Tuesday, October 11, 2011



ನಿನ್ನ ನೆನಪೆ ಕಾಡಿದೆ ನನಗೆ
ನಿನ್ನಮಾತು ಸಾಲದು ಎನಗೆ
ಪ್ರೀತಿಯಾ ಅಲೆಯಲಿ ಸಿಲುಕಿದೆನಾನು
ಪ್ರೇಮದಿ ಸೆಳೆಯಲು ಬಾರೆಯನೀನು,,


ತೀರದಿ ಮೂಡಿದ ಮರಳಿನಗೊಂಬೆ
ಸುಳಿದು ಮಾಡಿದೆ ಹೆಜ್ಜೆಯ ಗುರುತು
ಬಾಳಲಿ ಹೇಗೆ ನಿನ್ನನು ಮರೆತು
ನನ್ನೆದೆ ತುಂಬ ನಿನ್ನದೆ ಬಿಂಬ,,


ಕರೆಯಾದೆ ಕನಸಿಗೆ ಬರುವೆ ನೀನು
ಬೆಳಕಿನ ಬದುಕಲಿ ಕರಗುವೆ ಏನು?
ಅಗಲಿ ಹೋಗಲು ಕಾರಣವೇನು
ಬಣ್ಣದ ಬದುಕಿಗೆ ಪ್ರೇರಣೆ ನೀನು,,


ಮರಳಿ ಬಾರೆಯ ನನ್ನೆದೆ ಗುಡಿಗೆ
ಮಾತನು ಮರೆತ ಮೌನಿಯು ನಾನು
ಕಣ್ಣೆ ಇಲ್ಲವೆ ಹೆಣ್ಣೆ ಪ್ರೀತಿಗೆ
ನಿನ್ನ ನೆನಪಲೆ ಬದುಕುವೆ ನಾನು,,,


ನಿಮ್ಮ ನಿಶಾಂತ್.ಏ

No comments:

Post a Comment