ಬಾ ಒಮ್ಮೆ ಕೈಹಿಡಿದು ನಡೆಸು
ನನ್ನಲ್ಲಿ ಸ್ಪೋರ್ತಿಸೆಲೆಯ ತು೦ಬುತ್ತ
ಅರಿಯದೆ ಮಾಡಿದತಪ್ಪುಗಳ ಮನ್ನಿಸು
ದೇವರಿಗಿ೦ತ ಹೆಚ್ಚಾಗಿ ಪ್ರೀತಿಸುತ್ತ..!
ನನ್ನೆಲ್ಲ ಸ೦ತೋಷದಿ ಜೀವಿಸು
ನೋಡಿನನ್ನ ಅನುಕ್ಷಣವು ಆನ೦ದಿಸುತ್ತ
ನಿನ್ನೆಲ್ಲ ನೋವುಗಳ ದಹಿಸು
ನನ್ನ ತು೦ಟತನವ ಕಾಣುತ್ತ..!
ಇನ್ನೊಮ್ಮೆ ಅಪ್ಪಿ ಮುದ್ದಿಸು
ನನ್ನ ಕ೦ಬನಿಗಳ ಒರೆಸುತ್ತ
ಪ್ರತಿ ಕ್ಷಣವುಹೀಗೆ ಪ್ರೀತಿಸು
ನಾ ಓಡೋಡಿಬರುವೆ ಅಮ್ಮಎನ್ನುತ್ತ..!
ಪ್ರೀತಿಯ ಕ೦ದ ನಿಶಾ೦ತ್.ಏ
No comments:
Post a Comment