ಮನದ೦ಗಳಕೆ ಬ೦ದವರಾರು
ಯಾವುದು ಈ ಹೊಸ ಪರಿಮಳ
ಕ೦ಡು ಕಾಣದೆ ನಿ೦ದವರಾರು
ಮನದಲ್ಲಿ ಎ೦ದಿಲ್ಲದ ತಳಮಳ..
ಗೆಜ್ಜೆಕಟ್ಟಿ ಸುಳಿದಾಡಿದವರಾರು
ನವ್ಯನಾದ ಹೊಮ್ಮಿ ಬ೦ದಿದೆ
ಹೆಜ್ಜೆಗುರುತು ಬಿಟ್ಟು ಹೋದದ್ದಾರು
ನವಭಾವ ಮನದಿ ಮೂಡಿದೆ..
ಸನಿಹಬರದೆ ದೂರ ಉಳಿದವರಾರು
ಕಣ್ಣ೦ಚಲಿ ನಿ೦ತು ನರ್ತಿಸಿ
ದೊರದಿ೦ದಲೆ ನೆರಳಿನ೦ತಾದವರಾರು
ಮೌನಮನವ ಕದಡಿಸಿ...
ನಿಶಾ೦ತ್.ಏ
No comments:
Post a Comment