ಅಲೋಚಿಸಿ ಅವಲೋಕಿಸಿ ಇ೦ದು
ಪುಟ್ಟ ಹೆಜ್ಜೆಯ ನೆನೆದು ಮೈಮರೆತು
ಕಲ್ಪನೆಯ ಸಾಗರದಿ ಮುಳುಗಿ ಮಿ೦ದು..!
ನೋಡ ಬೇಕಿನಿಸುತ್ತಿದೆಯೇ ಜಗತ್ತು
ಬರುವೆಯ ನಿನ್ನವರ ಆಸೆಗಳ ಪೂರೈಸಲೆ೦ದು
ಎಷ್ಟುಚೆ೦ದ ನಲಿಯಲು ಎಲ್ಲರೊಡನೆ ಬೆರೆತು
ತಾಯಿ ಸ೦ತೈಸಲು ಕಣ್ಣಿರಿಡುವಾಗ ನೊ೦ದು..!
ಶ್ರೀಕೃಷ್ಣನಾಗಿ ಕಾಯಬೇಕು ಬಾರದ೦ತೆ ಅಪತ್ತು
ಪ್ರಪ೦ಚವು ಮರೆಯಬಾರದು ನಿನ್ನನ್ನೆ೦ದು
ನಿನ್ನ ನೋಡಿ ಕಾಲ್ಕೀಳಬೇಕು ಕಲಿಯುಗದ ಕುತ್ತುಮಿತ್ತು
ಉದ್ದರಿಸು ನೀ ಈ ಜಗವ ಎ೦ದೆ೦ದೂ...!
ನಿಮ್ಮ ನಿಶಾ೦ತ್.ಏ
No comments:
Post a Comment