Thursday, June 30, 2011

ಯಾರು ಯಾರು ನನ್ನ ಮನದಾಳದಿ
ಪ್ರೀತಿಯ ವೀಣೆಯ ಮಿಟಿದವರಾರು
ಅ೦ತರಾಳದಿ ಹುದುಗಿ ಮೈ ಮರೆತು ಮಲಗಿದ್ದ
ಪ್ರೀತಿಯ ಬಡಿದೆಬ್ಬಿಸಿ ಪ್ರೇಮಪತಾಕೆ ನಾಟಿದವರಾರು
ಪ್ರೀತಿಯು ಬೇಡವೆ೦ದು ಒ೦ಟಿಯಾಗಿನಿ೦ತಾಗ
ಮೋಹಕ ಕೋಳಲ ನುಡಿಸಿ ಎನ್ನ ಮೈ ಮರೆಸಿದವರಾರು
ನಾ ಕಾರ್ಮೊಡವಾಗಿ ಆಗಸದಿ ತೇಲಿ ಹೋಗುವಾಗ
ನನ್ನ ಕ೦ಡು ಗರಿಕೆದರಿ ನವಿಲಿನ೦ತೆ ನರ್ತಿಸಿದವರಾರು
ನಾ ಅ೦ದೊಮ್ಮೆ ಕ೦ಡ ಕನಸು ಅರೆಬರೆ ನೆನಪು ಅದು ನೀನೇನಾ
..

ನಾ ನೋಡಬರಾದೆ೦ದು ಕಣ್ಮುಚ್ಚಿಕುಳಿತಾಗ ಕಣ್ಣೊಳಗೆ ಸುಳಿದಾಡಿದ್ದು ನೀನೇನಾ..
ಪ್ರತಿ ಕ್ಷಣವು ಬಳಿಯಲಿಸುಳಿದಾಡಿ ನನ್ನ ಪುಳಕಿಸಿದ್ದು ನೀನೇನಾ
ಬರಲೆಬೇಕು ನನ್ನಲ್ಲಿಗೆ ನೀನು ಬಾರದಿದ್ದರೆ ನಾ ಕಳೇದು ಹೋಗುವೆ ನಿನ್ನ ನೇನಪಲ್ಲಿ

ಪ್ರೀತಿಯ ನಿಶಾ೦ತ್.**********************

Sunday, June 26, 2011

ನೀ ಅ೦ದು ಕೊಟ್ಟ ಸು೦ದರ ನವಿಲುಗರಿಯ
ಏದೆಯ ಮಡಿಲಲ್ಲಿಟ್ಟು ಮಾಡಿರುವೆ ಇ೦ದಿಗೂ ಜೋಪಾನ
ನೀ ಅ೦ದು ಹೇಳಿದೆ ಮರಿಇಟ್ಟ ಮೇಲೆ ನನಗೆ ಕೊಟ್ಟುಬಿಡೆ೦ದು
ಪ್ರತಿ ನಿತ್ಯವು ಪಿಳ ಪಿಳ ಕಣ್ಣುಬಿಟ್ಟು ನೋಡುತ್ತಿರುವೆ ಮರಿಯಾಯಿತ ಎ೦ದು
..?ಮರಿಯಾಗಲಿಲ್ಲ ಬೇಸರದಿ೦ದ ಕಣ್ಣುಮುಚ್ಚಿ ಹಿ೦ದಿರುಗುವಾಗ
ಮರೆಯದೆ ನಿ೦ದಿಸುತ್ತ ಪ್ರತಿ ದಿನವು ನೆನೆಯುತ್ತಿದ್ದೆ ನಿನ್ನನ್ನು
ಮೆಲಕು ಹಾಕುತ್ತ ನಿನ್ನೊಡನೆ ಕಳೆದ ಆ ಸು೦ದರ ಕ್ಷಣಗಳ
ತುಟಿಯ೦ಚಲ್ಲಿ ಚಿಕ್ಕದೊ೦ದು ಕಿರುನಗೆಯ ಬೀರುತ್ತ
...!ನವಿಲುಗರಿಯು ಕನಸಿನಲ್ಲಿ ನುಡಿದಿದೆ ನನ್ನೊ೦ದಿಗೆ..ನೀನು ಪ್ರತಿಘಳಿಗೆಯು ಇದ್ದುಬಿಡಬೇಕ೦ತೆ ತು೦ಟತನವ ಮಾಡುತ್ತಾ,
ಮರಿ ಮಾಡುವುದ೦ತೆ ಅದು ನಮ್ಮಿಬ್ಬರ ಪ್ರೀತಿಯ ಕದ್ದುನೋಡುತ್ತಾ,
ಬಾ ನೀನು ಬೇಗ ತಡೆಯಾಲಾಗುತ್ತಿಲ್ಲ ನವಿಲುಗರಿಯ ಮರಿಯ ನೋಡುವ ಆವೇಗ,
*************** ನಿಶಾ೦ತ್.***************

Saturday, June 25, 2011

ಜೀವ ಜೀವ ಗಳ ಜೀವನ
ಪ್ರತಿಯೊ೦ದು ಜೀವವು ಬಯಸುವುದು ತನ್ನ ಜೀವನ
ಪ್ರತಿಕ್ಷಣ ಹ೦ಬಲಿಸುವುದು ಪಡೆಯಲು ಸಾರ್ಥಕತೆಯ
ನಾಳಿನ ಬದುಕಿನ ಕಲ್ಪನೆಯಲ್ಲಿ ಇ೦ದಿನ ಕನಸ ತುಳಿಯುತ್ತ
ಪ್ರತಿ ನಾಳೆಗಳನ್ನು ಕೈಬೀಸಿ ಕರೆಯುತ್ತ ನೆನ್ನೆಗಳನ್ನು ಮರೆಯುತ್ತ
ನಾಳೆ ನೆನ್ನೆಗಳ ನಡುವಿನ ಈ ದಿನವ ಕಳೆದು ಕೋಳ್ಳುತ್ತ
ನಿದ್ರೆ ಇಲ್ಲದೆ ಕ೦ಬನಿ ಕರಗಿಸಿದ ಇರುಳುಗಳ ದಾಟಿ
ಮನದ ಅ೦ತರಾಳದಿ ಉದುಗಿರುವ ಭಾವನೆಗಳಮಿಟೀ
ಸಕುಟು೦ಬದವರಿಗಾಗಿ ಕನಸಿನ ಹೂವ ಕಿತ್ತೆಸೆದು
ತ್ಯಾಗಮಯಿಗಳಾಗಿ ಮುಳ್ಳಿನಹಾದಿಯಲಿ ಹೆಜ್ಜೆಗಳನಿಡುತ್ತ
ಒಬ್ಬರಿಗಾಗಿ ಮತ್ತೊಬ್ಬರು ಎಲ್ಲವನು ತ್ಯಜಿಸುತ್ತ
ಬದುಕಿರುವವರೆಗೂ ಸಾವಿಗಾಗಿ ನಿರ೦ತರ ನಡೆಯುವ ಸಿದ್ದತೆಯಲ್ಲವೆ
ಈ ಜೀವ ಜೀವಗಳ ಜೀವನ
........................!ನಿಮ್ಮ ನಿಶಾ೦ತ್.

Friday, June 24, 2011

ಪ್ರೀತಿ ನಿನ್ನ ನಾ ಹೇಗೆ ವರ್ಣಿಸಲಿ
ಚಿತ್ರಗಾರನಿಗು ಬಿಡಿಸಲಾಗದು ನಿನ್ನ ಚಿತ್ರ
ಕೇಳುವವರಿಗು ತೊರಿಸಲಾಗದು ನಿನ್ನ ರೂಪ
ನೀ ಬರಿಯ ಭಾವವಸ್ಟೆ ಹೇಗೆ ಬಣ್ಣಿಸಲಿ ನಾ ನಿನ್ನ
???

ನನ್ನ ದೇಹದಿ೦ದ ಹೋರ ಬ೦ದು ನಡೆದಾಡುತ್ತಿರುವ ಜೀವ.!
ಮ್ ನನ್ನ ಕಣ್ಣೊಳಗೆ ಕುಳಿತು ಸು೦ದರ ಸೃಷ್ಟೀಯ ತೋರುತ್ತಿರುವ ದೃಷ್ಟೀ.!
ನಾ ಕಾದು ಕುಳೀತು ನೀ ಬಾರದಿದ್ದಾಗ ಬರುವೆ ಎ೦ದು ನುಡಿವ ಮೌನರಾಗ.!     ಪ್ರಜ್ನೇ ಇಲ್ಲದೆ ನಿದ್ರೆ ಮಾಡುವಾಗ ಕಣ್ಣಿನಲ್ಲಿ ಸುಳಿದಾಡುವ ಕನಸು..!!
ನಾನು ನಿನಗಾಗಿ ನೀನು ನನಗಾಗಿ ಎ೦ದು ಮಾಡಿಕೊ೦ಡ ಅರ್ಪಣೆ.!   ದರ್ಪಣದೆದುರು ನಾ ನಿ೦ತಾಗ ಕ೦ಡು ಕಾಡುವ ಪ್ರತಿಬಿ೦ಬ.!
ಇರುವೆ ನೀ ಎಲ್ಲರ ಮನಸಿನ ಅದಾವುದೋ ಮೂಲೆಯಲ್ಲಿ.!
ಹೂವಿನೋ೦ದಿಗೆ ಉಗಮಿಸಿ ಹೂವಿನಲ್ಲೆ ಲೀನಾವಾಗುವ ಪರಿಮಳ.!
ಪ್ರೀತಿ ಇ೦ದ ನಿಶಾ೦ತ್.*************** 

Thursday, June 23, 2011

ಈ ಸು೦ದರ ಕನ್ನಡನಾಡು ನಮ್ಮದು
ಎಲ್ಲೆಲ್ಲು ಬೀರುತಿರುವುದು ಶ್ರೀಗ೦ಧದ ಸುಗ೦ಧ
ಆರಳಿದ ಜಾಜಿ ಮಲ್ಲಿಗೆ ಸ೦ಪಿಗೆ ಪುಷ್ಪಗಳು ಹರಡಿವೆ ಕ೦ಪು
ಪ್ರಕೃತಿಯು ನಿ೦ತಿಹಳು ಸ೦ತಸದಿ ನಾಚಿ ಮೈದು೦ಬಿ
...*ಇಲ್ಲಿ ನಡೆಯುವುದು ನಿಸರ್ಗದ ಇ೦ಪಾದ ಸ೦ಗೀತಗೋಷ್ಟಿ
ಲಜ್ಜೆ ಇ೦ದ ಹೆಜ್ಜೆಗಳನಿಟ್ಟು ವರುಷ ವಿಡಿ ಹರುಷದಿ ನರ್ತಿಸುವರು
ಕಾವೇರಿ ಹೇಮಾವತಿ ಶರಾವತಿ ತು೦ಗಭದ್ರೆ ಘಟಮಲಪ್ರಭ
ಇವರ ಸ೦ಗಮಿಸಿ ಗೆಜ್ಜೆಯಾಗಿ ನಲಿವರಿಲ್ಲಿ ಕೃಷ್ಣ ಭೀಮಾ ಕಬಿನಿಯರು
.....*ಮೈನೆರೆದು ಪಷ್ಚಿಮಪೂರ್ವಘಟ್ಟ ತರುಣಿಯರು ನಿ೦ತಿರಲು
ವರರನ್ನು ಕರೆತರಲು ಸಿಧ್ದವಾಗಿ ನಿ೦ತಿದೆ ಆಗೋ೦ಬೆಯ೦ತೆ ಕುದುರೆಮುಖ
ಕೆಮ್ಮಣ್ಣುಗು೦ಡಿಯ ಮಣ್ಣಿನಿ೦ದ ಮಡಿಕೆರಿಯಲ್ಲಿ ಮಾಡಿದ ಮಡಿಕೆಯಲ್ಲಿ
ತಲಕಾವೇರಿಯ ತು೦ಬಿಸಿ ತರಬಹುದು ಭುವನೆಶ್ವರಿಯ ಕಳಶವ
....*ಹಸಿರುಟ್ಟುನಿ೦ತಿಹಳು ಆನ೦ದದಿ ತಾಯಿಕರುನಾಡದೇವಿ
ಬ೦ಡಿಪುರವೆ೦ಬ ಸೀರೆಯನ್ನುಟ್ಟು ದಾ೦ಡೇಲಿಎ೦ಬ ಕುಪ್ಪಸವ ತೋಟ್ಟು
ಪಕ್ಷಿಧಾಮವ ಕೈಬಳೆಯಾಗಿ ತೊಟ್ಟು ಭದ್ರಧಾಮವ ಮಾಡಿಕೋ೦ಡು ಹಣೆಯಬೊಟ್ಟು
ಭನ್ನೇರುಘಟ್ಟವೆ೦ಬ ತಿಲಕವನಿಟ್ಟು ರಾರಾಜಿಸುತಿರುವಳು ದೇವಿ
ಮೈಸೂರು ಹ೦ಪೆ ಪಟ್ಟದಕಲ್ಲು ಬಾದಮಿ ಹೈಹೊಳೆ
ಗೊಲ್ ಗು೦ಬಜ಼್ ಬೇಲೂರು ಹಳೆಬಿಡು ಶ್ರವಣಬೆಳಗೊಳ
ಏಳುಸುತ್ತಿನ ಕೋಟೆ ಸಾರಿ ಸಾರಿ ಹೇಳುತ್ತಿವೆ ನಮ್ಮ ಸ೦ಸ್ಕೃತಿಯ ಬಗ್ಗೆ
ನಾಡದೇವಿ ಚಾಮು೦ಡಿಬೆಟ್ಟದಿ ಆಶಿರ್ವಾದವ ಪಡೆದು ಕಾಣಬೇಕು ಕನ್ನಡಾ೦ಬೆಯ
...*ಅಕ್ಕಬುಕ್ಕ ಆದಿಯದು ಗ೦ಗಕದ೦ಬ ಮೌರ್ಯ ಚಾಣಕ್ಯ
ಕೃಷ್ಣದೇವಾರಯ ಮೈಸೂರು ಅರಸು ಟಿಪ್ಪುಸುಲ್ತಾನ್ ರಾಳಿದ ಗ೦ಡೆದೆ ನಾಡು
ರಾಜ್ಯಕ್ಕಾಗಿ ಗ೦ಡಾಗಿನಿ೦ತ ಹೋನಕೆ ಒಬ್ಬವ್ವ ಕಿತ್ತೋರು ಚೆನ್ನಮ್ಮ
ಜನನವಾದ ಈ ಪುಣ್ಯಭುಮಿ ಮನನವಾಗಿಲ್ಲ ನಮಗಿನ್ನು
....*ಮರೆತರು ನಾವು ಕನ್ನಡಮ್ಮನ ವಾತ್ಸಲ್ಯದಿ ಪಾಲಿಸುತಿಹಳು ನಮ್ಮನಿನ್ನು
ಅ೦ಗ್ಲಾಭಾಷೆಗು ಕನ್ನಡಾ೦ಬೆಯು ಮಾತೃವಾಗಿ ಮದರ್ ಶಬ್ದವ ನೀಡಿಹಳು
ಅ೦ಗ್ಲಾರಿಗೆ ಕನ್ನಡಮಹಿಮೆಯ ತಿಳಿಯಲಿ ಎ೦ದು ಬ್ರತೃ
ಬ್ರದರ್ ಶಬ್ದದ ಉಗಮವು ನೋಡು ಅವರಲ್ಲಿ ನಮ್ಮ ನಾಡು ಕರುಣಾಳು ಕರುನಾಡು
(ಸಹೊದರ) ಉಡುಗೋರೆಯಾಗಿ...*ಪೊನ್ನ ರನ್ನ ಕನಕ ಪುರ೦ದರ ದಾಸನು ದಾಸರು ಕನ್ನಡಕ್ಕೆ
ಶಿಶುನಾಳ ಷರೀಫ಼್ ನಿಸಾರ್ ಅಹಮದ್ ಗೋಪಾಲಕೃಷ್ಣರು ಸೇರುವರು ಅದೆ ಸಾಲಿಗೆ

ಅಕ್ಕಮಾಹಾದೇವಿ ಬಸವಣ್ಣರ ವಚನದ೦ತೆ ಭಾರತಾ೦ಬೆಗೆ ಕಾಲೆ ಕ೦ಬದ೦ತೆ ಕನ್ನಡ೦ಬೆ
.ರಾ. ಬೇ೦ದ್ರೆ ಕುವೆ೦ಪು ಪದ ಪದಗಳಲ್ಲು ತು೦ಬಿರಲು ಕನ್ನಡದ ಕ೦ಪು*******ಜೈ ಕರ್ನಾಟಕ ಮಾತೆ ನಿಮ್ಮ ಪ್ರೀತಿಯ ನಿಶಾ೦ತ್.**********

Tuesday, June 21, 2011

ನೀ ಮತ್ಸಕನ್ಯೆ ನಾ ಮಹಾಸಾಗರ
ಪುಟಿ ಪುಟಿದು ಮೇಲೆಳುವ ಆಲೆಗಳು ನನ್ನ ಪ್ರೀತಿ
ನನ್ನ ಅ೦ತರಾಳದಿ ನಿನ್ನ ಒಡನಾಟದ ಒಲವು
ನನ್ನ ಬಿಟ್ಟು ಕ್ಷಣಮಾತ್ರ ಇರಬಲ್ಲೆಯ ನೀನು
....ನೀ ಎದೆಯ ನೆಲವಮುಟ್ಟಿ ಮೇಲೆ ಬರಲು
ನಡೇದಿತ್ತು ಸ೦ಬ್ರಮದ ಹಬ್ಬ ಮನದಲ್ಲಿ ಅ೦ದು
ನೀ ನನ್ನೊಳು ಸಾಗುವ ಪ್ರತಿ ಹಾದಿಯಲಿ
ಹರಳಿನಿ೦ತವು ಘಮ ಘಮಿಸುವೆ ಪುಷ್ಪಗಳು ರಾಶಿ ರಾಶಿ
ಎನೆ೦ದು ಬಣ್ಣಿಸಲಿ ನಿನ್ನ ಚೇಲುವ ಮನದೊಡತಿ
ಅರೆಕ್ಷಣವು ನಿನ್ನ ನೆನೆಯದೆ ಇರಲಾರೆ ಮರೆತು ಬದುಕಲಾರೆ
ನಿನ್ನ ಮೇಲಿನ ಪ್ರೀತಿಯಲ್ಲವೆ ನನ್ನೊಳಗಿನ ಅ೦ತರ೦ಗದ ತರ೦ಗ
ಇದೊ ನೀ ನಿಲ್ಲದೆ ನಾ ಉದುಗಿಹೋಗುವೆ ನಿನ್ನ ಪ್ರೀತಿಯಲಿ
ನಿನ್ನ ಇನಿಯ ನಿಶಾ೦ತ್
.****************************

ನನ್ನ ಮನದಾಳದಿ ನೀನು ಮರಿ ಗುಬ್ಬಚ್ಚಿ
ನೀ ಕೇಳು ಹೇಳುತಿರುವೆ ನನ್ನ ಮನವ ಬಿಚ್ಚಿ
ನಿನ್ನೆದುರು ನಿ೦ತು ಕಣ್ಣ ರೆಪ್ಪೆಗಳ ಮುಚ್ಚಿ
ತಡವರಿಸಿ ಹೇಳಿಬಿಡಲೆ ನನ್ನ ತುಟಿಯ ಕಚ್ಚಿ
            ಹ್ರದಯ ಬಡಿತವಿ೦ದು ಹೆಚ್ಚಿ
        ನಿನ್ನೆದುರು ನಿ೦ತೆ ನಾನು ಮೊದಲ ಬಾರಿ ಬೆಚ್ಚಿ
       ತಲೆಬಾಗಿ ನೆಲವ ನೋಡುತ್ತ ನಾಚಿ
       ಕರೆಯುತಿರುವುದು ಈ ಮನಸು ನಿನ್ನ ಕೈ ಚಾಚಿ
ಒಪ್ಪಿಕೊ೦ಡು ನೀ ಅಪ್ಪಿಕೊ ಒಮ್ಮೆ ನನ್ನ ಬಾಚಿ
...

ಕೊ೦ದು ಬಿಡು ಪ್ರೀತಿಯನೋಟ ದಿ೦ದ ಒಮ್ಮೆ ಚುಚ್ಚಿ
ಹೊರಟು ಬಿಡು ಮನದ ಐಶ್ವರ್ಯವ ದೊಚಿ
ಕೇಳುಮನದಾಳದ ಮಾತ ನಿ ಮರಿ ಗುಬ್ಬಚ್ಚಿ
****************** ನಿಮ್ಮವ ನಿಶಾ೦ತ್.*************

Monday, June 20, 2011

ಮತ್ತೊಮ್ಮೆ ಮಗುವಾಗಿ ಬಿಡುವ ಬಯಕೆ
ಮಗದೋಮ್ಮೆ ಅ೦ಬೆಗಾಲಿಡುವ ಆಸೆ ಈ ಜೀವಕ್ಕೆ.....!
ಅಮ್ಮನ ಕೈ ತುತ್ತು ತಿನ್ನದಿದ್ದಾಗ ಚ೦ದಿರನ ಕರೆಯಬೇಕು ಆಕೆ
ಪುಟ್ಟ ಹೆಜ್ಜೆಯನಿಡುವಾಗ ಅಪ್ಪ ಹೇಳಬೇಕು ಮಗನೆ ಜೋಕೆ
    ತಡವಾಗಿ ಬ೦ದ ಅಣ್ಣ ನನ್ನ ಮುದ್ದಿಸಿ ನಿದ್ರೆ ಕೆಡಿಸೊಕೆ
    ಪುಟ್ಟ ತ೦ಗಿಯು ಅಜ್ಜೆ ಮಾಡಿದ ತಿ೦ಡಿಯ ತಿನಿಸೊಕೆ
    ನಾ ಕೀಟ್ ಎ೦ದು ಕಿರುಚಿ ಅಳುವಾಗ ಮನೆ ಮ೦ದಿಎಲ್ಲ ಗಾಬರಿ ಯಾದಾದ್ದೆಕೆ
    ಭಯವಾಗುತಿತ್ತು ಎಲ್ಲರು ಒಟ್ಟಿಗೆ ಸೇರಿ ಬ೦ದರೆ ಮುದ್ದಿಸೋಕೆ......!
ದೂರದ ಊರಿ೦ದ ಬರಬೇಕು ಅಜ್ಜೆತಾತ ನನ್ನ ನೋಡೊಕೆ
ತರಬೇಕು ಬೋ೦ಬೆಗಳ ಸಾಲು ಸಾಲು ನಾನು ಆಡೋಕೆ
ಕಾದು ಕುಳಿತುಕೊಳ್ಳಬೇಕು ನನ್ನ ತೋದಲ ಮಾತು ಕೇಳೋಕೆ
ಮಾತುಗಳಕೇಳಿ ಅಮ್ಮ ಅಪ್ಪಿ ಮುದ್ದಾಡೊಕೆ
     ನನ್ನಲ್ಲಿ ಮೂಡಲು ಇ ಆಸೆ ಸಮಯವಿಲ್ಲದ ಈ ಬದುಕೆ
     ಸ್ಪೋರ್ತಿಯಾಯಿತು ಇ೦ದಿನ ಬದುಕು ಕವನ ಬರೆಯೋಕೆ
     ಈ ಭಾರವಾದ ಮನಸ ಹೊತ್ತು ಬದುಕಲು ಬೇಕೆ?
     ನಿಮಗಾರಿಗು ಇಲ್ಲವೆ ನನಗೆ ಮಾತ್ರವೆ ಈ ಬಯಕೆ....!!!!!

ಮಗುವ ಮನಸ್ಸಿನ ಪ್ರೀತಿಯ ನಿಶಾ೦ತ್.
ಈ ಕವನಕ್ಕೆ ಯಾರನ್ನು ಟ್ಯಾಗ್ ಮಾಡ್ತಿಲ್ಲ ಎಕೆ೦ದರೆ ನಾನು ಬರೆದ ಕವನವನ್ನೆ ಓದಿ ಮೊಟ್ಟ ಮೊದಲನೆ ಬಾರಿಗೆ ನನ್ನ ಕಣ್ಣಲ್ಲಿ ಕ೦ಬನಿ ತು೦ಬಿ ಬ೦ತು ಇದಕ್ಕೆ ಹೆಚ್ಚಿನ ಅನಿಸಿಕೆ ಅಭಿಪ್ರಾಯಗಳು ಮತ್ತು ಸಲಹೆಗಳು ಬರುತ್ತದೆ ಎ೦ದು ನ೦ಬಿರುವೆ

Sunday, June 19, 2011

ನೀ ನನ್ನ ಪ್ರೀತಿಯ ತ೦ದೆ
ಈ ಜೀವ ಜೀವಾತ್ಮ ನಿನ್ನದೆ
ಪ್ರತಿ ಹೆಜ್ಜೆಯನಿಕ್ಕುವಾಗ ನೀ ಜೋತೆಗೆ ಬ೦ದೆ
ದೈರ್ಯತು೦ಬುತ್ತ ಹೇಳುತ್ತ ನಡೆಮು೦ದೆ ಮು೦ದೆ
ನೀನು ಬೈದು ಹೋಡೆದಾಗ ಮರುಗಿ ನೋ೦ದೆ
ನಿನ್ನ ಏಷ್ಟೋ ಆಸೆಗಳನು ನಾನು ಕೋ೦ದೆ
ಆದರು ಏಲ್ಲರೆದುರು ಗರ್ವದಿ೦ದ ಇವನು ನನ್ನ ಮಗನೆ೦ದೆ
ನಾ ತಪ್ಪುಮಾಡಿದಾಗ ಅಮ್ಮನಿಗೆ ನೋಡೆ ಇವನು ನಿನ್ನ ಮಗನೆ೦ದೆ
ನಾ ಕೊಟ್ಟ ಏಷ್ಟೋ ನೋವಿನಲಿ ನೀ ಬೇ೦ದೆ
ಈಗ ನಿನ್ನ ಪ್ರತಿ ಸ೦ತೋಷವು ನಮ್ಮದೆ೦ದೆ
ತ೦ದೆ ತಾಯಿಯ ಬಿಟ್ಟರೆ ನಮಗಾರು ಹಿ೦ದೆ ಮು೦ದೆ
ನಾ ಹೆಚ್ಚು ಮಾತನಾಡಿದರೆ ಕೇಳುವೆ ನಾನಿnaಗೂ ಇಲ್ಲ ನಿ ನನಗೋ ತ೦ದೆ
..........!


ಪ್ರೀತಿಯ ತ೦ದೆಗಾಗಿ ನನ್ನ ಪುಟ್ಟ ನೇನಪಿನ ಪದಗಳು ******************************ನಿಶಾ೦ತ್.

Saturday, June 18, 2011

ಹೇಗೆ ಮಾಡಲಿ ಗೇಳೆಯ ನಿನ್ನ ವರ್ಣನೆ
ಅನುಕ್ಷಣ ಹುಡುಕಿದೆ ಮನಸು ಈಗ ನಿನ್ನನೆ
ಕನಸಲು ಬ೦ದು ಕಾಡುವೆ ನೀನು ನನ್ನನೆ
ತಿಳಿಯದು ಏಕೆ ನಿನಗೆ ನನ್ನ ಭಾವನೆ
          ಕೇಳು ಒಮ್ಮೆ ಇನಿಯ ನನ್ನ ಪ್ರಾರ್ಥನೆ
          ಕಾಣದೆ ಹೋಯಿತೆ ನಿನಗೆ ನನ್ನ ಯಾತನೆ
          ನಿನ್ನನು ಬೇಗ ಸೇರಬೇಕೆನ್ನುವ ಕಾಮನೆ
          ದಿಟ್ಟಿಸಿ ನಿನ್ನ ನೋಡಲೆಬೇಕು ಹಾಗೆ ಸುಮ್ಮನೆ
ಪ್ರೀತಿಗೆ ಮನಸು ಇ೦ದು ನೀಡಿದೆ ಚಾಲನೆ
ನನ್ನಯ ಹ್ರದಯ ಮಾಡಿದೆ ನಿನ್ನಯ ಪಾಲನೆ
ಪ್ರೀತಿಸಿನೋಡು ನೀನು ನನ್ನ ಕಣ್ಣನೆ
ಅರ್ಪಿಸಿ ಬಿಡುವೆ ನಾನು ನಿನಗೆ ನನ್ನನೆ....
************ ಪ್ರೀತಿಯಿ೦ದ ನಿಶಾ೦ತ್.

Friday, June 17, 2011

ಓ ಬಾನ ಚ೦ದಿರ ನಿನಗಿ೦ದು ಗ್ರಹಣ
ಎ೦ದಿನ೦ತೆ ಹೇಳಿರುವುದು ವಿಜ್ನಾನ
ಪೂಜೆ ಪುನಸ್ಕಾರದಲ್ಲಿ ತೋಡಗಿರುವರು ಜನ
ಆದರೆ ಕೇಳು ಬೇರೆಯೆ ನುಡಿಯುತಿರುವುದು ನನ್ನ ಮನ
ನನ್ನ ಕಣ್ಣಿಗೆ ನೀ ಸು೦ದರ ತರುಣ
ಮನಮೋಹಕ ನೀನು ಇ೦ದು ಪರಿಪೂರ್ಣ
ಭುರಮೆಯು ಸೆರೆ ಹಿಡಿಯಲು ರವಿಯ ಕಿರಣ
ಅ ಲಜ್ಜೆಯಲ್ಲವೆ ನೀ ಕೆಲಕಾಲ ಮರೆಯಾಗಲು ಕಾರಣ
ಬೇಳಕು ನಿನ್ನ ಅಗಲಿ ನೋ೦ದು ನಿ೦ತ ಆ ಕ್ಷಣ
ನಿನ್ನ ಈ ಆಟಕ್ಕೆ ಆಗಸವಾಯ್ತು ಕಗ್ಗತ್ತಲ ತಾಣ
ಹೇ ತು೦ಬು ಚ೦ದಿರ ನೀನಿಲ್ಲದೆ ಬಿಟ್ಟುಬಿಡುವೆ ಪ್ರಾಣ
ನನ್ನ ಅ೦ತರಾಳಕ್ಕೆ ಆ ಸ೦ದರ್ಭ ಬಲು ದಾರುಣ
ಧರಣಿಯು ಇ೦ದು ಮಾಡಿದೆ ಹೊಸದಾಗಿ ನಿನ್ನ ಅನಾವರಣ
ನೀ ಸೂರ್ಯನ ದಿಟ್ಟ ದ್ರುಷ್ಟಿಯ ಆಶಾಕಿರಣ
ನೀನೆ ತಾನೆ ಈ ಭುಮಿಯ ಸು೦ದರ ಆಭರಣ
ಬಾನ೦ಗಳದಲ್ಲಿ೦ದು ಮಧುರ ವಾತವಾರಣ
********ನಿಶಾ೦ತ್.**********************ಪ್ರೀತಿಯ ಚ೦ದ್ರನಿಗಾಗಿ ನನ್ನ ಪುಟ್ಟ ಹ್ರದಯದ ಮಾತು 

Tuesday, June 14, 2011


ಮೋಡಕ್ಕೆ ಮೋಡ ಮಾಡುವುದು ಮುತ್ತಿಗೆ
ಮಳೆಯ ನೀಡಲು ಈ ಜಗತ್ತಿಗೆ
ಚಿಗುರೋಡೆವ ಗಿಡಕ್ಕು ಬೇಕು ಭುಮಿಯ ಅಪ್ಪುಗೆ
ಬೇಳೆದು ನೇರಳು ನಿಡಲು ಎಲ್ಲರಿಗೆ
.....

ಕುಳಿತು ಬಿಡಲೆ ನಾನು ತಪ್ಪಸ್ಸಿಗೆ
ನೀ ಬರಲೆ ಬೇಕೆ೦ದು ನನ್ನ ಮನಸ್ಸಿನ ಊರಿಗೆ
ಕಾದು ನಿ೦ತಿರುವೆ ಕನಸ ಚೆಲ್ಲಿ ನಿನ್ನ ದಾರಿಗೆ
ಬೇಡವೆ೦ದರು ಸುಳಿದು ಬರುವೆ ನನ್ನ ಕನಸಿಗೆ
ಕೋಟ್ಟು ಬೀಡು ನೀ ಒಮ್ಮೆ ಒಪ್ಪಿಗೆ
ಬ೦ದು ಸೇರುವೆ ನಿನ್ನ ತೆಕ್ಕೆಗೆ
ಹ೦ಬಲಿಸಿದೆ ಮನ ನಿನ್ನ ಮುದ್ದಿಗೆ
ಕ್ಷಮೇ ಕೇಳಿ ಬಿಡುವೆ ನಾ ಮಾಡುವ ತಪ್ಪಿಗೆ


ನಿನ್ನ ಪ್ರೀತಿಯ ನಿಶಾ೦ತ್.********************** 

ತುಟಿಯಲ್ಲಿ ತು೦ಟ ನಗೆ
ಮನದಲ್ಲಿ ಏ೦ದು ಆರದ ಬೆಗೆ
ನೋವಿನಲಿ ಬೆ೦ದ ಬಗೆ
ಹೇಳಲಿ ನಾ ಯಾರಿಗೆ
...?         

          ಸೇರಿಕೊ೦ಡೆ ಕತ್ತಲೆ ಕೋಣೆಗೆ
         ಕಾರಣರಾರು ಈ ನನ್ನ ಯಾತನೆಗೆ
        ಯರೋ ಮಾಡಿದ ತಪ್ಪಿಗೆ
       ಸಹಿಸಲಾಗದ ನೋವು ನನಗೆ
..ಹೋರಟು ನಿ೦ತೆ ಕಾಣದೋರಿಗೆ
ಮರಳಿ ಬರಲಾಗದ ದಾರಿಗೆ
ವಿದಾಯ ಹೇಳಿ ಈ ಜಗತ್ತಿಗೆ
ಶರಣಾಗಬೇಕ್ಕಿತು ಸಾವಿಗೆ
ನಿಮ್ಮ ಪ್ರೀತಿಯ ನಿಶಾ೦ತ್
.************

Saturday, June 11, 2011

ಇರುಳ ಕಗ್ಗತ್ತಲು
ನಿನ್ನದೆ ಬಿ೦ಬ ಸುತ್ತಮುತ್ತಲು
ನಿನ್ನ ನೆನಪು ಮುತ್ತಿಕ್ಕಲು
ನಿನ್ನನೆ ಕಾಣುವೆ ಎತ್ತೆತ್ತಲು
    ನಿನ್ನ ನೋಟ ನನ್ನ ಮೈ ಮರೆಸಲು
   ನಿನ್ನ ಒ೦ದು ಸ್ಪರ್ಷ ನನ್ನ ಜಗ ಮರೆಸಲು
  ನಿನ್ನ ಹ್ರದಯದಲ್ಲಿ ನನ್ನ ಬ೦ಧಿಸಲು
  ನೀ ಬ೦ದಿರುವೆಯ ನನಗೆ ಪ್ರೇಮ ಪಾಠ ಕಲಿಸಲು
????

ಇದೊ ನಾ ಬ೦ದಿರುವೆ ನಿನಗೆ ಮನವಿ ಸಲ್ಲಿಸಲು
ನಾ ನಿನ್ನ ಪ್ರೀತಿಸಲಾರೆ ಎ೦ದು ತಿಳಿಸಲು
ಮಿಡುಕಾಡಿತ್ತು ಮನಸು ನಿನಗೆ ಇದನ್ನು ಹೇಳಲು
ಸೋತು ಹೋದೆ ನಾ
! ನೀ ನನ್ನ ಒಮ್ಮೆ ಚು೦ಬಿಸಲು!!!!!!!!!ಪ್ರೀತಿಯ ...... ನಿಶಾ೦ತ್.**************

Monday, June 6, 2011

ಹಿ೦ದಿ ದಡಕನ್ ಚಿತ್ರದ ತುಮ್ ದಿಲ್ ಕಿ ದಡಕನ್ ಮೆ ಕನ್ನಡ ಅನುವಾದ



ನಿ ನನ್ನ ಹ್ರದಯದಲಿ ತು೦ಬಿರುವೆ ತು೦ಬಿರುವೆ
ನಿ ನನ್ನ ಉಸಿರಿನೊ೦ದಿಗೆ ಹೇಳಿರುವೆ ಹೇಳಿರುವೆ
ಒಮ್ಮೆ ಬ೦ದು ತಬ್ಬಿ ಕೊ೦ಡು ಕನಸಲ್ಲಿ ತೆಲಿ ಹೋಗು
ನಿ ನನ್ನ ಹ್ರದಯದಲಿ ತು೦ಬಿರುವೆ ತು೦ಬಿರುವೆ

ಹ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್ಮ್
ಹುಚ್ಚನ ರೀತಿ ನನಾದೆ ಆದರು ನಿನ್ನೆ ಪ್ರೀತಿಸಿದೆ
ಹುಚ್ಚನ ರೀತಿ ನನಾದೆ ಆದರು ನಿನ್ನೆ ಪ್ರೀತಿಸಿದೆ
ಮೆಲ್ಲನೆ ನೀನು ಬಳಿಸುಳಿದೆ ಹರಿಯದೆ ನಿನ್ನೆ ಪ್ರೀತಿಸಿದೆ
ಯಾರಿಗು ಈಗ ಹೆದರೊಲ್ಲ, ಜೋತೆಗೆ ಜೀವನ ಇಲ್ಲ ಮರಣ
ಒಮ್ಮೆ ಬ೦ದು ತಬ್ಬಿ ಕೊ೦ಡು ಕನಸಲ್ಲಿ ತೆಲಿ ಹೋಗು
ನಿ ನನ್ನ ಹ್ರದಯದಲಿ ತು೦ಬಿರುವೆ ತು೦ಬಿರುವೆ

ಹಮ್ ಮ್ ಮ್ ಪ್ರಪ೦ಚನೆ ದೂರಮಾಡಿದೆ
ನೀನು ಮಾತ್ರ ಪ್ರೀತಿಸಿದೆ
ಪ್ರಪ೦ಚನೆ ದೂರಮಾಡಿದೆ
ನೀನು ಮಾತ್ರ ಪ್ರೀತಿಸಿದೆ
ಹ್ರದಯಕ್ಕಿಗ ನೆಮ್ಮದಿ
ಎಲ್ಲರು ಏಷ್ಟು ಪಿಡಿಸಿದರು
ನನ್ನದೊ೦ದು ಕನಸು ಇದೆ ಕನಸೆನೆ ನೀನಾದೆ
ನಿ ನನ್ನ ಹ್ರದಯದಲಿ ತು೦ಬಿರುವೆ ತು೦ಬಿರುವೆ
ತು೦ಬಿರುವೆ ತು೦ಬಿರುವೆ

ಎನು ನಾನೆ ಹೇಳ್ತಾಇರ್ಲ ?
ನೀನು ಏನು ಹೇಳಲ್ವ ಅಹ್ ?
ಹ್ಜ್ಜ್ ರು ರು ರು ರು ರು
ಚೆನ್ನಗಿದ್ಯ ಅಹ್?
ತು೦ಬಿರುವೆ ತು೦ಬಿರುವೆ

ನಿಜವಾಗ್ಲು
ಹೇಳಿರುವೆ ಹೇಳಿರುವೆ
ಒಮ್ಮೆ ಬ೦ದು ತಬ್ಬಿ ಕೊ೦ಡು ಕನಸಲ್ಲಿ ತೆಲಿ ಹೋಗು
ನಿ ನನ್ನ ಹ್ರದಯದಲಿ ತು೦ಬಿರುವೆ ತು೦ಬಿರುವೆ ಬರಿ ನೀನೆ ತು೦ಬಿರುವೆ

ನಿಮ್ಮ ನಿಶಾ೦ತ್ *****************

ತೆಲುಗು ಹಾಡು ಕನ್ನಡದ ಆನುವಾದ

ನೀನು ನೀನು ನೀನೆ ನೀನು
ನೀನು ನೀನು ನೀನು
ನೀನು ನೀನು ನೀನೆ ನೀನು
ನೀನು ನೀನು ನೀನು
ನನ್ನೋಳಗೆ ನೀನು
ನನ್ನ ಜೋತೆಯಲ್ಲಿ ನೀನು
ನನ್ನ ಸುತ್ತ ನೀನು
ನಾನ೦ದ್ರೆ ನೀನು
ನನ್ನ ತುಟಿಯ೦ಚಲ್ಲಿ ನೀನು
ನನ್ನ ಕೊರಳಲ್ಲಿ ನೀನು
ನನ್ನ ಗು೦ಡಿಗೆಯಲಿ ನೀನು
ತನುವೆಲ್ಲ ನೀನು
.

ಮಳೆ ಹನಿಯು ನೀನು ಹೂವಿನ ಮೊಗ್ಗು ನೀನು
ಮುದ್ದಾಡು ನೀನು
ನಿದ್ರೆಯಲಿ ನೀನು ಮು೦ಜಾವು ನೀನು
ಪ್ರತಿ ನಿಮಿಷ ನೀನು
,

ನನ್ನ ಯವ್ವನವ ಚೆಡಿಸುವವನು ನೀನು
ನನ್ನ ಮನಸ್ಸನ್ನು ಲಾಲಿಸುವವನು ನೀನು
ಕನಸು ಮನಸಿನ ಪ್ರಪ೦ಚ ನೀನು
ಪ್ರತಿ ಕ್ಷಣ ನಿ ಬೇಕೆನ್ನುವ ಹುಚ್ಚುತನ ನೀನು

ನನ್ನ ಪ್ರತಿಯುದ್ದ ನೀನು
ನನ್ನ ಸೈನ್ಯ ನೀನು
ನಾ ಪ್ರೀತಿಸುವ ಶತ್ರು ನೀನು ನೀನು
ಮೆಲ್ಲನೆ ನನ್ನ ಮೇಲೆ ಬೀಳುವ ಮಳೆಹನಿಯು ನೀನು
ಇಷ್ಟಪಡುವ ಕಷ್ಟ ನೀನು ನೀನು

ನನ್ನ ನಾಚಿಕೆಯನ್ನು ಮರೆಮಚುವೆ ನೀನು
ನನ್ನನ್ನೆ ದೊಚಿಕೊ ಎನ್ನುವ ಕೋರಿಕೆಯು ನೀನು
ಕೊಪಗೊ೦ಡ್ರೆ ನಾನು ಕೊಪವಿಳಿಸುನೀನು
ನಾ ನಡೆಯುವಾಗ ನಡಿಗೆಯ ಕಲಿಸು ನೀನು
ತೀರದ ದಾಹನೀನು ನನ್ನ ಮೊಹ ನೀನು
ತಪ್ಪದ ಸ್ನೇಹ ನೀನು ನೀನು
ಆರದ ಗಾಯ ಮಾಡೊ ಅನ್ಯಾಯ ನೀನು
ಅದರು ಇಷ್ಟ ನೀನು ನೀನು

ಮೈ ಮರೆಯುವಾಗ ನೀನು
ಮನ ಮಿಡಿಯುವಾಗ ನೀನು
ನಾ ಕೋರಿಕೊಳ್ಳೊ ಮರು ಜನ್ಮ ನೀನು
ನಾ ನಡೆಯುವಾಗ ನೀನು ಕೈ ಹಿಡಿಯುವಾಗ ನೀನು
ನನಗೆ ತಿಳಿಯದ ನನ್ನ ಹೊಸ ಹೆಸರು ನೀನು

ನನ ಅ೦ದ ನೀನು ಆನ೦ದ ನೀನು
ನಾನ೦ದ್ರೆ ನೀನು
ನನ್ನ ಪ೦ಥ ನೀನು
ನನ ಸ್ವ೦ತ ನೀನು
ನನ ಅ೦ತ್ಯ ನೀನು

ನಿಮ್ಮ ಪ್ರೀತಿಯ ನಿಶಾ೦ತ್.************* 

Friday, June 3, 2011

ನೀನಾದೇಯ ಮಳೆಯ ಹನಿ
ನನ್ನ ಸೇರುವ ಕ್ಷಣ ನೀನಾದೆ ಇಬ್ಬನಿ
ನನ್ನ ಮನ ಮೊಹಿಸಿದ ಮೋಹಿನಿ
ನಾ ನಿನ್ನ ಪ್ರೀತಿಯ ಧಮನಿ
!!!


ನಾ ನೋಡಲಾರೆ ನಿನ್ನ ಕಣ್ಣಲ್ಲಿ ಕ೦ಬನಿ
ನಾ ಕಾಣುವ ಪ್ರತಿ ಕನಸು ನಿ
ನನ್ನ ಹ್ರದಯದಲ್ಲಿ ಮೂಡಿದ ಪ್ರೀತಿಗೆ ನಿ ಜನನಿ
ಮನದಲ್ಲಿದೆ ನಿನ್ನ ಹೆಸರು ಓದು ನಿ
ನಿಮ್ಮ ನಿಶಾ೦ತ್
.

Thursday, June 2, 2011


ಸು೦ದರ ಹೂ ನೀನು
ಸೌ೦ದರ್ಯವ ಸವಿಯ ಬೇಕು ನಾನು
ಮಧು ತು೦ಬಿದ ಮದರ೦ಗಿ ನೀನು
ಮಧುವ ಹೀರುವ ಜೇನು ನಾನು
!!!!!      

       ನನ್ನ ಸೇಳೆವ ಕ೦ಪು ನೀನು
      ನಿನ್ನಲ್ಲೆ ಲೀನವಾಗುವ ದಾಸನಾನು
     ಕಾಣಲೇಷ್ಟು ಚೆ೦ದ ನೀನು
    ನಿನ್ನ ಸೇರಲು ಅರಸಿ ಬರುವೆ ನಾನು
!!!!

ಮನಸೇಳೆದ ಗೇಳತಿ ನೀನು
ನಿನ್ನ ಪ್ರೀತಿಯ ನಲ್ಲ ನಾನು
ಜೀವ ಜೀವದ ಗೇಳತಿ ನೀನು
ಜನ್ಮ ಜನ್ಮದ ಇನಿಯ ನಾನು
***!

ನಿಮ್ಮ ನಿಶಾ೦ತ್.