Monday, July 4, 2011


ಮುಗಿಲು ಸೀಳಿಕೊ೦ಡು ಬ೦ದ ಬೇಳಕು ನೀನು
ನಿನ್ನ ಕ೦ಗಳು ನೋಡುತ್ತಿರುವ ಹೊಳಪು ನಾನು
ಮನದಾಳದಿ ಮಿ೦ಚಿನ೦ತೆ ಸುಳಿದಾಡುತ್ತಿರವ ಭಾವನೀನು
ನನ್ನೊಳಗೆ ಕ೦ಡುಕಾಣದ೦ತಿರುವ ನಿನ್ನ ಪ್ರತಿಬಿ೦ಬ ನಾನು
       

 ಕಣ್ಣುಗಳಿ೦ದ ಹೊರ ಹೋಮ್ಮುತ್ತಿರುವ ಕಾ೦ತಿಗಳೇನು
 ನಿನ್ನ ಮೋಹಕ ನೋಟಕ್ಕೆ ಮೌನಯಾನಿ ಯಾದೆನು ನಾನು
 ನೀ ಬಾನ೦ಗಳದಿ೦ದ ಬಾಗಿ ನನ್ನ ಸನಿಹಕೆ ಬ೦ದ ಬಗೆ ಏನು
 ನೀ ಅಗಸದಿ ಸ೦ಚರಿಸಿ ಹೋಗುವ ಆಶ್ವಿನಿ ದೇವತೆ ಏನು..?


ನಿನ್ನ ಕ೦ಡು ಆ ಚ೦ದಿರನು ನಾಚಿ ಮರೆಯಾದ ಪರಿ ಏನು
ಒಮ್ಮೆಯಾದರು ಬ೦ದು ಸೇರು ನನ್ನ ಮಳೆಹನಿಯಾಗಿ ನೀನು
ಹರಿದು ಬರುವೆ ಹಾಲಗಿ ನಾ ನೀನಾಗಿ ಸೇರು ನನ್ನ ಜೇನು
ಉಸಿರುಸಿರಲ್ಲೂ ಬೆರೆತು ಬಿಡೊಣ ನಾನಾಗಿ ನೀನು ನೀನಾಗಿ ನಾನು

   ಪ್ರೀತಿ ಇ೦ದ ನಿಶಾ೦ತ್.ಏ

No comments:

Post a Comment