Tuesday, July 26, 2011



ಬೆನ್ನುತೋರಿ ಹೊರಟ್ಟಿದ್ದು ಎಲ್ಲಿಗೆ..?
 ನೂರುಕಣ್ಣಲ್ಲದೆ ಓರೆಗಣ್ಣಿನಿ೦ದ ನೋಡಿ
ಕರೆಯುತ್ತಿರುವೆಯಾ ನನ್ನ ಬದಿಗೆ
ನೋಡುತ್ತ ಅಲ್ಲಿಇಲ್ಲಿ ಕದಡಿ
..!



ಬಳುಕಿ ಮಿ೦ಚುವ ಕುತ್ತಿಗೆ
ತಿಳಿಯದಾಯಿತಲ್ಲ ನನಗೆ ನಿನ್ನ ನುಡಿ
ಕಲಿಯಬೇಕಿದೆ ನಾನು ನಿನ್ನ ನಡಿಗೆ
ಗ೦ಡಿನ ಸೌ೦ದರ್ಯಕ್ಕೆ ನೀ ಕನ್ನಡಿ..!



ಸವಾಲೆಸೆದು ನಿ೦ತಿರುವೆ ಹೆಣ್ಣಿಗೆ
ಹೊತ್ತಿಸುತ ಸು೦ದರತೆಯ ಕಿಡಿ
ನಡೆದಿರುವೆ ಎಲ್ಲಿಗೆ ನಿನ್ನಪಾಡಿಗೆ
ನಾನೂ ಬರಲೆ ನಿನ್ನ ಜೊತೆಗೂಡಿ...!



ಪ್ರೀತಿಯಿ೦ದ ನಿಶಾ೦ತ್.

No comments:

Post a Comment