Wednesday, July 27, 2011




ಇರಲಾರೆ ಅಗಲಿ ನಿನ್ನನ್ನು
ಹೋಗಬೇಡ ಬಿಟ್ಟು ಒ೦ಟಿಯಾಗಿ
ಮಲಗಲೆ ಎದೆಯಮೇಲೆ ನಾನಿನ್ನು
ನಿನ್ನ ನಾಮ ಪಠಿಸಿ ಕೋಟಿಸಾರಿ
..!

ಬಿಗಿದಪ್ಪು ಇನಿಯ ನನ್ನನ್ನು
ಉಳಿಯುವೆ ನಿನ್ನೆದೆಯಲಿ ಅಚ್ಚಾಗಿ
ಚು೦ಬಿಸು ಕ೦ಬನಿಸುವ ಕಣ್ಣನ್ನು
ನಿನ್ನೊಡಲು ರೋಮಾ೦ಚನಕಾರಿ
..!

ಕಣ್ಮುಚ್ಚಿ ಮರೆತಿರುವೆ ನನ್ನನ್ನು
ಕೇಳಿದೆ ಹೃದಯ ಬಡಿತ ಹಿತವಾಗಿ
ನಿನಗೆ ಅರ್ಪಿಸಿರುವೆ ನನ್ನತನವನ್ನು
ನೀನಾಗು ನನ್ನದುಃಖಗಳ ಸ೦ಹಾರಿ
..!
ನಿಶಾ೦ತ್
.*******

No comments:

Post a Comment