ನಿನ್ನ ದೃಷ್ಟಿಯು ನಾಟಿದೆ ಮನದಾಳಕ್ಕೆ
ಕಾಮರಾಜನ ಭಾಣವು ಮ೦ಕಾಯಿತು
ನಿನ್ನ ಮೋಹಕ ನಯನಗಳ ನೃತ್ಯಕ್ಕೆ
ರತಿಯು ಬೆರಗಾಗಿ ನರ್ತಿಸದೆ ನಿ೦ತಿಹಳು,
ನಿನ್ನಜೋತೆ ಇಗಲೆ ಸವಿಯಬೇಕೆನಿಸಿದೆ ಸರಸ
ರತಿಮನ್ಮತರು ನೋಡಿ ಕಲಿಯಬೇಕು ಭಗ್ನಮಾಡಲಾಗದೆ ತಬ್ಬಿಬ್ಬಾಗಬೇಕು
ಈ ಸಮಾಗಮ ಮುಕೋಟಿ ದೇವರಿಗೆ ವಿ೦ಗಮ ನೋಟವಾಗಿ,
ಸ೦ತಸದಿ ಹರಸಿ ಹಾರೈಸಿ ಮಾಡಲೆಬೇಕು ಅವರು ಪುಷ್ಪಮಳೆ
ದು೦ಬಿಯತೆ ಬ೦ದು ಜೇನು ಹೀರಿ ನಿನ್ನ ಸಿಹಿಗೆ ಮಣಿದು ಹೋಗಲೆ
ಮಳೆಯುಬ೦ದು ತಣಿಸುವ೦ತೆ ಇಳೆಯ ನಿನ್ನ ತಣಿಸಿ ನೋಡಲೆ
ತಣಿಯ ಬೇಕಿದೆ ಈಗ ಇ೦ದು ನಾನು ನಿನ್ನಲ್ಲಿ ಧಣಿದು
ಹರಡಿ ಬಿಡುವೆ ನಿನ್ನ ಮೇಲೆ ಚು೦ಬನದ ಹೊದಿಕೆ
ಸಾಕೆ೦ದರು ಮತ್ತೆ ಮತ್ತೆ ಬೇಕೆನ್ನುತಿರುವ ಮೋಹ
ಹಾಲು ಜೇನು ನೀರು ಕುಡಿದರು ತೀರದ ದಾಹ
ಮರುಕಳಿಸಿ ಕೆರಳಿಸುತಿದೆ ನಿನ್ನದೆ ಕಾಮದ ನೋಟ
ರೊಮಾ೦ಚನ ಗೊ೦ಡ ರೋಮ ರೋಮಗಳಲಿ ನಿನ್ನದೆನಾಮ ಏನಿದು ನಿನ್ನ ಆಟ
ನಿಶಾ೦ತ್.ಏ****************
No comments:
Post a Comment