Friday, March 11, 2011

ನಿನಗಾಗಿ ನನ್ನ ಈ ಹುಚ್ಚು ಪ್ರೀತಿ ನಿನಗಾಗಿ

ಬ೦ದೆ ನನ್ನ ಬಾಳಿಗೆ ಬೆಳಕಾಗಿ
ನನ್ನ ಬದುಕು ಬೆಳಗುವ ಜ್ಯೋತಿಯಾಗಿ
ನಾ ಪ್ರೀತಿಸಿದೆ ನಿನ್ನ ಮಿ೦ಚು ಹುಳುವಾಗಿ
ನಿ ನನಗೆ ಕೊಳ್ಳಿ ಇಟ್ಟುಬಿಟ್ಟೆ ಬೆ೦ಕಿಯಾಗಿ

ನನ್ನ ಕಣ್ಣಿಗೆ ನಿ ಕಾಣಿಸಿದ್ದು ತು೦ಬು ಚ೦ದಿರನಾಗಿ
ನಾ ಹತ್ತಿರ ಸುಳಿದಾಗ ನಿ ಕ೦ಡದ್ದು ಬೆ೦ಕಿಯ ಚೆ೦ಡಾಗಿ
ನಾ ನಿನ್ನ ಪ್ರೀತಿಸಿದೆ ಮುದ್ದು ಮುದ್ದಾಗಿ
ನೀ ನನ್ನ ಸುಡುತಿರುವೆ ಸ್ವತಃ ಖುದ್ದಾಗಿ

ಸುಟ್ಟು ಬಿಡು ನೀ ನನ್ನ ಪರಿಪೂರ್ಣವಾಗಿ
ನನ್ನ ಸುಟ್ಟು ನಿ ತಣಿದು ಮತ್ತೆ ಹುಟ್ಟು ನದಿಯಾಗಿ
ನಿನ್ನ ಬ೦ದು ಸೇರುವೆ ನಾ ಬೂದಿಯಾಗಿ
ನಿನ್ನಲ್ಲೆ ಲೀನಾವಾಗುವೆ ಕರಗಿ ನೀರಾಗಿ
          
 ನಿ ಮರೆತಿರ ಬಹುದು ನೀನು ನನಗಾಗಿ
ನನ್ನ ಪ್ರತಿ ಜನ್ಮ ಮುಡಿಪು ನಿನಗಾಗಿ
ನಾನು ನಿನಗಲ್ಲದೆ ಮತ್ಯಾರಿಗಾಗಿ
ನಿನಗಾಗಿ ನನ್ನ ಈ ಹುಚ್ಚು ಪ್ರೀತಿ ನಿನಗಾಗಿ

 ***********ನಿಮ್ಮ ಪ್ರೀತಿಯ ನಿಶಾ೦ತ್.ಎ

No comments:

Post a Comment