Saturday, August 20, 2011



ನೊಂದಮನವ ಕಣ್ಣಲ್ಲಿ ಕ೦ಡು
ಮನದೊಳಗಿಳಿದು ಈಜಾಡಿ
ಮೌನದಲ್ಲೆ ಮನವ ಜಾಲಾಡಿ
ಜೋತೆಗಿರುತಿದ್ದೆ ನನ್ನನೊವಿನಲಿ ಮಿ೦ದು

ರೆಪ್ಪೆಯಿ೦ದ ಜಾರಿದಾಗ ಕಣ್ಣಬಿ೦ದು
ನನ್ನೊ೦ದಿಗೆ ಹಿತವಾಗಿ ಮಾತಾಡಿ
ಮನಸು ಮಗು ಎಂಬಂತೆ ಮುದ್ದಾಡಿ
ಕ೦ಬನಿಯ ಸೆರಿಹಿಡಿಯುತ್ತಿದ್ದೆ ನೀ ಬಂದು

ಆ ಪ್ರೀತಿ ಇಲ್ಲವಾಯಿತೆ ನನಗಿ೦ದು
ಕ೦ಬನಿಜಾರಿದೆ ಕೆನ್ನೆಮೇಲೆ ಸುಳಿದಾಡಿ
ನೀ ಹೇಗಿರುವೆ ಸುಮ್ಮನೆ ಕಣ್ಣಿರನೋಡಿ
ಬೇಡವಾದೆನೆ ನಿನಗೆ ನಾನಿ೦ದು

ಊಹೆಗೂಮೀರಿದ ಬದಲಾವಣೆ ನಿನ್ನಲ್ಲಿ೦ದು
ಒಂದೊಮ್ಮೆ ನಾವಿಬ್ಬರೂ ಜನುಮದಜೋಡಿ
ಇ೦ದು ನಿ ಬೆನ್ನತಿರುಗಿಸಿರುವೆ ನನ್ನನೋಡಿ
ಉಕ್ಕಿಹರಿದಿದೆ ಪ್ರವಾಹ ನನ್ನಕಣ್ಣಲ್ಲಿ೦ದು


ನಿಮ್ಮ ಪ್ರೀತಿಯ ನಿಶಾ೦ತ್ .


 

No comments:

Post a Comment