Tuesday, October 11, 2011

ನನ್ನೆದೆಯ ಮರಿಗುಬ್ಬಚ್ಚಿ
ಮಾಡಿರುವೆ ಜೀವಕ್ಕಿಂತ ಜೋಪಾನ
ಹಿತವಾಗಿ ನುಡಿದಿದೆ ಈ ಮನ
ನಿನಗಾಗಿಯೆ ನನ್ನ ಜನನ


ನಲ್ಲೆ ನನ್ನಗಲಿ ನಿನಾಗದಿರು
ಕಗ್ಗತಲಿನ ಸುಂದರ ಸ್ವಪ್ನ
ಮಧುರ ಮನಸ ಮಾಡದಿರು
ಎಂದು ಮೌನ ಸ್ಮಷಾನ


ಎಂದೆಂದಿಗೂ ನಿನ್ನದೆ
ಈ ತನುಮನ ಜೀವನ
ನನ್ನ ನಿ ಮರೆತರೆ ನಾನಾಗಿ
ಬಿಡುವೆ ಮಧಿರೆಯ ದಾಸ

ನಾ ಹೇಳುವುದಿಲ್ಲ ಎಂದೂ
ನಿ ಮಾಡಿದೆ ಎಂದು ಮೊಸ
ಕೊಡಿಟ್ಟಿರುವೆ ನಮಗಾಗಿ
ಸುಂದರ ಬದುಕಿನ ಕನಸ
ಹರಿಯದೆ ಹೊರ್‍ಟಿರುವೆಯಾ
ನಿ ಈ ಪ್ರೀತಿ ಪೂರಿತ ಮನಸ
ತೊರೆಯ ಬೇಡ ನನ್ನ ಬಾಲೆ
ಮರೆಯ ಬೇಡ ಪ್ರೀಯ ನಲ್ಲೆ


ನಿನಗೂ ತಿಳಿದಿದೆ ಬದುಕಲಾರೆ
ನಿನ್ನ ಬಿಟ್ಟು ಒಂದು ಕ್ಷಣ
ನಿನಗಾಗಿಯಲ್ಲವೆ ನೊಂದರು
ಮಿಡಿಯುತ್ತಿರುವುದು ಈ ಪ್ರಾಣ


ಇಂದೆಕೆ ಬಡಬಡಿಸಿ ಮಾತನಾಡುವ
ತುಟಿಗಳಲಿ ಎಂದಿಲ್ಲದ ಮೌನ
ನಾ ನಲ್ಲ ನಿನ್ನ ಮೌನವ
ತಿಳಿದುಕೊಳ್ಳುವಷ್ಟು ಜಾಣ

ಕೇಳೆ ನನ್ನುಸಿರ ಮಾತ
ಉಳಿಯಲಾರೆ ನಾನಾಗಿ ನಿನ್ನ ಸಂತ


ನಿಶಾಂತ್.ಏ
ನಮ್ಮಿಬ್ಬರ ನೋಟಗಳ ಮಿಲನ
ನನ್ನೆದೆಯಲಿ ನಿನ್ನ ಪ್ರೀತಿಗೆ ಜನನ
ನಿನ್ನೆದುರು ನಿಲ್ಲಲು ತುಟಿಗಳಲಿ ಕಂಪನ
ಕಾಣದೀದ್ದಾಗ ನಿನ್ನ ಮನದಲ್ಲಿ ನಿರವಮೌನ
ಕಾಣಲುಕಾದೆ ಕಣ್ಮುಚ್ಚದೆ ನಿನ್ನ ಕಣ್ಣರೆಪ್ಪೆಗಳಾಲಿಂಗನ
ಒಂದೆ ನೊಟಕ್ಕೆ ನನ್ನ ನಿ ಕೆರಳಿಸಿ ಮರೆಯಾದದ್ದು ಸರಿನಾ?


ನಿನ್ನ ಕಣ್ಣರೆಪ್ಪೆಗಳಲಿ ಕುಳಿತು ಕನಸಾಗಿ ಬರಲೆ
ನೀಳ ಮೂಗಿನಮೇಲೆ ಕೋಪವಾಗಿ ಮೊಡಲೆ
ಮುದ್ದುಕೆನ್ನೆಗೆ ಖುದ್ದು ಗುಳಿಯಾಗಿ ಬಿಡಲೆ
ಕೆಂಗುಲಾಬಿ ತುಟಿಗಳ ಸಿಹಿನಗೆಯಾಗಿ ಸುಳಿಯಲೆ
ನಿನ್ನ ಗಲ್ಲದಮೇಲಿನ ಕಡುಗಪ್ಪು ಚುಕ್ಕಿಯಾಗಲೆ


ನನ್ನೆದುರಿನ ದರ್ಪಣದಿ ನೀನೆ ಮೂಡುವೆ
ನಿನ್ನೆದೆಯ ಪ್ರೀತಿಗೆ ನಾನೆ ಸಮರ್ಪಣೆಯಾಗಿರುವೆ
ಬೇಡವೆಂದರು ಕನಸಿಗೆ ಸದ್ದುಮಾಡದೆ ಬರುವೆ
ನೋಡದಿದ್ದರು ನಿನ್ನ ನೆನಪಾಗಿ ಸುಳಿದುಕಾಡುವೆ
ನಿನಗಾಗಿ ನಿನ್ನಪ್ರೀತಿಯಲಿ ಕರಗಿಹೋಗುವೆ


ನಿನ್ನ ನಿಶಾಂತ್.ಏ
ಪ್ರೀತಿಯ ಕಣ್ಣಿಗೆ
ಸೋತ ಮೊಹನ ನಾ
ನಿನ್ನೆಜ್ಜೆಯ ಮಣ್ಣಿಗೆ
ಮೊಹಿತ ಮಾಧವ ನಾ


ನಿನ್ನ ಕಣ್ಣೊಳಗೆ
ಬಿಂಬಿತ ಚಂದಿರ ನಾ
ನೀ ನನ್ನೆದೆಯೋಳಗೆ
ತುಂಬಿದ ಬೆಳದಿಂಗಳೆನಾ,,


ನಿನ್ನೆರಡು ನುಡಿಗೆ
ಮರುಳಾದ ಮುರಳಿ ನಾ
ಅದರುತ್ತಿರುವ ತುಟಿಗೆ
ಚುಂಬಿತ ಕೊಳಲು ನಾ,,


ಕಾದಿರುವೆ ನಿನಗೆ
ಹೊಳೆವ ಸುಂದರಾಂಗ ನಾ
ವಿರಹದರಿವಿಲ್ಲ ನನಗೆ
ಸ್ತ್ರೀಪ್ರೀಯ ಗೋಪಿಲೋಲ ನಾ

ಪ್ರೀತಿಯ ಹೆಣ್ಣಿಗೆ
ಮಣಿದ ಶ್ರೀಕಾರನ
ನಿನ್ನ ಕನಸಿನೂರಿಗೆ
ಸುಳಿದ ತುಂಟ ಕೃಷ್ಣ ನಾ

ನಿನ್ನ ಮನದೊಳಗೆ
ತಣಿದಿರುವ ಮಧನ ನಾ
ಮನಸೋತೆ ನಿನಗೆ
ತುಡಿಯುತ್ತಿರುವ ಮನ್ಮಥ ನಾ

ಕೃಷ್ಣ ಪ್ರೀಯಾ ನಿಶಾಂತ್.ಏ
ನಿನ್ನ ಮೊದಲ ನೋಟಕೆ
ಮಿಡುಕಾಡದೆ ನಿಂತೆ
ನಿನ್ನ ಕಣ್ಣಿನಾಟಕೆ
ತಡಮಾಡದೆ ಸೋತೆ


ನೀ ನಡೆದಾಡುವ ಹಾದಿಗೆ
ಕನಸಿನ ಹೂ ಮಳೆ
ಹಿಂಪು ನೀಡಿದೆ ಕಿವಿಗೆ
ಸದ್ದುಮಾಡುವ ನಿನ್ನ ಕೈ ಬಳೆ


ನನ್ನ ನಾನೆ ಮರೆತು
ನಿನ್ನನ್ನೆ ಹರಸಿ ಬರಲು
ಕೇಳಿದೆ ನಿನ್ನೆಜ್ಜೆಯ ಗುರುತು
ಹುಡುಕಬಲ್ಲೆಯ ಎಂಬ ಸಾವಲು



ನಿನಗಾಗಿ ಹುಡುಕಿ ಸಾಕಾಗಿ
ಧಣಿದು ನೊಂದು ಮಲಗಲು
ನಲಿದಾಡಿ ಧುಮ್ಮಿಕ್ಕಿ ಸೊಗಸಾಗಿ
ಮೊಹಿಸಿ ನಗುತ ನಿ ಬರಲು


ಧಣಿವೆಲ್ಲ ಮಣಿದು ಮಾಯವಾಗಿ
ನನ್ನ ಕಂಗಳು ತಣಿಯಲು
ದಿನವೆಲ್ಲ ನೀ ನನ್ನ ಜಗವಾಗಿ
ನಾ ನಗುತ ಸಮಯ ಕಳೆಯಲು


ನನ್ನ ಪ್ರೀತಿಗೆ ಬೆರಗಾಗಿ
ನನ್ನನ್ನೆ ದಿಟ್ಟಿಸಿ ನೋಡಲು
ನಾ ತೀರ ನಿ ಸಾಗರವಾಗಿ
ನಿನ್ನ ಪ್ರೀತಿ ಅಲೆಯಾಗಿ ನನ್ನಸೆರಲು,,

ನಿಮ್ಮ ನಿಶಾಂತ್.ಏ
ನನ್ನ ಮೌನದ ಮಾತು
ನಿನಗೆ ಕೆಳಲಿಲ್ಲವೆ
ಕಣ್ಣಿನಲ್ಲೆ ಮಾತನಾಡಿ
ಹೋರಟು ಹೋದವಳೆ


ಮುಚ್ಚಿದ ಕಣ್ಣಲ್ಲಿ
ನಲಿದು ಬರುವವಳೆ
ಕನಸಿನಲಿ ಕದ್ದು ನನಗೆ
ಮುತ್ತು ನೀಡಿದವಳೆ


ಎದುರು ನಿಂತದ್ದು ನಾನೆ
ನಿನಗೆ ಹರಿವೆ ಇಲ್ಲವೆ
ಕರೆದು ನನ್ನ ಭ್ರಮಿಸಿದ್ದು
ನಿನಗೆ ಪ್ರೀತಿಯಲ್ಲವೆ


ಬೆನ್ನು ತೋರಿ ತಿರುಗಿ
ನೋಡಿದ ನೋಟ ನಿನ್ನದಲ್ಲವೆ
ಮೋಹಿಸಿ ಮಾಡಿದ ಪಾಠ
ನಿನಗೆ ನೆನಪೆ ಇಲ್ಲವೆ


ಕಂಕಣ ಕೂಡಿ ಬರಲು
ತೊರೆದು ನನ್ನ ಹೊರಟವಳೆ
ಎನ್ನ ಮನದ ಮನೆಯ
ಮುದ್ದು ಮಡದಿ ನೀನಲ್ಲವೆ..


ಕದ್ದು ಮನಸಿನಲ್ಲಿಳಿದು
ಪ್ರೀತಿಯ ಹಿರಿದು ಕೊಂದವಳೆ
ಪರಸತಿಯಾಗಿ ಹೊರಟಾಗಲು
ನನ್ನ ಪ್ರೀತಿ ತಿಳಿಯಲಿಲ್ಲವೆ


ನಿಶಾಂತ್.ಏ


ನಿನ್ನ ನೆನಪೆ ಕಾಡಿದೆ ನನಗೆ
ನಿನ್ನಮಾತು ಸಾಲದು ಎನಗೆ
ಪ್ರೀತಿಯಾ ಅಲೆಯಲಿ ಸಿಲುಕಿದೆನಾನು
ಪ್ರೇಮದಿ ಸೆಳೆಯಲು ಬಾರೆಯನೀನು,,


ತೀರದಿ ಮೂಡಿದ ಮರಳಿನಗೊಂಬೆ
ಸುಳಿದು ಮಾಡಿದೆ ಹೆಜ್ಜೆಯ ಗುರುತು
ಬಾಳಲಿ ಹೇಗೆ ನಿನ್ನನು ಮರೆತು
ನನ್ನೆದೆ ತುಂಬ ನಿನ್ನದೆ ಬಿಂಬ,,


ಕರೆಯಾದೆ ಕನಸಿಗೆ ಬರುವೆ ನೀನು
ಬೆಳಕಿನ ಬದುಕಲಿ ಕರಗುವೆ ಏನು?
ಅಗಲಿ ಹೋಗಲು ಕಾರಣವೇನು
ಬಣ್ಣದ ಬದುಕಿಗೆ ಪ್ರೇರಣೆ ನೀನು,,


ಮರಳಿ ಬಾರೆಯ ನನ್ನೆದೆ ಗುಡಿಗೆ
ಮಾತನು ಮರೆತ ಮೌನಿಯು ನಾನು
ಕಣ್ಣೆ ಇಲ್ಲವೆ ಹೆಣ್ಣೆ ಪ್ರೀತಿಗೆ
ನಿನ್ನ ನೆನಪಲೆ ಬದುಕುವೆ ನಾನು,,,


ನಿಮ್ಮ ನಿಶಾಂತ್.ಏ



ಬಾಳಿನಲ್ಲಿ ಬಯಸಿದಾಗ
ಬಾರದೆ ಹೋದೆಯಾ
ನೆತ್ತರ ಹೊಸೆದುಬಸಿದಾಗ
ಕಾಣದೆ ನಿಂತೆಯಾ,,


ಮಾತುಬರದೆ ತಡವರಿಸುವಾಗ
ಧನಿಯಾಗಿ ಬಂದೆಯಾ
ಎನೂ ಮಾಡಲೆಂದು ಚಡಪಡಿಸುವಾಗ
ಧೃಡತೆ ನಿನಾದೆಯಾ,,


ಕದ್ದುನೊಡಲು ಬರುವಾಗ
ಮರೆಯಾಗಿ ಹೋದೆಯಾ
ಸನಿಹ ಸುಳಿವಾಗ
ದೂರ ಸರಿದು ನಿಂತೆಯಾ,,


ಎಕಾಂತವಾಗಿ ಕುಳಿತಾಗ
ನಲಿದಾಡಿ ಬರುವೆಯಾ
ಜೊತೆಗಿರಲು ಬಯಸುವಾಗ
ಎಕಾಂಗಿಯಾಗಿ ಹೋದೆಯಾ,,


ಕನಸಲ್ಲಿ ಕಾಣುವಾಗ
ಕರಗಿ ಹೋದೆಯಾ
ಕಂಬನಿ ಮಿಡಿವಾಗ
ಕಣ್ಮರೆಯಾಗಿ ಹೋದೆಯಾ,,


ಕಂಪಿಸಿದೆ ತನುವೀಗ
ಒಂಟಿಮಾಡಿ ಹೋದೆಯ
ನನಗಾಗಿ ಮರಳಾಗುವಾಗ
ಮಣ್ಣಾಗಿ ಹೋದೆಯಾ,,


ನಿನಗಾಗಿ ಕಾದುಕುಳಿತಿರುವಾಗ
ಮಸಣದ ಹಾದಿ ಹಿಡಿದೆಯಾ,,
ನಿಟ್ಟುಸಿರು ಬಿಡುವಾಗ
ನಿನ್ನುಸಿರ ನಿ ಮರೆತೆಯಾ,,,,


ನಿಶಾಂತ್.ಏ