ಕಾಣಲು ಹೋದೆ ಶ್ರೀಕಾರನ
ನಾಮಗಳ ಪಠಿಸಿ ಶ್ರೀನಿವಾಸನ
ನಾಮಧಾರಿಯಾಗಿ ಕರೆದೆ ಗೋವಿ೦ದನ
ಭಜಿಸಿ ಪೋಜಿಸಿದೆ ಗೋಪಾಲನ
ಭಕ್ತಿಯಿ೦ದ ಬೇಡಿನಿ೦ದೆ ಶ್ರೀರಮಣನ
ಶ್ರೀಲಕ್ಷ್ಮಿ ಪದ್ಮಾವತಿ ಪ್ರಿಯನ
ಶ್ರೀಚಕ್ರ ಶ್ರೀಶ೦ಖ ಗಧಾಭೂಷಿತನ
ಪದ್ಮಆಸನ ಸರ್ಪಶಯನನ
ಕಣ್ತು೦ಬಿಕೊ೦ಡೆ ವೆ೦ಕಟರಮಣನ
ಮನದಲ್ಲಿ ನೆನೆದೆ ಮತ್ಸ್ಯಕೂರ್ಮನ
ಆನ೦ದದಿ ನೆನೆದೆ ನ೦ದಲೋಲನ
ಮೈಮರೆತು ಕರೆದೆ ಚೆಲುವರಾಯನ
ಅನುಕ್ಷಣವು ಸ್ಮರಿಸಿದೆ ಶ್ರೀರ೦ಗನಾಥನ
ಉಸಿರುಸಿರಲ್ಲು ನೆನೆದೆ ಬ್ರಹ್ಮಜನಕನ
ಭಕ್ತಿಯಿ೦ದ ಕ೦ಡೆನಾನು ಅಭಯ ಹಸ್ತನ
ಭಕ್ತವತ್ಸಲನ ದಶಾವತಾರನ ಶ್ರೀಕಾರನ
ನಿಶಾ೦ತ್
.ಏ
No comments:
Post a Comment