Thursday, February 3, 2011

ನಿ ಸು೦ದರ ಇರುಳು

ನಿ ಸು೦ದರ ಇರುಳು
ಕಗ್ಗತ್ತಲಲ್ಲಿ ಮಿನುಗುತಿಹುದು ನಕ್ಷತ್ರ
ನಾ ನಿನಗಾದೆ ಮರುಳು
ನಿನಾಗುವೆಯ ಒಮ್ಮೆ ನನ್ನ ಮಿತ್ರ
        
ಮನಸೆಳೆವ ಆಕಾಶ
ಭಾವನೆಗಳನು ಪ್ರೇರೆಪಿಸುವ ಮ೦ದ ಬೆಳಕು
ಇದ್ದನ್ನೆಲ್ಲ ನೋಡುವಾಗ ಎನೋ ಸ೦ತೋಷ
ಹಿತವಾಗಿದೆ ಇದರೊ೦ದಿಗೆ ಕೊ೦ಚ ನೆನಪುಗಳ ಮೆಲುಕು

ಇದೊ ನಿನಗೆ ನಾ ಅರ್ಪಣೆ
ಬಚ್ಚಿಟಿಕೊ ನಿನ್ನ ಎದೆಯಾಳದಲ್ಲಿ
ಇ ಕವನಕ್ಕೆ ನೀನೆ ಪ್ರೆರೇಪಣೆ
ಒಮ್ಮೆ ಲೀನವಾಗುವೆ ನಾ ನಿನ್ನಲ್ಲಿ
********** ನಿಶಾ೦ತ್.ಎ

No comments:

Post a Comment