ಮಹಾಮಾತೆ ಗೌರಿ
ಭಕ್ತರು ಕರೆದಿಹರು ನಿನ್ನ
ಮನಒಲಿದು ಬಂದರೆ ಚೆನ್ನ
ನಗುತಲಿ ಬಾಮ್ಮ ಪರಮೇಶ್ವರಿ
ನಿನಗಾರು ಸಾಟಿ ಹೇ ಶಂಕರಿ
ಮಂದಹಾಸವ ಎಲ್ಲೆಲ್ಲೂ ಬೀರಮ್ಮ
ಸರ್ವರಿಗೂ ಸುಖಃಶಾಂತಿ ನೀಡಮ್ಮ
ಬಾರಮ್ಮ ನಿನ್ನೊಮ್ಮೆ ಮಾಹೇಶ್ವರಿ
ಸಕಲವು ತಿಳಿದಿರುವ ಸರ್ವೇಶ್ವರಿ
ನನ್ನ ಬದುಕು ಮುಗಿಯುವ ಮುನ್ನ
ಒಮ್ಮೆಬಂದು ಸಲಹಮ್ಮ ನನ್ನ
ಪೂಜೀಪೆನು ನಿನ್ನ ದೇವೀಶ್ವರಿ
ಜಗದಂಬ ನೀ ಜಗದೀಶ್ವರಿ
ಭಕ್ತಿಯ ಪೂಜೆಗೊಲಿದು ಬಾರಮ್ಮ
ಭಕ್ತರಿಗೆ ಮುಕ್ತಿಯ ನೀಡಮ್ಮ
ಪರ್ವತೇಶ್ವರಿ ಶ್ರೀ ಚಾಮುಂಡೇಶ್ವರಿ
ನಿಶಾಂತ್ .ಏ

No comments:
Post a Comment