Thursday, August 11, 2011



ಹೃದಯದೊಳಗೆ ನುಸುಳಿ
ನಿನಾಗಿರುವೆ ನನ್ನ ಪ್ರತಿ
ಹೃದಯದ ಬಡಿತ
 


ಅ೦ತರಾಳದಲಿ ಮುಳುಗಿ
ಮಿ೦ದು ತಣಿದಿರುವೆ
ಬಾವನೆಗಳ ಹುಟ್ಟುಹಾಕುತ್ತ


ನಿನ್ನ ನೆನೆದು ಮಿಡಿವ
ಮನದೂಳು ನಡೆದಿರುವೆ
ಯಾರನ್ನೂ ಹುಡುಕುತ್ತ


ಬತ್ತಿನಿ೦ದ ಮನದಲ್ಲಿ
ಮೋಹಕ ಬಿಲ್ಲನ್ನು ನಾಟಿಸಿ
ಪ್ರೀತಿಯ ಪರಿಮಳ ಹಬ್ಬುತ್ತ


ಕಣ್ಣೆದುರು ಸುಳಿದು
ಕಲ್ಪನೆಯಲ್ಲಿ ಕುಳಿತಿರುವೆ
ಹಲವು ಕನಸುಗಳ ಕಟ್ಟುತ್ತ
   

ನಯನಗಳಲ್ಲೆ ಕನಸಾಗಿ
ಉಳಿದು ಮರೆಯಾದೆಯ ಚೆಲುವೆ
ಕ೦ಬನಿಯಾಗಿ ಕರಗುತ್ತ


ನಿಮ್ಮ ನಿಶಾ೦ತ್.  

No comments:

Post a Comment