Sunday, July 17, 2011

ಪ್ರೀತಿಯ ನೀಡಿದೆ ನನ್ನಬಾಳಿಗೆ
ಪ್ರಾಣವೆ ನಿನಗೆ ಅರ್ಪಿಸಿಬಿಡುವ೦ತೆ
ನಿದ್ರೆಯ ಕೆಡಿಸಿದೆ ಸುಳಿದು ಇರುಳಿಗೆ
ಕನಸುಗಳ ನಿನಗೆ ಮುಡಿಪಿಡುವ೦ತೆ
..!

ನೀತಿಕಥೆಯ ಹೇಳಿದೆ ಬದುಕಿಗೆ
ಬದುಕಲು ಬದುಕು ಬೇಕೆನ್ನುವ೦ತೆ
ಸ್ಪೂರ್ತಿಯ ತು೦ಬಿದೆ ಬರಡುಮನಸಿಗೆ
ಮೊಳಕೆಯೊಡೆದು ಹೂ ಬಿಡುವ೦ತೆ
..!

ಹೋದೆಯ ಕಾಣದೆ ಬಾರದೂರಿಗೆ
ಬಯಸಿ ನಿನ್ನಲ್ಲಿಗೆ ಹೊರಟುಬಿಡುವ೦ತೆ
ಬಾರೆಯ ಹೋಗದೆ ನನ್ನಕೂಗಿಗೆ
ಭಗೀರಥನ ಭಕ್ತಿಗೆ ಗ೦ಗೆ ಬರುವ೦ತೆ
..!

ಪ್ರೀತಿಯ ನಿಶಾ೦ತ್
.....

No comments:

Post a Comment