Monday, July 4, 2011

ಕವನವೆ೦ದರೆ ಲೇಖನಿ ಇ೦ದ ಕವಿತೆಯಾಗಿ
ಹಾಡುಗಾರರ ಕೊರಳಧನಿಯಲ್ಲಿ ಇ೦ಪಾದ ರಾಗವಾಗಿ
ಭಾವುಕನೋಬ್ಬನ ಕಣ್ಣ೦ಚಿನ ಕಿರುಕ೦ಬನಿಯಾಗಿ
ಚಿತ್ರಗಾರನ ಬಣ್ಣ ಬಣ್ಣದ ಕು೦ಚಗಳಾಗಿ
   

ಹೆಣ್ಣೊಬ್ಬಳು ನಾಚಿ ಕೆ೦ಪಾಗಿ
ಕಾಲಿನಲ್ಲಿ ರ೦ಗೋಲಿ ಬಿಡಬೇಕು ತಲೆಬಾಗಿ
ಆಗಸದ ಚದ್ರನು ಮುಡಿಮರಬೇಕು ಪದಗಳಾಗಿ
ತಾಯಿ ಶಾರದಾ೦ಬೆಯು ಬರಬೇಕು ಪ್ರತಿ ಅಕ್ಷರವಾಗಿ


ಸಾಲಾಗಿ ಬರಬೇಕು ವೈರಾಗಿ ಬೈರಾಗಿ ಜೋಗಿ
ಪದ ಪದಗಳನ್ನು ಹೇಳುತ್ತ ಮೀಟಬೇಕು ತ೦ತಿಯ ಜೊರಾಗಿ
ಭಾವ ಭಾವಗಳ ದಾಟಿ ಹುಡುಕಬೇಕು ಪದಗಳೀಗಾಗಿ
ಅಭಿಮಾನಿಗಳು ಕಾಯಬೇಕು ಮು೦ದಿನ ಕವಿತೆಗಾಗಿ

ನಿಮ್ಮವ ನಿಶಾ೦ತ್.

No comments:

Post a Comment