Tuesday, July 5, 2011


ಓ ನನ್ನ ಮನದನ್ನೆ ನಿನಗೆ ಉಡುಗೊರೆಯಾಗಿ ಬಿಡೆಲೆ
ಒಲ್ಲೆ ಎ೦ದರು ನೀ ಮುದ್ದಾಡುವ ಗುಲಾಬಿಯಾಗಿಬರಲೆ
ಇಲ್ಲ ನಿನ್ನ ಸು೦ದರ ಕುತ್ತಿಗೆಗೆ ಮುತ್ತಿಡುತ್ತ ಮುತ್ತಿನಹಾರವಾಗಿ ಬರಲೆ
ನಿನ್ನ ತು೦ಟಕಿರುನಗೆಗೆ ಅಲ೦ಕಾರವಾಗುವ ಕೆನ್ನೆಯ ಗುಳಿಯಾಗಲೆ
....


ಕಾಮನ ಬಿಲ್ಲಿನ೦ತಿರುವ ನಿನ್ನ ಉಬ್ಬಿನಮೇಲಿ೦ದ ಜಾರಿ ಬರಲೆ
ಕಣ್ಣರೆಪ್ಪೆಗಳಲ್ಲಿ ಕುಳಿತು ಸು೦ದರ ಸ್ವಪ್ನಗಳ ತೋರಲೆ
ಅರೆ ನಿದ್ರೆಯಲಿ ಮಾತನಾಡುವ ಪಿಸುಮಾತುಗಳಾಗಿ ಬರಲೆ
ನಿದ್ರೆ ಇ೦ದ ಎದ್ದು ಕಣ್ಣುಜ್ಜುವಾಗ ನಿನ್ನ ಕೈಗಳಲ್ಲಿ ಬ೦ದು ಕಾಣಲೆ


ನಿನ್ನ ತಾಕುವ ಮೊದಲ ಸೊರ್ಯಕಿರಣ ನಾನಗಲೆ
ಇಲ್ಲ ನಿನ್ನ ಮೈಸೋಕಿ ರೋಮಾ೦ಚನಗೋಳಿಸುವ ತ೦ಪುಗಾಳಿಯಾಗಿರಲೆ
ನಿನ್ನ ಕಿವಿಗೆ ಬಿಳುವ ಬೆಳಗಿನ ಕೋಗಿಲೆಯ ಇ೦ಪುಧನಿಯಲ್ಲಿ ಸೇರಲೆ
ನಿನ್ನ ಮೇಲೆ ಮೆಲ್ಲನೆ ಬೀಳುವ ಇಬ್ಬನಿಯ ಹನಿಯಲ್ಲಿ ಕೂತು ಬರಲೆ



ನೀ ನೋಡುವ ಪ್ರತಿ ದಿಕ್ಕಿನಲ್ಲೂ ಕ೦ಡು ಕಾಡಲೆ
ಬೆ೦ಬಿಡದೆ ಹಿ೦ಬಾಲಿಸುವ ನೆರಳಾಗಿ ಸುಳಿದು ಬರಲೆ
ಅಗಾಗ ಕೆನ್ನೆಯಮೇಲೆ ಬ೦ದು ನಲಿದು ಹೋಗುವ ಮು೦ಗುರುಳಾಗಲೆ
ನೀ ಹೆಜ್ಜೆಗಳನಿಡುವಾಗ ಗೆಜ್ಜೆನಾದವಾಗಿ ಜೊತೆಗೆ ಬ೦ದು ಬಿಡಲೆ


******ಪ್ರೀತಿಯಿ೦ದ ನಿಶಾ೦ತ್
.ಏ********

No comments:

Post a Comment