Thursday, August 11, 2011


ಮಹಾಲಕ್ಷ್ಮಿಯ ಪೂಜಿಸೋಣವಿ೦ದು
ಬೆಡಿವರವ ನಿಲ್ಲೋಣ ಎದಿರು

ಕಮಲಿಜಾಕ್ಷಿಯ ಭಕ್ತಿಯಲಿಕರೆದು
ದೀಪಗಳ ಹಚ್ಚಿ ಆರತಿಯ ಬೆಳಗಿ

ತಾಯಿಬಾ ನಮ್ಮ ಭಕ್ತಿಗೆ ಒಲಿದು
ಅನುಕ್ಷಣವು ನಮ್ಮಲ್ಲಿ ನೆಲೆಸಮ್ಮ

ಬಾತಾಯಿ ಮನೆಗೆ ನಗುತಲಿ ನಲಿದು
ಪ್ರಜ್ವಲಿಸಿ ಹೆಜ್ಜೆಯಮೇಲೆ ಹೆಜ್ಜೆಯನಿಟ್ಟು

ನಾ ಮಾಡಿದ ಪಾಪಗಳ ಬಾರಮ್ಮತೋಳೆದು
ನಿನ್ನ ಪಾದಕೆ ನಾನಗಿಹೆ ಶರಣು

ನಿ೦ದಿರುವೆ ನಾನಿ೦ದು ಕರ್ಮಗಳ ಕಳೆದು
ಬಾರಮ್ಮ ಶ್ರೀಲಕ್ಷ್ಮಿ ನನಗಾಗಿ ಇ೦ದು

ಬಾಬಾರೆ ವರಲಕ್ಷ್ಮಿ ಹಾಡಿರುವೆ ಕರೆದು
ಶ್ರೀಹರಿಯ ಭಕ್ತ ಕರೆದಿರುವೆ ನೋಡು

ಕಾದಿರುವೆ ತಾಯಿ ಹೂಗಳ ಸುರಿದು
ಅಮ್ಮ ನೀ ಬಾ ಅಷ್ಟಲಕ್ಷ್ಮಿಯರ ಕೂಡಿ

ಧನ್ಯನಾಗುವೆನಿ೦ದು ದರುಶನವ ಪಡೆದು
ಕಾದಿರುವೆ ನಾನಿನ್ನು ಮುಕ್ತಿಯ ಕೊರಿ
.

ಬಾರಮ್ಮ ವರಲಕ್ಷ್ಮಿ ನಿನೋಮ್ಮೆ ನಡೆದು
ವಿಶ್ವರೂಪವತೋರಿ ಮಹಾಮಾತೆ ಬಾರೆ

ನಿಶಾ೦ತ್
.

No comments:

Post a Comment