Wednesday, August 31, 2011


ಮೂಷಿಕವೇರಿ ಬರುವ ಗಣಪ
ಲಡ್ಡುಮೊದಕ ಇವನಿಗೆ ನೈವೆದ್ಯ
ಮಾಡಿತನ್ನಿ ವಿಧವಿಧಖಾದ್ಯ
ನೀ ಹರಸಿ ಹರುಷದಿ ಬಾರಪ್ಪ


ಸಿದ್ಧಿಬುದ್ಧಿಗೆ ಒಡೆಯನು ನೀನಪ್ಪ
ನೀನೆ ಸಕಲವಿದ್ಯೆಗೆ ಅಧಿಪತಿ
ಸಂಕಷ್ಟ ನಿವಾರಣ ಗಣಪತಿ
ಭಕ್ತಿಗೆ ಒಲಿದು ನಲಿದು ಬಾರಪ್ಪ


ಎಲ್ಲೆಲ್ಲೂ ಕಾಣುವೆ ನಿನ್ನೆ ನನ್ನಪ್ಪ
ವಿಘ್ನಗಳ ಅಂತ್ಯ ವಿಘ್ನೇಶ್ವರ
ಶುಭಕೆ ಆದಿ ಗಣೆಶ್ವರ
ಎಲ್ಲರಿಗೂ ದರ್ಶನವ ನೀಡಪ್ಪ


ಗಣಪ ಗಣಪ ಗಣಪ ಗಣಪ
ಎಂದು ಕೂಗಿ ಮೈಮರೆವೆ ನಾನು
ಪದಪದವಾಗಿ ಮುಡಿರುವೆ ನೀನು
ಗಣಪ ನಮ್ಮ ಎಂದೆದೂ ಕಾಪಡಪ್ಪ

ಗಣೆಶ ಹಬ್ಬದ ಹಾರ್ಧಿಕ ಶುಭಾಶಯಗಳು ಎಲ್ಲರನ್ನು ಹರಸಿ ಹಾರೈಸಲಿ ಗಣಪತಿ
ನಿಮ್ಮ ನಿಶಾಂತ್.
 

No comments:

Post a Comment