ಹೇಗೆ ಮಾಡಲಿ ಗೇಳೆಯ ನಿನ್ನ ವರ್ಣನೆ
ಅನುಕ್ಷಣ ಹುಡುಕಿದೆ ಮನಸು ಈಗ ನಿನ್ನನೆ
ಕನಸಲು ಬ೦ದು ಕಾಡುವೆ ನೀನು ನನ್ನನೆ
ತಿಳಿಯದು ಏಕೆ ನಿನಗೆ ನನ್ನ ಭಾವನೆ
ಕೇಳು ಒಮ್ಮೆ ಇನಿಯ ನನ್ನ ಪ್ರಾರ್ಥನೆ
ಕಾಣದೆ ಹೋಯಿತೆ ನಿನಗೆ ನನ್ನ ಯಾತನೆ
ನಿನ್ನನು ಬೇಗ ಸೇರಬೇಕೆನ್ನುವ ಕಾಮನೆ
ದಿಟ್ಟಿಸಿ ನಿನ್ನ ನೋಡಲೆಬೇಕು ಹಾಗೆ ಸುಮ್ಮನೆ
ಪ್ರೀತಿಗೆ ಮನಸು ಇ೦ದು ನೀಡಿದೆ ಚಾಲನೆ
ನನ್ನಯ ಹ್ರದಯ ಮಾಡಿದೆ ನಿನ್ನಯ ಪಾಲನೆ
ಪ್ರೀತಿಸಿನೋಡು ನೀನು ನನ್ನ ಕಣ್ಣನೆ
ಅರ್ಪಿಸಿ ಬಿಡುವೆ ನಾನು ನಿನಗೆ ನನ್ನನೆ....
************ ಪ್ರೀತಿಯಿ೦ದ ನಿಶಾ೦ತ್.ಏ
No comments:
Post a Comment