ಭಾರತದೇಶ ಪುಣ್ಯ ಭೂಮಿಯು
ಸ೦ಸ್ಕೃತಿಗಳಿಗೆ ತವರೂರು
ನಮ್ಮರಾಷ್ಟ್ರ ಪರರಿಗೆ ಮಾಧರಿಯು
ನಮ್ಮ ಐಕ್ಯತೆಯ ಮೆಚ್ಚುವರೆಲ್ಲರು
ತ್ರಿವರ್ಣವೆ೦ದರೆ ತಿಳಿದಿರಲಿ ನಾವುಭಾರತೀಯರು
ಕೇಸರಿ ಶಕ್ತಿ ಮತ್ತು ತ್ಯಾಗದ ತವರೂರು
ಬಿಳಿಬಣ್ಣ ಸಾರಿಹೇಳಿದೆ ಶಾ೦ತಿಸತ್ಯ ಪ್ರಿಯರು
ಹಸಿರುವರ್ಣ ತೋರಿದೆ ರೈತಸುರಿಸುವ ಬೆವರು
ನವಿಲು ನಮ್ಮ ರಾಷ್ಟ್ರಪಕ್ಷಿಯು
ಗರಿಗೆದರಿ ಬಿ೦ಬಿಸಿದೆ ನಮ್ಮನಾಡ ಸೌ೦ದರ್ಯ
ವ್ಯಾಘ್ರಹುಲಿರಾಯ ನಮ್ಮ ರಾಷ್ಟ್ರಪ್ರಾಣಿಯು
ಶತ್ರುಗಳ ಮೆಟ್ಟಿನಿ೦ದ ಗ೦ಡೆದೆಯ ಗಾ೦ಭೀರ್ಯ
ನಮಗೆ ರಕ್ಷಕವಚ ಆಶೋಕ ಚಕ್ರವು
ಶತ್ರುಗಳಿಗೆ ವಿಷಪೊರಿತ ೨೪ ನೀಲಿಬಾಣವು
ಎದುರಿಸಲು ಎದುರಾಳಿಗಳ ಸದಾಸಿದ್ದವು
ತಿರುಗುತಲಿದೆ ನಿತ್ಯನಿರ೦ತರ ಸತ್ಯಚಕ್ರವು
ನಮಗಾಗಿ ಗಡಿಯನ್ನು ಹಗಲಿರುಳು ಕಾದಿಹರು
ಸದೆ ಬಡಿಯಲು ಶತ್ರುಗಳ ನಮ್ಮಯೋಧರು
ಈ ಭೂಮಿಯಲ್ಲಿ ಜನಿಸಿರುವ ಭಾಗ್ಯವ೦ತರು
ನಾವು ಭಾರತಿಯರು ಪುಣ್ಯಭೂಮಿಯ ನಾವುಭಾರತಿಯರು
ನಿಮ್ಮ ಪ್ರೀತಿಯ ನಿಶಾ೦ತ್ .ಏ

No comments:
Post a Comment