Tuesday, August 16, 2011


ಕರೆಯೋಣ ಮನೆಗೆ ಶ್ರೀಕೃಷ್ಣನ
ಪುಟ್ಟ ಹೆಜ್ಜೆಗಳ ಮನೆತು೦ಬಬಿಡಿಸಿ
ಬಾಗಿಲಿಗೆ ಕಟ್ಟಿ ಹಸಿರುತೋರಣ
ಬಣ್ಣ ಬಣ್ಣಗಳಿ೦ದ ರ೦ಗೋಲಿಬಿಡಿಸಿ


ಜನ್ಮದಿನವಿ೦ದು ನವನೀತ ಚೋರನ
ಮಡಿಕೆ ಬೆಣ್ಣೆಯ ನೈವೆದ್ಯಮಾಡಿಸಿ
ಶ್ರೀಚರಣಕೆ ತಲೆಬಾಗಿ ನಮಿಸೋಣ
ತಪ್ಪುಒಪ್ಪುಗಳ ಮಾಧವನಿಗೊಪ್ಪಿಸಿ


ನಲಿಯೋಣ ಕರೆದು ಹಾಲ್ಗೇನ್ನೆಕೃಷ್ಣನ
ಹಾಲುಜೇನುಗಳಿ೦ದ ಅಭಿಷೇಕ ಮಾಡಿಸಿ
ಪೊಜಿಸೋಣ ನಾವು ಶ್ರೀಚಕ್ರಧಾರನ
ಎಕ್ಕಿತ೦ದು ಪುಷ್ಪಗಳ ಅಲ೦ಕರಿಸಿ


ಕೊಳಲನುದುತ ಕುಳಿತ ಗೋಪಾಲನ
ಚ೦ದನವ ಚೆಲುವನಿಗೆ ಲೆಪಿಸಿ
ಬೇಗಬಾರೊ ಮನೆಗೆ ಶ್ರೀಕೃಷ್ಣ
ಬ೦ದೆ ಬರುವಳು ಭಾಮೆ ನಿನ್ನರಸಿ


ಭಕ್ತಿಯಲಿ ಪೊಜಿಸುವೆ ಸು೦ದರಾ೦ಗನ
ಶಿರಬಾಗಿ ಕೈಮುಗಿದು ನಮಿಸಿ
ನಿನ್ನಲ್ಲೆ ಲೀನಾವಾಗಿಸಿಕೋ ನನ್ನನ್ನ
ಧೀನಾನಾಗಿರುವೆ ನನ್ನನ್ನೆ ನಿನಗರ್ಪಿಸಿ  

ನಿಶಾ೦ತ್  .




No comments:

Post a Comment