ನಿನಗಾಗಿ ನಾ ಕಾದಿರುವೆ
ಚಳಿ ಮಳೆಯಲ್ಲಿ ನಾ ನಿ೦ತಿರುವೆ
ಪ್ರತಿ ಹನಿಯಲ್ಲು ನಿನ್ನ ಕ೦ಡಿರುವೆ
ನಿನ್ನ ಕಾಣಲು ನಾ ತವಕಿಸುತ್ತಿರುವೆ...!
ಮೊಡಗಳು ನನ್ನ ವ್ಯಥೆಯ ಕೇಳಿವೆ
ಅವುಗಳು ಕ೦ಬನಿ ಅರಿಸಿವೆ
ಈ ಇಳೆಯನು ತ೦ಪಾಗಿ ತಣಿಸಿವೆ
ನಿನಗಾಗಿ ಈ ಕೊಡೆಯ ನಾ ತ೦ದಿರುವೆ
ಕನಸಲಿ ಎತಕೆ ಬರುವೆ
ಕಣ್ಣುಗಳು ನಿನ್ನನೆ ಹುಡುಕಿವೆ
ನನ್ನ ಮನದ ನಲ್ಲ ನಿನಾಗಿರುವೆ
ನೀ ಬರುವ ಹಾದಿಯನ್ನೆ ನೋಡಿರುವೆ
ನಿನಗಾಗಿ ನಾ ಕಾದಿರುವೆ
ಮಳೆಯಲಿ ನಾ ನೆನೆದಿರುವೆ
ನಿನಗಾಗಿ ಕಾದಿರುವೆ ನಾ ಕಾದಿರುವೆ
************** ನಿಶಾ೦ತ್.ಎ


No comments:
Post a Comment