ನಿದ್ರೆಯಲ್ಲಿ ರಾರಾಜೀಸುತ್ತಿರುವೆ
ಹೆಣ್ಣೆ ನೀ ಸು೦ದರ ಪ್ರಶ್ನಾರ್ಥಕಚಿನ್ಹೆ ?
ಕಗ್ಗತ್ತಲಿನಲ್ಲಿ ಪಳಪಳಿಸಿದೆ ನಿನ್ನಕೆನ್ನೆ
ಉತ್ತರವಿಲ್ಲದ ಪ್ರಶ್ನೆ ನೀನೆ ಅಲ್ಲವೆ
ಪ್ರತಿಕನಸಲ್ಲು ಸುಳಿದಿರುವೆ
ಯಾರು ನೀ ಅಸ್ಪಷ್ಟ ಕನ್ಯೆ
ಹಂಬಲಿಸಿದೆ ಮನಸು ನಿನ್ನನೆ
ಬೆನ್ನುತೊರಿ ಅರೆತಿರುಗಿ ನಿಂತಿರುವೆ
ಕಣ್ತು೦ಬಿಕೊಳ್ಳಲು ನಿನ್ನ ಬಯಸಿರುವೆ
ಕಣ್ತೆರೆಯುವಮುನ್ನ ಎದುರಿಗೆ ಬಾಹೆಣ್ಣೆ
ಅರ್ಪಿಸಿಬಿಡುವೆ ನಿನಗೆ ನನ್ನನ್ನೆ
ನಿನ್ನಬರುವಿಗಾಗಿ ನಾ ಕಣ್ಮುಚ್ಚಿಕಾದಿರುವೆ
ಹರಿವಿಲ್ಲದೆ ನಿನ್ನ ಮೊಹಿಸಿರುವೆ
ನಿನೀಗ ಮನದೊಡತಿ ಮನದನ್ನೆ
ಬಾರದೆ ಹೊದರೆ ಬಿಡುವೆ ಪ್ರಾಣವನ್ನೆ
ನೀ ಬರುವವರೆಗೂ ಕಣ್ಮುಚ್ಚಿ ಮಲಗಿರುವೆ
ಪ್ರೀತಿ ಇ೦ದ ನಿಶಾ೦ತ್.ಏ

No comments:
Post a Comment