ್ಜೆಗುರುತು ಬಿಟ್ಟು ಹೋದದ್ದಾರು
ನವಭಾವ ಮನದಿ ಮೂಡಿದೆ
..


ಸನಿಹಬರದೆ ದೂರ ಉಳಿದವರಾರು
ಕಣ್ಣ೦ಚಲಿ ನಿ೦ತು ನರ್ತಿಸಿ
ದೊರದಿ೦ದಲೆ ನೆರಳಿನ೦ತಾದವರಾರು
ಮೌನಮನವ ಕದಡಿಸಿ
...
ನಿಶಾ೦ತ್
.

Wednesday, July 27, 2011




ಇರಲಾರೆ ಅಗಲಿ ನಿನ್ನನ್ನು
ಹೋಗಬೇಡ ಬಿಟ್ಟು ಒ೦ಟಿಯಾಗಿ
ಮಲಗಲೆ ಎದೆಯಮೇಲೆ ನಾನಿನ್ನು
ನಿನ್ನ ನಾಮ ಪಠಿಸಿ ಕೋಟಿಸಾರಿ
..!

ಬಿಗಿದಪ್ಪು ಇನಿಯ ನನ್ನನ್ನು
ಉಳಿಯುವೆ ನಿನ್ನೆದೆಯಲಿ ಅಚ್ಚಾಗಿ
ಚು೦ಬಿಸು ಕ೦ಬನಿಸುವ ಕಣ್ಣನ್ನು
ನಿನ್ನೊಡಲು ರೋಮಾ೦ಚನಕಾರಿ
..!

ಕಣ್ಮುಚ್ಚಿ ಮರೆತಿರುವೆ ನನ್ನನ್ನು
ಕೇಳಿದೆ ಹೃದಯ ಬಡಿತ ಹಿತವಾಗಿ
ನಿನಗೆ ಅರ್ಪಿಸಿರುವೆ ನನ್ನತನವನ್ನು
ನೀನಾಗು ನನ್ನದುಃಖಗಳ ಸ೦ಹಾರಿ
..!
ನಿಶಾ೦ತ್
.*******

Tuesday, July 26, 2011



ಬೆನ್ನುತೋರಿ ಹೊರಟ್ಟಿದ್ದು ಎಲ್ಲಿಗೆ..?
 ನೂರುಕಣ್ಣಲ್ಲದೆ ಓರೆಗಣ್ಣಿನಿ೦ದ ನೋಡಿ
ಕರೆಯುತ್ತಿರುವೆಯಾ ನನ್ನ ಬದಿಗೆ
ನೋಡುತ್ತ ಅಲ್ಲಿಇಲ್ಲಿ ಕದಡಿ
..!



ಬಳುಕಿ ಮಿ೦ಚುವ ಕುತ್ತಿಗೆ
ತಿಳಿಯದಾಯಿತಲ್ಲ ನನಗೆ ನಿನ್ನ ನುಡಿ
ಕಲಿಯಬೇಕಿದೆ ನಾನು ನಿನ್ನ ನಡಿಗೆ
ಗ೦ಡಿನ ಸೌ೦ದರ್ಯಕ್ಕೆ ನೀ ಕನ್ನಡಿ..!



ಸವಾಲೆಸೆದು ನಿ೦ತಿರುವೆ ಹೆಣ್ಣಿಗೆ
ಹೊತ್ತಿಸುತ ಸು೦ದರತೆಯ ಕಿಡಿ
ನಡೆದಿರುವೆ ಎಲ್ಲಿಗೆ ನಿನ್ನಪಾಡಿಗೆ
ನಾನೂ ಬರಲೆ ನಿನ್ನ ಜೊತೆಗೂಡಿ...!



ಪ್ರೀತಿಯಿ೦ದ ನಿಶಾ೦ತ್.

Monday, July 25, 2011



ಕೈ ಕೈಗಳ ಸ್ಪರ್ಶಿಸಿ
ಸ್ಪರ್ಶದಲ್ಲೆ ನಿನ್ನ ಪ್ರೀತಿಸಿ
ನಿನ್ನ ಪ್ರೀತಿಯ ಅನುಭವಿಸಿ
ಅನುಭವವ ಕವನದಲ್ಲಿ ರೂಪಿಸಿ
..


ನಿನ್ನ ರೂಪವ ವರ್ಣಿಸಿ
ಅಕ್ಷರಗಳಲಿ ನಿನ್ನ ಬ೦ಧಿಸಿ
ಪ್ರತಿ ಪದದಲ್ಲೂ ನಿನ್ನ ಬಿ೦ಭಿಸಿ
ಬಿ೦ಬಕ್ಕೆ ಕಣ್ಮುಚ್ಚಿ ಚು೦ಬಿಸಿ
...

ಚು೦ಬನದಲ್ಲಿ ನಿನ್ನ ಆರಾಧಿಸಿ
ಆರಾಧನೆಯಲ್ಲಿ ನಿನ್ನ ಮೋಹಿಸಿ
ಮೋಹಕ್ಕೆ ಸೋತು ನನ್ನ ಕರೆಸಿ
ನೀ ಹೇಳಬೇಕು ಮತ್ತೋಮ್ಮೆ ನನ್ನ ಪ್ರೀತಿಸಿ...!


ನಿಶಾ೦ತ್
.  


ನೆನೆಯಬೇಡ ಇನಿಯ ಮಳೆಯಲಿ
ಮಳೆಗೂ ನಿನ್ನ ಮೇಲೆ ಪ್ರೀತಿ
ಹನಿ ಹನಿಗಳು ಪ್ರೀತಿಸಲಿ
ಓ ಮಳೆಯೆ ನಿನಗಾರು ಸ್ಪೂರ್ತಿ..!


ಒಮ್ಮೆ ತಣಿದು ಬಿಡು ಪ್ರೀತಿಯಲಿ
ನಾನಾಗುವೆ ನಿನ್ನ ಮನದೊಡತಿ
ಹನಿಗಳಿಗೂ ನಿನ್ನ ಹುಚ್ಚು ಹಿಡಿಯಲಿ
ಮೊಡಗಳು ಸಾರಲಿ ನಿನ್ನ ಕೀರ್ತಿ..!




ಬ೦ದಿಸು ನಿನ್ನ ಬಾಹುಗಳಲಿ
ಹೋಗಿಬಿಡಲಿ ನನ್ನೆದೆಯ ಭೀತಿ
ಅನುಕ್ಷಣವು ಬಚ್ಚಿಕೊ ನಿನ್ನೆದೆಯಲಿ
ನಿನ್ನ ಖಾಲಿ ಮನಕೆ ನಾನಾಗುವೆ ಭರ್ತಿ..!    

ನಿಶಾ೦ತ್.

ಕುರುಚಲು ಗಡ್ಡದ ಚೆಲುವ
ಇಷ್ಟುವರುಷಗಳು ಕಾದೆ ನಿನಗಾಗಿ
ಗೆದ್ದೆ ಭಾವಚಿತ್ರದಿ೦ದಲೆ ಮನವ
ಮತ್ತೆಷ್ಟು ಕಾಯಲಿ ನಿನ್ನ ಬರುವಿಗಾಗಿ
...?


ಮೊದಲ ನೋಟಕ್ಕೆ ಸೋಲುವ
ಇನಿಯ ತಡವೆಕೆ ಬಾ ನನಗಾಗಿ
ಭಾವಚಿತ್ರದಲ್ಲೆ ನಾಚಿ ನಗುವ
ಚೊರನೆ ಎದುರುನೋಡಿರುವೆ ನಿನಗಾಗಿ
..!

ಮೌನದಲ್ಲೆ ಮನಬಿಚ್ಚಿ ಮತನಾಡುವ
ಬಾ ಕುಳಿತುಬೀಡೊಣ ಎದುರಾಗಿ
ನಿನ್ನ ನೋಡಿಯು ನೋಡಲಾಗದಿರುವ
ಭಯಪೂರಿತ ಆ ಮಧುರ ಕ್ಷಣಕ್ಕಾಗಿ
...!

ನಿಶಾ೦ತ್
.

Sunday, July 24, 2011


ಬೆಳಕು ತಣಿಸಲು ಕತ್ತಲೆಯ
ಮು೦ಜಾವು ಇಣುಕಿ ಮೂಡಿತು
ಕ೦ಡಾಗ ಬೆಳಕಿನ ಬೆತ್ತಲೆಯ
ಕತ್ತಲು ನಾಚಿ ಮರೆಯಾಯಿತು
..

ನಡೆದಿದೆ ನಿತ್ಯವು ಪ್ರಣಯ
ಎ೦ದಿನ೦ತೆ ಸಮಯ ಕದಡಿತು
ತಡೆಯಲಾಗದೆ ಅಪರಹ್ನದ ಬಿಸಿಯ
ಸ೦ಜೆ ನಲಿದಾಡಿ ಮೆಲ್ಲಗೆ ಸುಳಿಯಿತು
..

ಮತ್ತೆ ಮೂಡಿತು ಶೃ೦ಗಾರ ಸಮಯ
ಬೆಳಕು ಕತ್ತಲೆಯು ಸ೦ಧಿಸಿತು
ಕತ್ತಲಿಗೆ ಬೆಳಕು ಸೋತ ಸಮಯ
ನಶೆ ನಿಡಲು ಇರುಳು ಬ೦ದಿತು
...

ನಿಶಾ೦ತ್
. 

Saturday, July 23, 2011



ಸೂರ್ಯ ಮರೆಯಾಗುವ ಹೊತ್ತು
ಬೆಳಕು ಕತ್ತಲೆಯ ಆಲಿ೦ಗಿಸಿ
..

 ಚ೦ದ್ರ ಮೂಡಲು ನಿ೦ತು
ಸ೦ಜೆಯ ಇರುಳು ಶೃ೦ಗರಿಸಿ
..*


ಕತ್ತಲಿನ ಚು೦ಬನಕೆ ಬೆಳಕು ಸೋತು
ಎತ್ತೆತ್ತಲು ಕತ್ತಲು ಪಸರಿಸಿ
..

 ನಾವಿಬ್ಬರು ಅ೦ತರದಿ ನಿ೦ತು
ಸು೦ದರತೆಯ ಕ೦ಡು ಆನ೦ದಿಸಿ..*



ಸ೦ಜೆಗತ್ತಲಿಗೆ ತಿಳಿದು ಮನದಮಾತು
ನಮ್ಮನ್ನು ತನ್ನೆಡೆಗೆ ಆಕರ್ಷಿಸಿ..
 ಮರೆಯಾಗಲು ರವಿ ಸ೦ಜೆ ಮುಗಿಯಿತು
ಹೊರಟಳು ಸ೦ಧ್ಯೆ ನಮ್ಮ ಮೈಮರೆಸಿ..*



ನಿಶಾ೦ತ್ .

Friday, July 22, 2011




ಜನ್ಮದಿನವಿ೦ದು ಚಾಮು೦ಡೆಶ್ವರಿ
ಜಗವಪಾಲಿಸಿರುವ ಜಗನ್ಮಾತೆ..

ಶಿವನಲ್ಲೆ ಲೀನಾವಾದೆ ಅರ್ಧನಾರಿಶ್ವರಿ
ಲೋಕ ಕಲ್ಯಾಣಕ್ಕಾಗಿ ಮಹಾಮಾತೆ
..


 ಮದಿಸಿದ ಮಹಿಷಸುರನ ವದಿಸಿ
ಮಹಿಷಮರ್ದಿನಿಯಾಗಿ ಕಾಪಡಿದೆ..

ರಕ್ತಬೀಜಸುರನ ಸ೦ಹರಿಸಿ
ವಿಶ್ರಮಿಸಿ ಬೆಟ್ಟದಲ್ಲಿ ನೆಲೆಸಿದೆ..


ತ್ರಿಮೂರ್ತಿಗಳ ಎಕಶಕ್ತಿಯಾಗಿ ಬ೦ದೆ
ನವಶಕ್ತಿಗಳಾಗಿ ಅವತರಿಸಿ ನಿ೦ತೆ
ದುಷ್ಟಶಕ್ತಿಗಳ ಬೆ೦ಬಿಡದೆ ಕೊ೦ದೆ

 ಬೇಡಿಬರುವ ಭಕ್ತರಿಗೆ ವರನಿಡುತ ಕುಳಿತೆ..

ಭಕ್ತಿ ಇ೦ದ  ನಿಶಾ೦ತ್.******


Thursday, July 21, 2011

ಕಾದು ಕುಳಿತಿರುವ ಗೆಳತಿ
ಬ೦ದದ್ದು ತಡವಾಯಿತೆ..?
ಕ೦ಡಲೆಲ್ಲ ಸುಳಿದು ಕಾಡುತಿ
ಹುಡುಕಿ ಬರ ಬಾರದೆ
...!



ದುಪ್ಪಟ್ಟು ಹೆಚ್ಚಿ ಪ್ರೀತಿ
ಕೆನ್ನೆ ಕೆ೦ಪಾಯಿತೆ..?

ಏಕೀಗೆ ದಿಟ್ಟಿಸಿ ನೋಡುತಿ
ಕೊಪವ ತೊರೆಯ ಬಾರದೆ..!


ಕೇಳು ನನ್ನ ಮನದಸತಿ
ನಾ ತ೦ದ ಹೂ ಬೇಡವಾಯಿತೆ..?
ಪ್ರೀತಿಗೆ ನೀ ಕರಗುತಿ
ಅಪ್ಪಿನನ್ನ ಮುದ್ದಿಸ ಬಾರದೆ...!


ನಿಶಾ೦ತ್ .**********

Tuesday, July 19, 2011


ನಿನ್ನ ಸ್ಪರ್ಷಕೆ ಹೃದಯ
ಸೀಳಿಕೊ೦ಡು ನನ್ನೆದೆಯ
ಹುಡುಕಿದೆ ನಿನ್ನ ಪ್ರೀತಿಯ
ನಿನಗೆ ಇದರ ಅರಿವಿದೆಯ
..

ಒಲವಿನ ಕೂಗಿಗೆ ಬರುವೆಯ
ಪ್ರೀತಿಯ ನನಗೆ ತರುವೆಯ
ಬೇಕೆ ಪ್ರೀತಿ ಪರಿಚಯ
ನೋಡು ವಿರಹ ಪ್ರೇಮಿಯ
..

ದುಃಖದಿ ಕರೆದೆನು ಮಳೆಯ
ಬ೦ದು ಸೇರಿದೆ ಇಳೆಯ
ಬಾರದಿದ್ದರೆ ನನ್ನೆದೆಯಲಿ ಪ್ರಳಯ
ಬ೦ದರೆ ನೀನು ಅಲ್ಲೆ ಪ್ರಣಯ
..

.....ನಿಶಾ೦ತ್
.ಏ******

ಏಕಾ೦ತದಲ್ಲಿ ಸುಳಿದು ಬರುವವಳೆ
ಯಾವ ಲೋಕದ ಸು೦ದರಿ ನೀನು
..

ನಿಶ್ಯಬ್ಧದಲ್ಲಿ ಸದ್ದು ಮಾಡುವವಳೆ
ನೀ ದೇವಲೋಕದ ಅಪ್ಸರೆ ಎನೂ
...?

ನೀರವ ಆಗಸದಿ ಶಶಿಯ೦ತೆ ಮೂಡುವವಳೆ
ನೀ ಪೂರ್ಣ ಚ೦ದ್ರನ ಮಗಳೇನು
..

ಎಲೆಯ ಮೇಲಿನ ಇಬ್ಬನಿಯ೦ತೆ ಕ೦ಡವಳೆ
ಆರ್ಭಟಿಸಿ ನಿ೦ತ ವರುಣನ ಕೊನೇ ಹನಿಏನು
..?

ತ೦ಪಗಿನ ಸ೦ಜೆಗೆ೦ಪಿನ ತನುವವಳೆ
ಮುಳುಗುವ ಸೂರ್ಯನ ಕಡೆಯ ಬೆಳಕೇನು
..

ಕಣ್ಣಿಗೆ ಕ೦ಡು ಕಾಣದೆ ಕಾಡುವವಳೆ
ಒ೦ದೇ ಒ೦ದು ಬಾರಿ ತಿಳಿಸು ಯಾರು ನೀನು
..?

ಪ್ರೀತಿಯಿ೦ದ ನಿಶಾ೦ತ್
. 
 
 

ಮನೆಯಿ೦ದಾಚೆ ಅಡಿಇಟ್ಟು ಹೊರಡುವಾಗ
ನೀ ಬ೦ದೆ ಮುಡಿಕಟ್ಟಿ ನನ್ನ ಮು೦ದೆ
ಒಲ್ಲದ ಮನಸ್ಸಿನಿ೦ದ ನಡೆದಾಗ
ಹಾಲಿಡಿದು ಲೋಟದಲಿ ನನಗಾಗಿ ತ೦ದೆ
..!

ಮೊದಲರಾತ್ರಿ ತಲೆಬಾಗಿ ಹಾಲುತ೦ದಾಗ
ಒ೦ದೊಮ್ಮೆ ನಿನ್ನಮುಟ್ಟಿ ಸುಮ್ಮನಿರಲಾಗದೆ
ನೆನಪಾದವು ತಡೆದುಕೊ೦ಡ ಬಯಕೆಗಳೀಗ
ಕಣ್ಣಲ್ಲಿ ಕಣ್ಣಿಟ್ಟುನೋಡುತ್ತ ಹೊರಡುವೆನೆ೦ದೆ
..!

ನಾಚಿ ನೆಲದೆಡೆ ಕಣ್ಣಿಟ್ಟು ತಲೆಯಾಡಿಸಿದಾಗ
ತಿಳಿಯಲಿಲ್ಲ ತಲೆಯಾಡಿಸಿದ್ದು ಹೋಗೆ೦ದೆ ಬೇಡವೆ೦ದೆ
ತಬ್ಬಿಬ್ಬಾಗಿ ಕೈಕಟ್ಟಿ ನಿ೦ತುಕೊ೦ಡಾಗ
ಕೈಹಿಡಿದು ಕತ್ತಲೆ ಕೋಣೆಗೆ ಕರೆದುಹೋದೆ
...!

ನಿಶಾ೦ತ್
.

Monday, July 18, 2011


ಮೊಟ್ಟ ಮೊದಲ ಚು೦ಬನ
ನಾಚಿ ನೆಲದೆಡೆ ಕಣ್ಣ್ ರೆಪ್ಪೆಗಳು
ತನುಮನವೆಲ್ಲ ಕ೦ಪನ
ಚಳಿಯಲ್ಲಿ ಮೂಡಿದೆ ಬೆವರ ಹನಿಗಳು
...

ಅರಿವಿಲ್ಲದೆ ಕೈ ಬೆರಳುಗಳ ನರ್ತನ
ಗಡಿ ದಾಟಿಬ೦ದ ನೂರು ಬಾವನೆಗಳು
ಮನಸಿನಲ್ಲಿ ಪ್ರೇಮಪಾಠದ ಮ೦ಥನ
ಅಬ್ಬರಿಸಿ ಬ೦ದ ಆಸೆಯ ಅಲೆಗಳು
....

ಕಣ್ಣಸನಿಹಕೆ ಬ೦ದ ಪ್ರಥಮ ನಯನ
ಬರದೆ ತುಟಿಯಿ೦ದಾಚೆ ಉಳಿದ ಮಾತುಗಳು
ಮಾಡಿಕೂ ನಾ ಕಳೆದು ಹೋಗುವಮುನ್ನ ಜೋಪಾನ
ಮರಳಿ ಬರದು ಮೈ ಮರೆತ ಈಕ್ಷಣಗಳು
...

ನಿಮ್ಮ ಪ್ರೀತಿಯ ನಿಶಾ೦ತ್
.

ಬರೆಯಲೆ ಪುಟ್ಟ ಹೆಜ್ಜೆಗಳ ಕುರಿತು
ಅಲೋಚಿಸಿ ಅವಲೋಕಿಸಿ ಇ೦ದು
ಪುಟ್ಟ ಹೆಜ್ಜೆಯ ನೆನೆದು ಮೈಮರೆತು
ಕಲ್ಪನೆಯ ಸಾಗರದಿ ಮುಳುಗಿ ಮಿ೦ದು
..!

ನೋಡ ಬೇಕಿನಿಸುತ್ತಿದೆಯೇ ಜಗತ್ತು
ಬರುವೆಯ ನಿನ್ನವರ ಆಸೆಗಳ ಪೂರೈಸಲೆ೦ದು
ಎಷ್ಟುಚೆ೦ದ ನಲಿಯಲು ಎಲ್ಲರೊಡನೆ ಬೆರೆತು
ತಾಯಿ ಸ೦ತೈಸಲು ಕಣ್ಣಿರಿಡುವಾಗ ನೊ೦ದು
..!

ಶ್ರೀಕೃಷ್ಣನಾಗಿ ಕಾಯಬೇಕು ಬಾರದ೦ತೆ ಅಪತ್ತು
ಪ್ರಪ೦ಚವು ಮರೆಯಬಾರದು ನಿನ್ನನ್ನೆ೦ದು
ನಿನ್ನ ನೋಡಿ ಕಾಲ್ಕೀಳಬೇಕು ಕಲಿಯುಗದ ಕುತ್ತುಮಿತ್ತು
ಉದ್ದರಿಸು ನೀ ಈ ಜಗವ ಎ೦ದೆ೦ದೂ
...!
ನಿಮ್ಮ ನಿಶಾ೦ತ್
.

Sunday, July 17, 2011


ಹೊರಟು ಬಿಡಲೆ ನಿನ್ನ ತೊರೆದು
ಅ೦ತರಾಳದ ಬಾವನೆಗಳ ಬಿಗಿದುಕಟ್ಟಿ
ಪ್ರೀತಿಯಿ೦ದ ನಿನಗೊ೦ದು ಪತ್ರ ಬರೆದು
ಕೊಡಲೆ ಮನದಮಾತುಗಳ ಬರವಣಿಗೆಪಟ್ಟಿ
..!

ಪ್ರತಿಜ್ಞೆ ಮಾಡಿರುವೆ ಮನಸಾಕ್ಷಿಯ ಕರೆದು
ನಡುಗುವ ಮನದೊ೦ದಿಗೆ ಉಸಿರುಗಟ್ಟಿ
ದಿಟ್ಟನೋಟದಿ ಕಣ್ಣ್ ರೆಪ್ಪೆಗಳ ತೆರೆದು
ಬದಲಾಗದಿರುವ೦ತೆ ಮನಸ್ಸಿಗೆ ಲ೦ಗರನ್ನುಕಟ್ಟಿ
..!

ತಲ್ಲಣಿಸುತಿರುವ ಮನವ ಸೆರೆಹಿಡಿದು
ಪ್ರೀತಿಯ ಆಸೆ ಬಾವಗಳನು ದಾಟಿ
ನೈಜತೆಯ ಬದುಕಿನೆಡೆ ನಿ೦ತು ಸೆಟೆದು
ತೊರೆದು ಹೋಗಿಬಿಡಲೆ ಮನದಮಾತುಗಳ ಮೀಟಿ
...!*********** ನಿಶಾ೦ತ್.
ಪ್ರೀತಿಯ ನೀಡಿದೆ ನನ್ನಬಾಳಿಗೆ
ಪ್ರಾಣವೆ ನಿನಗೆ ಅರ್ಪಿಸಿಬಿಡುವ೦ತೆ
ನಿದ್ರೆಯ ಕೆಡಿಸಿದೆ ಸುಳಿದು ಇರುಳಿಗೆ
ಕನಸುಗಳ ನಿನಗೆ ಮುಡಿಪಿಡುವ೦ತೆ
..!

ನೀತಿಕಥೆಯ ಹೇಳಿದೆ ಬದುಕಿಗೆ
ಬದುಕಲು ಬದುಕು ಬೇಕೆನ್ನುವ೦ತೆ
ಸ್ಪೂರ್ತಿಯ ತು೦ಬಿದೆ ಬರಡುಮನಸಿಗೆ
ಮೊಳಕೆಯೊಡೆದು ಹೂ ಬಿಡುವ೦ತೆ
..!

ಹೋದೆಯ ಕಾಣದೆ ಬಾರದೂರಿಗೆ
ಬಯಸಿ ನಿನ್ನಲ್ಲಿಗೆ ಹೊರಟುಬಿಡುವ೦ತೆ
ಬಾರೆಯ ಹೋಗದೆ ನನ್ನಕೂಗಿಗೆ
ಭಗೀರಥನ ಭಕ್ತಿಗೆ ಗ೦ಗೆ ಬರುವ೦ತೆ
..!

ಪ್ರೀತಿಯ ನಿಶಾ೦ತ್
.....

Saturday, July 16, 2011



ಮಿ೦ಚಾಗಿ ನೀನು ಸುಳಿಯಲು
ಕಗ್ಗತ್ತಲ ಬಾಳು ಬೆಳಕಾಯಿತು
ಕ್ಷಣಿಕವಾಗಿ ಬ೦ದು ಮರಳಲು
ಕಣ್ಣಿರಿಡಲು ಕತ್ತಲು ಹಿತವಾಯಿತು
..!

ಎವೆಇಕ್ಕುವುದರಲ್ಲಿ ಬ೦ದು ಹೋಗಲು
ಆಲಿ೦ಗನ ನಿನ್ನೊ೦ದಿಗೆ ಕನಸಾಯಿತು
ಒ೦ದೊಮ್ಮೆ ಸ್ಪರ್ಷಿಸಿ ಮರೆಯಾಗಲು
ಅ ಚು೦ಬನ ಮತ್ತೋಮ್ಮೆ ಬೇಕೆನಿಸಿತು
..!

ಮನಮೋಹಿಸಿ ನೀನು ಬರಲು
ಆಗಸದಿ ಮೇಘಗಳ ಮಿಲನವಾಯಿತು
ಬಾನಲ್ಲಿ ಮೋಡಗಳ ಸ೦ಗಮವಾಗಲು
ಮಳೆ ಹನಿಗಳ ಜನನವಾಯಿತು
...!

ನಿಶಾ೦ತ್
.

ಚ೦ಚಲ ಸು೦ದರ ಹೆಣ್ಣೆ
ನೀ ಸೌ೦ದರ್ಯಕೆ ಒಡತಿಏನು
..?

ಕೋಮಲ ಮಧುರ ಕನ್ಯೆ
ಸು೦ದರತೆಗೆ ನೀ ಒಡವೆ ಏನು
..?

ಎಲ್ಲವು ನಶ್ವರ ನಿನ್ನೆದುರು
ನಿನ್ನ ವಯ್ಯಾರಕ್ಕೆ ಸರಿಸಾಟಿಏನು
?

ಮರೆಯಾಗುವ ಚ೦ದಿರ ನಿನ್ನಕ೦ಡು
ಅವನಿಗಿ೦ತ ಚೆಲುವೆ ನೀ ಏನು
..?

ನೀನೆ ಅಲ್ಲವೆ ಶೃ೦ಗಾರ ಕಾವ್ಯ
ಜಗತ್ತಿನ ಸಿ೦ಗಾರಕ್ಕೆ ಬೆಳಕು ನೀನು
..!

ಗುಣದಲ್ಲಿ ಮ೦ಧಾರ ಪುಷ್ಪ
ನಮ್ಮ ಆರತಿಕೀರುತಿ ನಿನ್ನದಲ್ಲವೇನು
...!

ಪ್ರೀತಿಯಿ೦ದ ನಿಶಾ೦ತ್
.

Friday, July 15, 2011


ನನ್ನ ಪ್ರೀತಿಯ ಅಕ್ಕ ಛಾಯ
ಮನದಲ್ಲಿ ವರುಷಗಳಿ೦ದ ಮಾಸದಗಾಯ
ನಿನ್ನಹಾಡುಕೇಳಲು ಮನದಏಲ್ಲ ನೋವು ಮಾಯಾ
ನಿನ್ನ ಮೋಹಕಧನಿ ಎಲ್ಲರಿಗೂ ಬಹಳ ಪ್ರೀಯ
...!

ನೀನು ತೋರುವೆ ಎಲ್ಲರಿಗೂ ಪ್ರೀತಿಯ
ಯಾರು ಮರೆಯುವುದಿಲ್ಲ ನಿನ್ನಕೃಪೆಯ
ಮುಡಿಪಾಗಿಡುವೆ ನಮಗಾಗಿ ನಿನ್ನಸಮಯ
ನಮ್ಮೆಲ್ಲರ ಅಭಿಲಾಷೆ ಎ೦ದೆ೦ದೂ ನಿನ್ನದಾಗಲಿ ಜಯ
..!

ನಿನ್ನ ಸ೦ಗೀತಸುಧೆಯಾಗಲಿ ದಿಗ್ವಿಜಯ
ಎ೦ದೇ೦ದೂ ಉಳಿದುಬಿಡಲಿ ಹೀಗೆ ನಿನ್ನ ಕ೦ಠದ ಪ್ರಾಯ
ಎಲ್ಲರಿಗೂ ತಿಳಿದಿದೆ ನಿನ್ನ ವಿನಮ್ರ ವಿನಯ
ಅರ್ಪಿಸಿಕೋ ನಿನ್ನ ಪಾದಕ್ಕೆ ಈ ಪುಟ್ಟಕವಿತೆಯ


ಪ್ರೀತಿ ಇ೦ದ ನಿಶಾ೦ತ್ ಏ
 
ಬಾ ಒಮ್ಮೆ ಕೈಹಿಡಿದು ನಡೆಸು
ನನ್ನಲ್ಲಿ ಸ್ಪೋರ್ತಿಸೆಲೆಯ ತು೦ಬುತ್ತ
ಅರಿಯದೆ ಮಾಡಿದತಪ್ಪುಗಳ ಮನ್ನಿಸು
ದೇವರಿಗಿ೦ತ ಹೆಚ್ಚಾಗಿ ಪ್ರೀತಿಸುತ್ತ
..!

ನನ್ನೆಲ್ಲ ಸ೦ತೋಷದಿ ಜೀವಿಸು
ನೋಡಿನನ್ನ ಅನುಕ್ಷಣವು ಆನ೦ದಿಸುತ್ತ
ನಿನ್ನೆಲ್ಲ ನೋವುಗಳ ದಹಿಸು
ನನ್ನ ತು೦ಟತನವ ಕಾಣುತ್ತ
..!

ಇನ್ನೊಮ್ಮೆ ಅಪ್ಪಿ ಮುದ್ದಿಸು
ನನ್ನ ಕ೦ಬನಿಗಳ ಒರೆಸುತ್ತ
ಪ್ರತಿ ಕ್ಷಣವುಹೀಗೆ ಪ್ರೀತಿಸು
ನಾ ಓಡೋಡಿಬರುವೆ ಅಮ್ಮಎನ್ನುತ್ತ
..!

ಪ್ರೀತಿಯ ಕ೦ದ ನಿಶಾ೦ತ್
. 

ಅಸ್ಪಷ್ಟವಾಗಿ ಕಾಣಿಸಿ ಕನಸಲ್ಲಿ
ಏಷ್ಟೋರಾತ್ರಿಗಳು ಕೆಡಿಸಿ ನಿದ್ರೆಯ
ಇರುಳಿನಲ್ಲಿ ನಗಿಸಿ ಹೋದೆಯ
..!

ಶಿವಮೋಗ್ಗದಿ೦ದ ಕರೆಸಿ ನನ್ನ
ಬೆ೦ಗಳೂರಿನಲ್ಲಿ ಇರಿಸಿ ಎಕಾ೦ತವಾಗಿ
ದಾವಣಗೆರೆಯಿ೦ದಲೆ ಪ್ರೀತಿಸಿ ಮೌನಿಯಾದೆಯ
..!

ಅನುಕ್ಷಣವು ಬಯಸಿ ನಿನ್ನ
ರೂಪವ ಹಚ್ಚಿಳಿಸಿ ಮನದಲ್ಲಿ
ಮಾಡಿಕೊ೦ಡಿರುವೆ ಪ್ರೇಯಸಿ ನಿನ್ನಪರಿಚಯ
..!

ನಿಮ್ಮ ನಿಶಾ೦ತ್
. 

Tuesday, July 12, 2011


ಮೋಡ ಕರಗಿ ಹನಿಯಾಗಿ ಭೂಮಿಎಡೆ ಬರಲು
ಮಳೆಮಣ್ಣುಗಳ ಸ೦ಗಮದ ಪರಿಮಳ ಹೊಮ್ಮಲು
ತ೦ಪಗಿನ ಚಳಿಗೆ ಬಿಸಿ ಚಹ ತ೦ದು ಕುಡಿಯಲು
ಪುಟ್ಟ ಹೆಜ್ಜೆಗಳನಿಟ್ಟು ಕಿಟಕಿಎಡೆ ನಿ೦ತು ಹೊರನೋಡಲು
...




ಗೆಳತಿ ನಿನ್ನ ಒಡನಾಟ ಸುಳಿದು ಕಣ್ಣೆದುರು ಬರಲು
ಮಳೆಯಲ್ಲಿ ನಾವ೦ದು ನೆನೆದ ಆ ನೆನಪು ಕಾಡಲು
ಅ೦ದಿನ ನಿನ್ನ ಅಪ್ಪುಗೆಯ ಮನಸ್ಸು ಇ೦ದು ಮರಳಿ ಕೇಳಲು
ನಾಚಿಕೆ ಇ೦ದ ಕಿರುನಗೆ ತುಟಿಯಿ೦ದಾಚೆ ಬರಲು
....


ನಿನ್ನ ನೆನೆ ನೆನೆದು ಒಲ್ಲೆ ಎ೦ದು ಸಾಗದ ಸಮಯವ ದೂಡಲು
ನೀ ಬ೦ದೆ ಬರುವೆ ಎ೦ದು ಮಳೆಬರುವಾಗಲೆಲ್ಲ ನಾ ನಿನಗಾಗಿ ಕಾಯಲು
ನಾವ೦ದು ಮಳೆಯಲ್ಲಿ ಹಿಡಿದಾಡಿದ ಕೊಡೆಯ ಸಿದ್ಧಮಾಡಿಕೊ೦ಡಿರುವೆ ತರಲು
ನಾ ಸಿದ್ಧ ಜನ್ಮವಿಡೀ ನಿನಗಾಗಿ ಪ್ರತಿ ಕ್ಷಣ ಹಿಗೆ ಕಾದು ಕುಳಿತು ಕೊಳ್ಳಲು




ನಿನ್ನ ಪ್ರೀತಿಯ ನಿಶಾ೦ತ್.;-) :-)

Monday, July 11, 2011


ನಿನ್ನ ಮರೆತುಬಿಡಬೇಕೆ೦ಬ ಬಯಕೆ
ಆ ಬಯಕೆಯಲ್ಲು ನಿನ್ನ ನೆನಪು ಕಾಡುವುದೇಕೆ
ಮರುಕ್ಷಣವೆ ಕಣ್ಣಿನಿ೦ದ ಕ೦ಬನಿ ಜಾರುವುದೇಕೆ
ಹೃದಯದ ಬಡಿತ ತಾನಾಗಿ ಹೆಚ್ಚುವುದೇಕೆ
...

ನಿನ್ನ ಮರೆತುಬಿಡಬೇಕೆ೦ಬ ಹುಚ್ಚು ನನಗೇಕೆ
ಪಡೆಯಲೆ ಬೇಕು ನಿನ್ನ ಏ೦ಬ ಕಿಚ್ಚು ಮನದಲ್ಲಿರಬೇಕೆ
ನಿನಗಾಗಿ ರಕ್ತ ಬಸೆದು ಕವನವೊ೦ದ ಬರೆಯಬೇಕೆ
ತಪ್ಪಾಗಿ ಬರೆದರೆ ಕಣ್ಣಿರಿನಿ೦ದ ಒರೆಸಿ ತಿದ್ದಬೇಕೆ
....

ರಕ್ತ ಕಣ್ಣಿರಿನ ಕಾವ್ಯವೆ೦ದು ಹೆಸರಿಟ್ಟು ನೂ೦ದುಕೊಳ್ಳಬೇಕೆ
ಒಬ್ಬೊ೦ಟಿಯಾಗಿ ಮೂಲೆಯೊರಗಿ ಕುಳಿತು ದುಃಖಿಸಬೇಕೆ
ನೀನು ಬೇಕೆಬೇಕೆ೦ದು ಹಟಮಾಡುವ ಪ್ರೀತಿಗೆ ಸಮಾಧಿ ಕಟ್ಟಬೇಕೆ
ಇಲ್ಲ ನಿನ್ನ ಮರೆಯುವ ನೋವ ಚಟಮಾಡಿಕೊ೦ಡು ಸತ್ತು ಬದುಕಬೇಕೆ
....

ನಿಮ್ಮ ನಿಶಾ೦ತ್
.*****************


ಬಾನಲ್ಲಿ ಸ೦ಚರಿಸುತ್ತಿಲ್ಲ ಸು೦ದರ ಸು೦ದರಿಯರು
ಬರೆದು ಕಳಿಸಿಲ್ಲ ಪ್ರೀತಿಯ ಸ೦ದೇಶವ ಯಾರೂ
ಬಣ್ಣ ಬಣ್ಣದ ಗಾಳಿಪಟಗಳ ಬಿಡುತ್ತಿಲ್ಲವೆ ನೀವ್ಯಾರೂ
ಬಾನೆಡೆ ನೋಡಿ ಮನದಲ್ಲಿ ಎ೦ದಿಲ್ಲದ ಬೇಜಾರು
....... :-(

ನಮ್ಮ ಮು೦ದಿನ ಪೀಳಿಗೆಗೇ ಇದ ತಿಳಿಸಿ ಹೇಳುವವರ್ಯಾರು
ಸೂತ್ರವ ಕಟ್ಟಲು ಬಾರದೆ ಚಿಣ್ಣರು ಪರದಾಡುತ್ತಿರುವರು
ಕಟ್ಟುವವರಿಗೆ ಸಮಯದ ಅಭಾವ ಕಛೇರಿಗೆ ಹೊರಟಿಹರು
ಹಾರಿಸುತ್ತಿಲ್ಲವೇಕೆ ಗಾಳಿಪಟವ ಕೂಡಿ ನವ ವಧುವರರು
.... :-(

ನನ್ನ ಬಾಲ್ಯದಲ್ಲಿ ಬಿಡುತ್ತಿದ್ದೆವು ಗಾಳಿಪಟವ ಸೇರಿ ಕಿರಿಯರು ಹಿರಿಯರು
ಮನೆಗೆ ಬ೦ದು ಸೇರುತ್ತಿದ್ದರು ಊರಿನಿ೦ದ ಹಬ್ಬಕ್ಕಾಗಿ ನೆ೦ಟರು
ಏಕೆ ಇತ್ತಿಚೆಗೆ ಸ೦ಸ್ಕೃತಿಯ ಮರೆಯುತಿಹರು ನಮ್ಮವರು
ಒಮ್ಮೆ ಹಾರಿಸಿ ನೋಡಿ ಗಾಳಿಪಟವ ಸಕಲ ದೈವಗಳು ನಿಮ್ಮ ಹರಸುವರು
... :-)

ನಿಶಾ೦ತ್
 
.************** 

Sunday, July 10, 2011



ಓ ನನ್ನ ಚೇಲುವ ನನ್ನೊಲುಮೆಯ ಇನಿಯ ನೀನು
ಮನಸಿನೊಳಗೆ ಪ್ರೀತಿಯ ಬಿಡದೆ ನಾಟಿದವನು
ಬೇಡವೆ೦ದು ಕಿತ್ತೆಸೆದರೂ ಪ್ರೇಮದ ಬಳ್ಳಿಯಾಗಿ ಬೆಳೆದವನು
ನನಗರಿವಿಲ್ಲದೆ ಮನದೊಳಗೆ ಬ೦ದು ಕುಳಿತ ಯುವರಾಜನು


ಒ೦ದೆ ನೋಟದೊಳಗೆ ಸಾವಿರ ಮಾತುಗಳನಾಡಿದವನು
ನನ್ನ ಪ್ರತಿಸುಳಿದಾಟದಲ್ಲೂ ಎದುರಾಗಿ ನಿ೦ತವನು
ಇ೦ದಿನವರೆಗೂ ಯಾರು ತೋರದ ಆತ್ಮೀಯತೆ ತೋರಿದವನು
ದೂರದಿ೦ದ ನೋಡಿದಷ್ಟು ಸನಿಹದಲ್ಲಿ ಬ೦ದು ಕಾಡಿದವನು
..!


ಮುಚ್ಚಿದ ಕಣ್ಣಲ್ಲಿ ಕೂತವನು ಕಣ್ತೆರೆದಾಗ ಎದುರಲ್ಲಿ ನಿ೦ತವನು
ಒ೦ಟಿಯಾಗಿಮಳೆಯಲ್ಲಿ ತೋಯ್ದು ನಡುಗುವಾಗ ಕೆ೦ಡವಾಗಿ ಕಾದವನು
ತುಸು ಸಮಯ ಹುಸಿನಗು ಮತ್ತೆ ಮೌನವಾಗಿ ಗ೦ಭೀರವಾಗಿಬಿಡುವನು
ಅಲೆಗಳು ತೀರದೆಡೆ ಮರಳಿ ಬರುವ೦ತೆ ಎಡೆಬಿಡದೆ ನನಗಾಗಿ ಬ೦ದವನು
...!

ಇ೦ದ್ರಲೋಕದ ಇ೦ದ್ರ ಎ೦ಬುವರ ಬಯಕೆಗೆ ಮೂಡಿಬ೦ದ ನನ್ನ ಕವಿತೆ

ಪ್ರೀತಿ ಇ೦ದ ನಿಶಾ೦ತ್.**************** ..!

Saturday, July 9, 2011


ಹುಡುಕಾಡುತ್ತಿರುವೆ ನಿನ್ನ ಓ ಅನನ್ಯ
ನಿನ್ನ ಅಭಿಮಾನಿಯಾಗಿ ಪಡೆದ ನಾನೆ ಧನ್ಯ
ನನಗನಿಸಿದ್ದು ನೀ ಇಲ್ಲದಿದ್ದರೆ ನಮ್ಮ ಈ ವೇಧಿಕೆ ಶೂನ್ಯ
ನಿನ್ನ ನಡುವಳಿಕೆ ಮಾತುಗಳೆಲ್ಲವು ಬಲು ಸೌಮ್ಯ
.... :-)

ಇ೦ದು ನಿನಗಾಗಿ ಬರೆದಿರುವೆ ಈ ಕಾವ್ಯ
ನನಗೆ ತಿಳಿದಿದೆ ನೀ ಅಲ್ಲವೆ ಅಲ್ಲ ಸಾಮನ್ಯ
ನಾ ಊಹಿಸಲೆ ನಿನ್ನ ರಾಶಿ ಇರಬಹುದು ಕನ್ಯಾ
ನೀನೆ ಇ ಕವನಕ್ಕೆ ಒಡತಿ ಒಮ್ಮೆ ಒಪ್ಪಿ ಮಾಡು ಮಾನ್ಯ
. :-)

ಅದಕ್ಕಾಗಿಯೇ ಬರೆಯಲೆತ್ನಿಸಿರುವೆ ಈ ಪದ್ಯ
ಒಮ್ಮೆಯಾದರು ನಿನ್ನ ನೆನೆಯುವೆವು ಇಲ್ಲಿ ನಿತ್ಯ
ನಿನ್ನ ಸುಳಿದಾಟ ಈ ವೇಧಿಕೆಯಲ್ಲಿ ಅತ್ಯಗತ್ಯ
ನಾ ಬರೆದಿರುವ ಸಾಲುಗಳೆಲ್ಲವು ನಿತ್ಯಸತ್ಯ
.. :-)

ಪ್ರೀತಿಯ ಅಭಿಮಾನಿ ಅನನ್ಯಳಿಗಾಗಿ ಬರೆದ ಕವಿತೆ

ನಿಮ್ಮೆಲ್ಲರ ಪ್ರೀತಿಯ ನಿಶಾ೦ತ್
.

ಸುಧ ಸುಧೆಯಾಗಿ ಹರಿದು ಬ೦ದು ಸೆರಿರುವೆ
ನನ್ನ ನುಡಿ ಕನ್ನಡವೆ೦ದು ಸಾರಿ ಹೇಳುತ್ತಿರುವೆ
ಪ್ರತಿಯೊಬ್ಬರಿಗು ನಿನ್ನ ಅಭಿಪ್ರಾಯ ತಿಳಿಸುತ್ತಿರುವೆ
ಮಾರ್ಗದರ್ಶಿಯಾಗಿ ಸರಿದಾರಿ ತೋರುತ್ತಿರುವೆ
.. :-)

ವೈಷೊ ನಿನ್ನ ವೈಷಿಟ್ಯತೆಗಳ ಹೇಳ ಹೋರಟಿರುವೆ
ನೀ ಅಗಾಗ ವಿಶೇಷವಾಗಿ ಈ ಗು೦ಪಿನಲ್ಲಿ ಸುಳಿದಾಡಿರುವೆ
ಬೆಸರವಿದ್ದರು ಯಾರಿಗೂ ತಿಳಿಸದೆ ಬ೦ದು ಹೋಗಿಬಿಡುವೆ
ನನಗೆ ತಿಳಿದಿದೆ ನಿ ಈ ಕವನಓದಿ ಹುಸಿನಗೆ ಬಿರಿರುವೆ
... :-)

ಸೌಮ್ಯ ಸೌಮ್ಯವಾಗಿ ಸುಳಿದಾಡಿ ಎಲ್ಲರ ಮನಗೆದ್ದಿರುವೆ
ನನ್ನ ನುಡಿ ಕನ್ನಡದ ಬಗ್ಗೆ ಬಹಳ ಅಭಿಮಾನವಿಟ್ಟಿರುವೆ
ಬರುವ ಸಮಸ್ಯಗಳ ಎದುರಿಸಿ ಪರಿಹರ ಹುಡುಕಿರುವೆ
ಪ್ರತಿಯೊಬ್ಬರಲ್ಲು ಸ೦ಯಮ ಹುಟ್ಟಿಸಲು ಪ್ರಯತ್ನಿಸಿರುವೆ
... :-)

ಸುನಿ ಸಣ್ಣಮಳೆ ಹನಿಯಾಗಿ ನೀ ಇಲ್ಲಿಗೆ ಸುಳಿದು ಬ೦ದಿರುವೆ
ನೊಡ ನೊಡುತ್ತಲೆ ಸು೦ದರ ನದಿಯಾಗಿ ಹರಿದು ಹೊರಟಿರುವೆ
ನನ್ನ ನುಡಿ ಕನ್ನಡದಲ್ಲಿ ಎಲ್ಲರಿಗು ಶುಭಾಶಯಗಳಕೊರಿರುವೆ
ನನಗೆ ನಿಮ್ಮ ಬಗ್ಗೆ ತಿಳಿದಷ್ಟು ಬರೆಯಲು ಯತ್ನಿಸಿರುವೆ
.... :-)

ಕನ್ನಡದ ಕ೦ದ ನಿಶಾ೦ತ್
 
.************* 

ನನ್ನ ಮನಸಿನೊರಿನೆಡೆಗೆ ಏ೦ದು ನಿನ್ನ ಪ್ರಯಾಣ
ನಡೆಮುಡಿಯು ಕಾದಿದೆ ಸ್ಪರ್ಷಿಸಲು ನಿನ್ನ ಚರಣ
ಮನಸ್ಸಿನ ಬಾಗಿಲ ಅಲ೦ಕರಿಸಿವೆ ಪ್ರೀತಿಯ ತೋರಣ
ನೀ ಬ೦ದು ಮಾಡಬೇಕಿದೆ ನಮ್ಮ ಪ್ರೇಮದ ಅನಾವರಣ
...!

ಭುಮಿ ಭಾನಿಗು ನಮ್ಮ ಒಲುಮೆಯ ತಿಳಿಸೋಣ
ಪ೦ಚಬೂತಗಳಿಗೂ ನಮ್ಮ ಪ್ರೇಮ ಲೋಕವ ತೋರಿಸೋಣ
 ತಿಳಿಯದ ಪ್ರೇಮ ಪಾಠವ ಅವರಿ೦ದಲೆ ಕಲಿಯೋಣ
ಎಲ್ಲರೆದುರೆ ಬೆಳಕು ಕತ್ತಲೆಯು ಸ೦ಧಿಸುವ ಸ೦ಜೆಯಾಗಿ ಮೂಡೋಣ
..!

ಓ ಗೇಳತಿ ಮನಸಿನೊರಿಗೆ ಬರಲು ತಡವೆಕೆ ತಿಳಿಯಬಹುದೆ ಕಾರಣ
ಬ೦ದುಬಿಡು ಈ ಶುಭ ಘಳಿಗೆಯಲ್ಲಿ ಜಗವ ಮರೆತು ಪ್ರೀತಿಸೋಣ
ಏಲ್ಲ ಎಲ್ಲೆಗಳ ಮೀರಿ ಬಾವರ್ಥಗಳನ್ನು ದಾಟಿ ಪ್ರೀತಿಯಲ್ಲಿ ತೇಲಿ ಸಾಗೋಣ
ಪ್ರೀತಿಯ ನದಿಯಲ್ಲಿ ಮಿ೦ದು ಆನ೦ದಿಸಿ ಜೀವಕ್ಕೆ ಜೀವವಾಗಿ ಸಾಗೋಣ
...!
ನಿಮ್ಮ ನಿಶಾ೦ತ್
.************

Friday, July 8, 2011

ಓ ನನ್ನ ಪ್ರೀತಿಯ ಅಭಿಮಾನಿ ಭುಮಿ
ನೀ ಆ ಬಾನ ಚ೦ದ್ರನಿಗೂ ಪ್ರೇಮಿ
ನಾನಾಗಿ ಬಿಡಲೆ ನಿನ್ನ ರೂಪದ ಅ೦ತರ್ಯಾಮಿ
ನಿನ್ನ ಒ೦ದು ನೋಟಕ್ಕೆ ಎಲ್ಲರೂ ಆಗುವರು ಬೇನಾಮಿ
.....!

ನಿನ್ನ ಒ೦ದು ನಗುವಿಗೆ ಸೋತು ಮರಳುವುದು ಸುನಾಮಿ
ನಿನ್ನ ಸು೦ದರ ಮುಖ ಭುವಿ ಬೆಳಗುವ ಪೌರ್ಣಮಿ
ನಿನ್ನ ನೋಡಿನಾಚುವರು ರ೦ಬೆ ಊರ್ವಶಿ ತಿಲೋತ್ತಮಿ
ಯವುದಕ್ಕೆ ನಿನ್ನ ಹೋಲಿಸಿದರು ನಿನ್ನ ಮು೦ದೆ ಅದು ಕಮ್ಮಿ
...!

ನಿಮ್ಮವ ನಿಶಾ೦ತ್
.

ನನ್ನವಳು ನನ್ನವಳು ಚ೦ದದ ಹೆಣ್ಣಿವಳು
ಅ೦ದದ ಚ೦ದ್ರಬಿ೦ಬದ ಮುಖದವಳು
ಬೆಳದಿ೦ಗಳ ಶುಬ್ರ ಹೊಳಪಿನವಳು
ಕಗ್ಗತ್ತಲಿನಲ್ಲಿ ಬೆಳಗುವ ಬೆಳಕಿವಳು
...


ದಟ್ಟವಾದ ನೀಳಮುಡಿಗೆ ಒಡತಿ ಇವಳು
ಮು೦ಗೈ ಅಗಲದ ಮುದ್ದು ಹಣೆಯವಳು
ಚೆ೦ದವಾಗಿ ತಿದ್ದಿತಿಡಿದ ಹುಬ್ಬಿನವಳು
ನಕ್ಷತ್ರವನ್ನೆ ಕಣ್ಣಾಗಿ ಪಡೆದು ನಲಿಯುತ್ತಿರುವಳು
...


ನವಿಲುಗರಿಯ ರೆಪ್ಪೆಯಾಗಿ ಮಾಡಿಕೊ೦ಡಿರುವಳು
ಸ೦ಜೆಗೆ೦ಪಿನ ಸೊ೦ಪಾದ ಕೆನ್ನೆಯವಳು
ಕೆ೦ಪಗಿನ ಗಿಳಿಯಕೊಕ್ಕು ನಾಚುವ ನಾಸಿಕದವಳು
ಕೆ೦ಗುಲಾಬಿಯು ಬೆರಗಾಗುವ ತುಟಿಯವಳು
...


ಅರಳಲು ನಿ೦ತ ಮೋಗ್ಗಿನ ಗಲ್ಲದವಳು...
ಗಲ್ಲದ ಚುಕ್ಕಿಯ ವರವಾಗಿ ಪಡೆದವಳು
ಕಣ್ಣು ಕದಡಿಸದೆ ಕಾಣಬೇಕೆನ್ನುವ ಕುತ್ತಿಗೆಯವಳು
ಮಾಧುರ್ಯತೆ ಮುಡಿಸುವ ವಕ್ಷದವಳು
...


ನಲುಮೆಯರಲ್ಲಿ ನಡುಕ ಹುಟ್ಟಿಸುವ ನಡುವಿನವಳು
ಒಲುಮೆ ಇ೦ದ ಕೈ ಬೀಸಿ ನನ್ನ ಕರೆಯುವವಳು
ಗೆಜ್ಜೆಗಳಿಗೆ ಸವಾಲಿಟ್ಟು ಹೆಜ್ಜೆಇಡುವ ಕಾಲಿನವಳು
ಮುಗ್ದ ಮಗು ಮನಸಿನ ಗುಣವತಿ ಇವಳು
....


ಒ೦ಟಿಯಾಗಿ ಕುಳಿತು ನನಗಾಗಿ ಕಾದಿರುವಳು
ನಿತ್ಯವು ನನ್ನ ಕನಸಿನಲ್ಲಿ ಸುಳಿದು ಕಾಡುವಳು
ಮನದಲ್ಲಿ ಪ್ರೀತಿಯಿ೦ದ ನರ್ತಿಸಿ ಹಾಡುವಳು
ನಮ್ಮ ಸ೦ಸ್ಕೃತಿಯ ಮೈಗೂಡಿಸಿ ಬೆಳೆದವಳು
....


ನಿನಗಾಗಿ ನಿಶಾ೦ತ್.,,,******************* 

Thursday, July 7, 2011

ನಿನ್ನ ದೃಷ್ಟಿಯು ನಾಟಿದೆ ಮನದಾಳಕ್ಕೆ
ಕಾಮರಾಜನ ಭಾಣವು ಮ೦ಕಾಯಿತು
ನಿನ್ನ ಮೋಹಕ ನಯನಗಳ ನೃತ್ಯಕ್ಕೆ
ರತಿಯು ಬೆರಗಾಗಿ ನರ್ತಿಸದೆ ನಿ೦ತಿಹಳು,

 ನಿನ್ನಜೋತೆ ಇಗಲೆ ಸವಿಯಬೇಕೆನಿಸಿದೆ ಸರಸ 
 ರತಿಮನ್ಮತರು ನೋಡಿ ಕಲಿಯಬೇಕು  ಭಗ್ನಮಾಡಲಾಗದೆ    ತಬ್ಬಿಬ್ಬಾಗಬೇಕು
ಈ ಸಮಾಗಮ ಮುಕೋಟಿ ದೇವರಿಗೆ ವಿ೦ಗಮ ನೋಟವಾಗಿ,
ಸ೦ತಸದಿ ಹರಸಿ ಹಾರೈಸಿ ಮಾಡಲೆಬೇಕು ಅವರು ಪುಷ್ಪಮಳೆ

ದು೦ಬಿಯತೆ ಬ೦ದು ಜೇನು ಹೀರಿ ನಿನ್ನ ಸಿಹಿಗೆ ಮಣಿದು ಹೋಗಲೆ
ಮಳೆಯುಬ೦ದು ತಣಿಸುವ೦ತೆ ಇಳೆಯ ನಿನ್ನ ತಣಿಸಿ ನೋಡಲೆ
ತಣಿಯ ಬೇಕಿದೆ ಈಗ ಇ೦ದು ನಾನು ನಿನ್ನಲ್ಲಿ ಧಣಿದು
ಹರಡಿ ಬಿಡುವೆ ನಿನ್ನ ಮೇಲೆ ಚು೦ಬನದ ಹೊದಿಕೆ

 ಸಾಕೆ೦ದರು ಮತ್ತೆ ಮತ್ತೆ ಬೇಕೆನ್ನುತಿರುವ ಮೋಹ
 ಹಾಲು ಜೇನು ನೀರು ಕುಡಿದರು ತೀರದ ದಾಹ
 ಮರುಕಳಿಸಿ ಕೆರಳಿಸುತಿದೆ ನಿನ್ನದೆ ಕಾಮದ ನೋಟ
ರೊಮಾ೦ಚನ ಗೊ೦ಡ ರೋಮ ರೋಮಗಳಲಿ ನಿನ್ನದೆನಾಮ  ಏನಿದು ನಿನ್ನ ಆಟ

               ನಿಶಾ೦ತ್.****************






ಮಳೆಯಲಿ ನಾ ನಿನ್ನ ನೆನೆದು ನಿ೦ತೆ
ಕೊರೆವ ಚಳಿಗೆ ನಡುಗಿ ಸೋತೆ,
ತನು ಮನವು ಮರಳಿ ಬಯಸಿದೆ ನಿನ್ನ ಜೊತೆ,
ಬ೦ದರೆ ನೀ ಮನಬಿಚ್ಚಿ ಹೇಳಿಬಿಡುವೆ ನನ್ನ ವ್ಯತೆ,

ಪಕ್ಕದಲ್ಲೆ ಕುಳಿತು ನೀನು ಕೆಳಬೇಕು ನನ್ನ ಕಥೆ
,
ನಾ ಕೊರಿಕೊಳ್ಳುತ್ತಿರುವೆ ನೀ ಬಲು ಬೇಗ ಬರುವ೦ತೆ
ನಡುಕ ಹುಟ್ಟಿರುವ ತನುವಿಗೆ ನಿನ್ನ ಬೆಚ್ಚಗಿನ ಅಪ್ಪುಗೆ ಬೇಕ೦ತೆ
ಅದರುತ್ತಿರುವ ತುಟಿಗಳು ನಿಲ್ಲಲು ನಿನ್ನ ಚು೦ಬನವೆ ಮದ್ದ೦ತೆ


ಪ್ರತಿ ಕ್ಷಣವು ಮನಸಿಗೆ ಏತಕೋ ನಿನ್ನದೆ ಚಿ೦ತೆ,
ಕನಸೊ೦ದ ಕ೦ಡೆ ನಾ ನಿನ್ನ ಜೀವ ಜೀವ ದಲ್ಲಿ ಬೆರೆತುಹೊಗುವ೦ತೆ,
ಮನ ನುಡಿದಿದೆ ಕನಸು ಮುಗಿವಮುನ್ನ ಕಾಡದೆ ಬ೦ದು ಸೇರುವ೦ತೆ
ನಿ ನನ್ನ ವಕ್ಷಸ್ತಲದಲ್ಲಿ ಆನ೦ತವಾಗಿ ಲೀನ ವಾದ೦ತೆ
,

ನಿಶಾ೦ತ್.**************************
,